ಅತ್ಯಾಚಾರದ ಆರೋಪದ ಮೇಲೆ ಕಿರುತೆರೆ ನಟನ ಬಂಧನ
ಬ್ರಹ್ಮರಾಕ್ಷಸ 2 ನಟ ಪರ್ಲ್ ವಿ ಪೂರಿಯನ್ನು ಬಂಧಿಸಿದ ಮುಂಬೈ ಪೊಲಸರು

ಮುಂಬೈ: ಅತ್ಯಾಚಾರ ಮತ್ತು ಹಿಂಸೆ ನೀಡಿದ ಆರೋಪದ ಮೇಲೆ ಹಿಂದಿ ಕಿರುತೆರೆಯ ನಟ ಪರ್ಲ್ ವಿ ಪೂರಿ ಎಂಬುವವರನ್ನು ಬಂಧಿಸಲಾಗಿದೆ. ಬ್ರಹ್ಮರಾಕ್ಷಸ 2 ರಲ್ಲಿ ಕಾಣಿಸಿಕೊಂಡಿದ್ದ ನಟನ ವಿರುದ್ಧ ಹುಡಿಗಯ ಮೇಲೆ ಹತ್ಯಾಚಾರ ಆರೋಪ ಕೇಳಿ ಬಂದಿರುವ ಹಿನ್ನೆಲೆ ನಟ ಪರ್ಲ್ ವಿ ಪೂರಿ ಈಗ ಪೊಲೀಸರ ಕಸ್ಟಡಿಯಲ್ಲಿದ್ದಾರೆ.
ಆರಂಭದಲ್ಲಿ ಕಾರ್ ನಲ್ಲಿ ನನ್ನ ಮೇಲೆ ಅತ್ಯಚಾರ ನಡೆಯಿತು ನಂತರವೂ ನನ್ನ ಮೇಲೆ ಅತ್ಯಾಚಾರ ನಡೆಯಿತು ಎಂದು ಅತ್ಯಾಚರ ಸಂತ್ರಸ್ಥೆ ಹೇಳಿದ್ದು, ಮುಂಬೈ ಮಲಡ್ ನಲ್ಲಿರುವ ಮಲ್ವಾನಿ ಪೊಲೀಸರು ನಟ ಪರ್ಲ್ ವಿ ಪೂರಿ ಸೇರಿದಂತೆ ಆರು ಜನರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವ ಪೊಲೀಸರು, ಆರು ಜನ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಮಲ್ವಾನಿ ಪೊಲಿಸ್ ಠಾಣೆಯಲ್ಲಿ ಅತ್ಯಾಚಾರಕ್ಕೊಳಗಾರುವ ಸಂತ್ರಸ್ಥೆ ಮತ್ತು ಕುಟುಂಬಸ್ಥರು ದೂರು ದಾಖಲಿಸಿದ ನಂತರ ಶುಕ್ರವಾರ ರಾತ್ರಿಯೇ ಪರ್ಲ್ ವಿ ಪೂರಿ ಬಂಧಿಸಲಾಗಿತ್ತು. ಪರ್ಲ್ ವಿ ಪೂರಿ 2013 ರಿಂದ ಫಿರ್ ಬಿನಾ ಮಾನೆ…. ಬತ್ತಮೀಜ್ ದಿ, ದಿಲ್ ಕಿ ನಜಾರ ಸೆ ಖುಬ್ ಸೂರತ್, ಬ್ರಹ್ಮರಾಕ್ಷಸ 2 ದಾರಾವಾಹಿಗಳು ಸೇರಿದಂತೆ ಹಲವು ಟಿವಿ ಶೋ ಕಾಣಿಸಿಕೊಂಡಿದ್ದಾರೆ.