ಗುಟ್ಟಾಗಿ ಮದುವೆಯಾದ ನಟಿ ಯಾಮಿ ಗೌತಮಿ

ನಿರ್ದೇಶಕ ಆದಿತ್ಯಾ ದಾರ್ ರನ್ನು ವರಿಸಿದ ಯಾಮಿ

 | 
yami gautami wedding

ಕನ್ನಡದಲ್ಲಿ ಉಲ್ಲಾಸ ಉತ್ಸಾಹ ಚಿತ್ರದಲ್ಲಿ ನಟಿಸಿದ್ದ ನಟಿ ಯಾಮಿ ಗೌತಮಿ ಬಾಲಿವುಡ್ ಚಿತ್ರ ನಿರ್ದೇಶಕ ಆದಿತ್ಯಾ ದಾರ್ ಅವರನ್ನು ಶುಕ್ರವಾರ ಗುಟ್ಟಾಗಿ ಮದುವೆಯಾಗಿದ್ದಾರೆ. ಮದುವೆ ಸಮಾರಂಭದ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬಳಿಕ ಯಾಮಿ ಗೌತಮಿಯ ಮದುವೆ ವಿಷಯ ಬಹಿರಂಗವಾಗಿದೆ.

ಟ್ವಿಟ್ಟರ್ ನಲ್ಲಿ ಮದುವೆಯ ಪೋಟೋಗಳನ್ನು ಹಂಚಿಕೊಂಡಿರುವ ಯಾಮಿ ಗೌತಮಿ, ನಮ್ಮ ಕುಟುಂಬದ ಆಶೀರ್ವಾದದೊಂದಿಗೆ ನಾನು ಮದುವೆಯಾಗಿದ್ದಾವೆ. ಇಂದು ನಡೆದ ನಿಕಟವರ್ತಿಗಳ ಸಮ್ಮುಖದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನಮ್ಮ ವಿವಾಹ ನೆರವೇರಿದೆ. ಪ್ರೀತಿ-ಸ್ನೇಹದ ನಮ್ಮ ಈ ಹೊಸ ಪಯಣಕ್ಕೆ ನಿಮ್ಮೆಲರ ಆಶಿರ್ವಾದ ಬೇಕು ಎಂದು ಟ್ವೀಟ್ ಮಾಡುವ ಮೂಲಕ ಎಲ್ಲರ ಆಶೀರ್ವಾದ ಕೋರಿದ್ದಾರೆ.

ಈ ನವ ವಧುವವರಿಗೆ ಹಲವು ಬಾಲಿವುಡ್ ನ ಸೆಲಬ್ರಿಟಿಗಳು, ಗಣ್ಯರು ಸೇರಿದಂತೆ ಹಲವರು ಅಭಿನಂಧನೆ ಸಲ್ಲಿಸಿದ್ದಾರೆ.