ಕನ್ನಯ್ಯ ಮತ್ತು ಜಿಗ್ನೇಶ್ ಮತ್ತು ಕಾಂಗ್ರೆಸ್ ಮತ್ತು ಪಕ್ಷದ ಭವಿಷ್ಯ 

ಬಿಜೆಪಿ ನಿರಂತರವಾಗಿ ಕಾಂಗ್ರೆಸ್ ಮೇಲೆ ದಾಳಿ ಮಾಡುತ್ತಿದೆ. ಆದರೆ ಅಷ್ಟೇ ವಿರೋಧವನ್ನು ಪ್ರಾದೇಶಿಕ ಪಕ್ಷಗಳ ಮೇಲೆ ಮಾಡುತ್ತಿಲ್ಲ, ಎಂಬ ಮಾತಿದೆ. ಇದು ನಿಜ ಕೂಡಾ, ಆದರೆ ಇದು ತಾತ್ಕಾಲಿಕ ಎನ್ನುವುದನ್ನು ಪ್ರಾದೇಶಿಕ ಪಕ್ಷಗಳು ಮರೆಯಬಾರದು. ಒಮ್ಮೆ ಕಾಂಗ್ರೆಸ್ ಸಂಪೂರ್ಣ ‌ನೆಲ ಕಚ್ಚಿದರೆ ಮುಂದಿನ ಸರದಿ ಪ್ರಾದೇಶಿಕ ಪಕ್ಷಗಳದು.

 | 
kanaya

ಕನ್ನಯ್ಯ ಮತ್ತು ಜಿಗ್ನೇಶ್ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಇವರಿಬ್ಬರೂ ಬಹುಶಃ ಕನಿಷ್ಟ ಒಂದೂವರೆ ವರ್ಷದಿಂದ, ಎಲ್ಲವನ್ನೂ ಗಮನಿಸುತ್ತ, ಒಂದು ತೀರ್ಮಾನಕ್ಕೆ ಬರಲು ಕಾದಿರುವಂತಿದೆ. ಅವರು ಬಿಟ್ಟು ಬಂದ ಪಕ್ಷದವರು, ಮತ್ತು ಬಿಜೆಪಿಯವರು ಅವರ ವಿರುದ್ಧ ಬರೆಯುತ್ತಿರುವುದು." ನವ ಮೀಡಿಯಾ ಕಲ್ಚರ್" ಭಾಗವಷ್ಟೇ.

ಕಾಂಗ್ರೆಸ್ ಪಕ್ಷ ಈಗ ಏನು ಮಾಡುತ್ತದೆ. ಎನ್ನುವುದು ದೇಶದ ರಾಜಕೀಯ ಪರಿಸ್ಥಿತಿಯಲ್ಲಿ ಬಹಳ ಮುಖ್ಯವಾದುದು. ಯಾಕೆಂದರೆ ಈಗಲೂ  ದೇಶಾದ್ಯಂತ ಶೇ ಇಪ್ಪತ್ತರಿಂದ ಮೂವತ್ತರಷ್ಟು ಮತಗಳ  ತಳಹದಿಯಿರುವ ಪಕ್ಷವದು.

ಇಷ್ಟೇ ಹೇಳಿದರೆ ಸಾಲದು, ಕಾಂಗ್ರೆಸ್ ಒಂದು ರೀತಿಯಲ್ಲಿ ಮರುಹುಟ್ಟು ಪಡೆಯುವುದು ಅವಶ್ಯ. ಆದರೆ ಹೇಗೆ.?

ಬಿಜೆಪಿ ನಿರಂತರವಾಗಿ ಕಾಂಗ್ರೆಸ್ ಮೇಲೆ ದಾಳಿ ಮಾಡುತ್ತಿದೆ. ಆದರೆ ಅಷ್ಟೇ ವಿರೋಧವನ್ನು ಪ್ರಾದೇಶಿಕ ಪಕ್ಷಗಳ ಮೇಲೆ ಮಾಡುತ್ತಿಲ್ಲ, ಎಂಬ ಮಾತಿದೆ. ಇದು ನಿಜ ಕೂಡಾ, ಆದರೆ ಇದು ತಾತ್ಕಾಲಿಕ ಎನ್ನುವುದನ್ನು ಪ್ರಾದೇಶಿಕ ಪಕ್ಷಗಳು ಮರೆಯಬಾರದು. ಒಮ್ಮೆ ಕಾಂಗ್ರೆಸ್ ಸಂಪೂರ್ಣ ‌ನೆಲ ಕಚ್ಚಿದರೆ ಮುಂದಿನ ಸರದಿ ಪ್ರಾದೇಶಿಕ ಪಕ್ಷಗಳದು.

