ಇಂದುವದನ ಫಸ್ಟ್ ಲುಕ್ ನಲ್ಲಿ ವರೂಣ್ ಸಂದೇಶ್ ಬೋಲ್ಡ್ ಅವತಾರ

ನೋಡುಗರನ್ನು ಅರ್ಕರ್ಷಿಸುತ್ತಿದೆ ಇಂದುವದನ ಚಿತ್ರದ ಪೋಸ್ಟರ್

 | 
Induvadana First look

ನಟ ವರೂಣ್ ಸಂದೇಶ್ ಅವರ ಅಪ್ ಕಮ್ಮಿಂಗ್ ಸಿನೆಮಾ ‘ಇಂದುವದನ’ ದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪೋಸ್ಟರ್ ಟ್ವಿಟ್ಟರ್ ನಲ್ಲಿ ಅನಾವರಣಗೊಂಡಿದೆ. ಈ ಪೋಸ್ಟರ್ ನಲ್ಲಿ ನಟ ವರೂಣ್ ಶರ್ಟ್ ಇಲ್ಲದ ಬರಿ ಮೈನಲ್ಲಿ ಉತ್ಕಟಭಾವದಿಂದ ತನ್ನ ಹುಡುಗಿಯನ್ನು ಅಪ್ಪಿಕೊಂಡಿದ್ದಾನೆ. ಪೋಸ್ಟರ್ ತುಂಬಾ ಬೋಲ್ಡ್ ಆಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ.

ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಹೊಸ ನಟಿಯನ್ನು ಪರಿಚಯಿಸುತ್ತಿದ್ದು, ಫರ್ನಾಝ್ ಸೆಟ್ಟಿ ಎಂಬ ಗ್ಲಾಮರ್ ತಾರೆ ವರೂಣ್ ಎದರು ತೆರೆ ಹಂಚಿಕೊಳ್ಳಲಿದ್ದಾರೆ. ಈ ಪೋಸ್ಟರ್ ನಲ್ಲಿ ನಟಿ ಫರ್ನಾಝ್ ಸೆಟ್ಟಿ ಸಹ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಪೋಸ್ಟ್ ನೋಡಿದವರು ಮತ್ತೆ ಮತ್ತೆ ನೋಡಬೇಕೆನ್ನಿಸುವಂತ ಕಚ್ಚಾ ತೀವ್ರತೆ ಇದರಲ್ಲಿದೆ.

ಈ ಪೋಸ್ಟರ್ ನಲ್ಲಿ ಜೋಡಿ ರೆಟ್ರೋ ಫ್ಯಾಷನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರ ವರೂಣ್ ಈವರೆಗೆ ನಟಿಸಿರುವ ಚಿತ್ರಗಳಿಗಿಂದ ತುಂಬಾ ವಿಭಿನ್ನವಾದ ಚಿತ್ರ ಎಂದೆನಿಸುತ್ತದೆ. ಈ ಚಲನಚಿತ್ರವನ್ನು ಎಂಎಸ್ ಆರ್ ನಿರ್ದೇಶನ ಮಾಡುತ್ತಿದ್ದು, ಶ್ರೀ ಬಾಲಾಜಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮಾಧವಿ ಅದುರ್ತಿ ನಿರ್ಮಾಣ ಮಾಡುತ್ತಿದ್ದಾರೆ. ಕಥೆ ಮತ್ತು ಚಿತ್ರಕಥೆಯನ್ನು ಸತೀಶ್ ಅಕತಿ ಬರೆದಿದ್ದಾರೆ. ಶಿವಕಾಕಿನಿ ಅವರಿ ಸಂಗೀತ ನೀಡುತ್ತಿದ್ದಾರೆ.

ವರೂಣ್ ಟಾಲಿವುಡ್ ನ ಜನಪ್ರಿಯ ನಟನಾಗಿದ್ದು, 2007ರಲ್ಲಿ ಹ್ಯಾಪಿಡೇಸ್ ಮುಲಕ ಟಾಲಿವುಡ್ ಚಿತ್ರರಂಗ ಪ್ರವೇಶಿಸಿದ್ದರು, ನಂತರ ಮಾಯಿಂದಿ ಈ ವೇಲಾ, ಡಿ ಫಾರ್ ದೋಪಿಡಿ, ಕೊಥ ಬಂಗಾರು ಲೋಕಂ, ಕುರ್ರುಡು, ಪಂಡವುಲು ಪಂಡವುಲು ಥುಮ್ಮೆಡಾ ಚಿತ್ರಗಳಲ್ಲಿ ನಟಿಸಿ 2015 ರಲ್ಲಿ ಮಾಮ ಮಂಚು ಅಲ್ಲುಡು ಕಂಚು ಚಿತ್ರದಲ್ಲಿ ನಟಿಸಿ ಚಿತ್ರರಂಗದಿಂದ ಕಣ್ಮರೆಯಾಗಿದ್ದ ಅವರು ತುಂಬಾ ದಿನಗಳ ವರೆಗೆ ಚಿತ್ರರಂಗದಿಂದ ದೂರ ಸರಿದದ್ದರು ಆದ್ರೆ ಈಗ ದಿಢೀರ್ ಅಂತಾ ಬೋಲ್ಡ್ ಲುಕ್ ಮೂಲಕ ಮತ್ತೆ ಎಂಟ್ರಿ ನೀಡಿ ಗಮನ ಸೆಳೆದಿದ್ದಾರೆ.