ತಮಿಳು ನಟ ಸೂರ್ಯ ಮತ್ತು ಕಾರ್ತಿ ಯಿಂದ ಒಂದು ಕೋಟಿ ರೂಪಾಯಿ ದೇಣಿಗೆ

ಕೋವಿಡ್ ಪರಿಹಾರಕ್ಕಾಗಿ ಮುಖ್ಯಮಂತ್ರಿ ನಿಧಿಗೆ ದೇಣಿಗೆ ನೀಡಿದ ಸೂಪರ್ ಸ್ಟಾರ್ಸ್

 | 
ತಮಿಳು ನಟ ಸೂರ್ಯ ಮತ್ತು ಕಾರ್ತಿ ಯಿಂದ ಒಂದು ಕೋಟಿ ರೂಪಾಯಿ ದೇಣಿಗೆ

ಚೆನ್ನೈ: ತಮಿಳು ನಟ ಶಿವಕುಮಾರ್ ಮತ್ತು ಅವರ ಮಕ್ಕಳಾದ ಸೂಪರ್ ಸ್ಟಾರ್ ಸೂರ್ಯ ಮತ್ತು ಕಾರ್ತಿ ಅವರು ಒಂದು ಕೋಟಿ ರೂಪಾಯಿಗಳ ದೇಣಿಗೆ ನೀಡಿದ್ದಾರೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಿದ ಅವರು, ಕೋವಿಡ್ ಪರಿಹಾರಕ್ಕಾಗಿ ಮುಖ್ಯಮಂತ್ರಿ ನಿಧಿಗೆ ಒಂದು ಕೋಟಿ ರೂಪಾಯಿಗಳ ದೇಣಿಗೆ ನೀಡಿದ್ದಾರೆ.

ಕೋವಿಡ್ ನಿಂದಾಗಿ ಶೂಟಿಂಗ್ ಬಂದ್ ಆಗಿದ್ದು, ಖಾರ್ತಿ ಸೂರ್ಯ ತಮ್ಮ ಸಮಾಜ ಮುಖಿ ಕಾರ್ಯಗಳನ್ನು ಮುಂದುವರಿಸಿದ್ದು, ಈಗ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಿ ಕಾರ್ತಿ, ಸೂರ್ಯ, ಶಿವಕುಮಾರ್ ಅವರು ಒಂದು ಮುಖ್ಯಮಂತ್ರಿ ಪರಹಾರ ನಿಧಿಗೆ ಕೋಟಿ ರೂಪಾಯಿಗಳ ಚೆಕ್ ನೀಡುತ್ತಿರುವ ಫೋಟೋ ವೈರಲ್ ಆಗಿದೆ.

ನಂತರ ಮಾತನಾಡಿರುವ ನಟ ಶಿವಕುಮಾರ ನಾನು ಮೂವತ್ತು ನವಲತ್ತು ವರ್ಷಗಳ ಹಿಂದೆ ಕರುಣಾನಿಧಯವರನ್ನು ಭೇಟಿ ಮಾಡಿದ್ದೆ, ಈಗ ಅವರ ಮಗನನ್ನು ಮೊದಲ ಬಾರಿ ಭೇಟಿ ಮಾಡುತ್ತಿರುವ ಸಂತೋಷ ತಂದಿದೆ, ಹಾಗೆ ತಮಿಳುನಾಡಿನಲ್ಲಿ ತಮಿಳಿಗರಿಗೆ ಉದ್ಯೋಗವಕಾಶ ನೀಡಬೇಕೆಂದು ಮುಖ್ಯಮಂತ್ರಿ ಸ್ಟಾಲಿನ್ ಬಳಿ ಕೇಳಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.