ಹಾಗೇಯೇ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಪಕ್ಷವನ್ನೇ ವಿರೋಧಿಸುತ್ತವೆ ಅಷ್ಟೇ ವಿರೋಧವನ್ನು ಬಿಜೆಪಿ ಯ ಬಗ್ಗೆ ತೋರುವುದಿಲ್ಲ ಎಂಬ ಮಾತೂ ಇದೆ ಅದೂ ಕೂಡಾ ಬಹುಮಟ್ಟಿಗೆ ನಿಜ.
ಇದಕ್ಕೆ ಹಲವು ದಶಕಗಳ ಕಾರಣಗಳಿವೆ.
ಈ ಪಕ್ಷಗಳು ಹುಟ್ಟಿ ಬೆಳೆದದ್ದೇ ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ, ಅಲ್ಲದೆ ಕಾಂಗ್ರೆಸ್ ಪಕ್ಷ ಪ್ರಬಲವಾಗಿದ್ದಾಗ ಅದೂ ಕೂಡ ನಿರಂತರವಾಗಿ ಹಣಿದದ್ದು ಪ್ರಾದೇಶಿಕ ಪಕ್ಷ ಮತ್ತು ಎಡ ಪಕ್ಷಗಳನ್ನೇ.
ಹೋಗಲಿ ತನ್ನದೇ ಪಕ್ಷದ, ದೇವರಾಜ ಅರಸು, ಶರದ್ ಪವಾರ್, ಮಮತಾ ಬ್ಯಾನರ್ಜಿಯಂತವರನ್ನು ಉಳಿಸಿಕೊಳ್ಳಲು ಆ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಇದನ್ನು ಈಗಲಾದರೂ ಗಂಭೀರವಾಗಿ ಯೋಚಿಸಬೇಕು.

ಬಿಜೆಪಿ ಯಾಕೆ ಕಾಂಗ್ರೆಸ್ ಅನ್ನು ವಿರೋಧಿಸುತ್ತಿದೆ, ಎಂದರೆ  ಅದು ಕಾಂಗ್ರೆಸ್ ನ ಮತ ಬ್ಯಾಂಕ್ ಗಳನ್ನು ಸಾಕಷ್ಟು ತನ್ನತ್ತ ಎಳೆದುಕೊಂಡಿದೆ. ಅದರಲ್ಲಿ ಇತ್ತೀಚೆಗೆ  ಬಹಳ ದೊಡ್ಡ ಪ್ರಮಾಣದಲ್ಲಿಯೇ ದಲಿತ ಮತಗಳನ್ನು, ಹಿಂದುಳಿದವರ ಮತಗಳನ್ನು ಸೆಳೆದಿದೆ. 
ಮುಸ್ಲಿಂ ಮತಗಳು ಬೇಡವೆಂದು ನೇರವಾಗಿ ಹೇಳಿದರೂ ಆ ಮತಗಳು ಮೊದಲಿನಂತೆ ಇಡುಗಂಟಾಗಿ ಕಾಂಗ್ರೆಸ್ ಗೆ ಹೋಗದಂತೆ ವ್ಯವಸ್ಥೆ ಮಾಡಿಕೊಂಡಿದೆ. ಈ ವಿಚಾರದಲ್ಲಿ ಓವೈಸಿ ಯಂತವರು ಮಾತ್ರವಲ್ಲ ಇತರ ಪ್ರಾದೇಶಿಕ ಪಕ್ಷಗಳೂ ಬಿಜೆಪಿಗೆ ಸಹಕಾರಿಯಾಗಿವೆ.

