ವಿಜಯ್ “ದಳಪತಿ 65” ಈಗ “ಬೀಸ್ಟ್”

ಬೀಸ್ಟ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರ ತಂಡ

 | 
Vijay thalapathi's Beast poster

ಚೆನ್ನೈ: ತಮಿಳ್ ಸೂಪರ್ ಸ್ಟಾರ್ ದಳಪತಿ ವಿಜಯ್ ಬಹುನಿರೀಕ್ಷಿತ ಬೀಸ್ಟ್ ಚಿತ್ರದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಹೆಸರನ್ನು ಹಿಂದೆ ದಳಪತಿ 65 ಎಂದು ಹೆಸರಿಡಲಾಗಿತ್ತು. ಆದರೆ ವಿಜಯ್ ಹುಟ್ಟುಹಬ್ಬಕ್ಕೆ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಬೀಸ್ಟ್ ಎಂದು ಚಿತ್ರದ ಹೆಸರನ್ನು ರಿವೀಲ್ ಮಾಡಿದೆ.

ಈ ಪೋಸ್ಟರ್ ನಲ್ಲಿ ದಳಪತಿ ವಿಜಯ್ ಅವರು ಗನ್ ಹಿಡಿದು ರಗಡ್ ಲುಕ್ ನಲ್ಲಿ ನಿಂತಿದ್ದಾರೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಮಳಯಾಳಂ ನಟಿ ಅಪರ್ಣಾ ದಾಸ್, ಶೈನ್ ಟಾಮ್ ಚಾಕ್ಕೋ ಮತ್ತು ಯೋಗಿ ಬಾಬು ನಟಿಸುತ್ತಿದ್ದಾರೆ.

ಅನಿರುದ್ಧ ರವಿಚಂದರ್ ಸಂಗೀತ ನೀಡುತ್ತಿದ್ದು, ಸನ್ ಪಿಕ್ಚರ್ಸ್ ಇದರ ನಿರ್ಮಾಣದ ಹೊಣೆ ಹೊತ್ತಿದೆ.