ಈಗ ಕಾಂಗ್ರೆಸ್ ಎಷ್ಟು ಬಲಹೀನವಾಗುತ್ತದೋ ಅಷ್ಟು ಲಾಭ ಬಿಜೆಪಿಗೆ ಆಗುತ್ತಿದೆ. (ಇದಕ್ಕೆ ಸದ್ಯಕ್ಕೆ ತಮಿಳು ನಾಡು ಆಂದ್ರ ಮತ್ತು ಪಶ್ಚಿಮ ಬಂಗಾಳ ಮಾತ್ರ ವಿರುದ್ಧವಾಗಿವೆ.) ಅದಕ್ಕಾಗಿಯೇ ಬಿಜೆಪಿ ಕಾಂಗ್ರೆಸ್ ವಿನಾಶಕ್ಕೆ ಟೊಂಕ ಕಟ್ಟಿದೆ.
ಒಂದು ವೇಳೆ ಕಾಂಗ್ರೆಸ್ ಮುಗಿದರೆ ? ಆಗ ಪ್ರಾದೇಶಿಕ ಶಕ್ತಿಗಳ ಮಾರಿಹಬ್ಬ ಇದೆ.

ಈಗಲಾದರೂ ಕಾಂಗ್ರೆಸ್ ಹಳೆಯ ಚಾಳಿಗಳನ್ನು ಬಿಟ್ಟಿದ್ದೇನೆಂದು ನಂಬಿಕೆ ಬರುವಂತೆ ವರ್ತಿಸಬೇಕು. ಯುವಕರು ಕಾಂಗ್ರೆಸ್ ಕಡೆಗೆ ಬರುವಂತೆ ಮಾಡಲು ಇದು ಸರಿಯಾದ ಮತ್ತು ಅತ್ಯಗತ್ಯ ದ ಸಮಯ.

ಚುನಾವಣೆ ಹತ್ತಿರವಾದಾಗಲೆಲ್ಲ ಬಿಜೆಪಿ ಸಹಾಯವಾಗುವಂತ ಹೇಳಿಕೆ ನೀಡುತ್ತಿರುವ ಹಳೆಯ ತಲೆಗಳೇ ಕಾಂಗ್ರೆಸ್ ಗೆ ತಲೆನೋವು.
ಈಗ ಪಂಜಾಬ್ ನಂತಹ ರಾಜ್ಯಗಳಲ್ಲಿ ಆಗುತ್ತಿರುವುದು ನಿರೀಕ್ಷಿತ, ಸಿದ್ದು ಅಣ್ಣ ಹಜಾರೆಯ ತಮ್ಮನಾಗಿ ವರ್ತಿಸುತ್ತಿದ್ದಾನೆಂಬ ಅರಿವು ಕಾಂಗ್ರೆಸ್ ಗೆ ಇರಬೇಕಿತ್ತು.

ಇಷ್ಟೆಲ್ಲ ಹೇಳುವ ಅಗತ್ಯ ಏನೆಂದರೆ, ಚುನಾವಣೆ ಮತ್ತು ಅಧಿಕಾರ ಮತಗಳ ಸಂಖ್ಯೆಯ ‌ಮೇಲೆ ನಿರ್ಧಾರ ವಾಗುವುದು. ಈಗಲೂ ಒಂದು ವಿಶಾಲವಾದ ಬೇಸ್ ಇರುವುದು ಕಾಂಗ್ರೆಸ್ ಗೆ.

ಚುನಾವಣೆಯ ಮತ್ತು ಅಧಿಕಾರ ಹಿಡಿಯುವ ವಿಚಾರದಲ್ಲಿ ಎಲ್ಲ ಪಕ್ಷಗಳೂ ಅವಕಾಶವಾದಿಗಳೆ, 

ಕೊನೆಯದಾಗಿ ಚುನಾವಣೆಯ ತೀರ್ಮಾನ ಬರುವುದು , ಜನರ ನಡುವಿನ ಕಾರ್ಯಾಚಾರಣೆಯಿಂದ,  
ಬುದ್ದಿವಂತರ ಹೇಳಿಕೆ, ಬರಹಗಳಿಂದ ಅಲ್ಲ. ನಾನಾ ಸಿದ್ಧಾಂತಗಳನ್ನು ಹಿಡಿದು ಮಾಡುವ ವಾಗ್ಯುದ್ಧಗಳಿಂದ ಅಲ್ಲ.

ದೊಡ್ಡ ಶತ್ರುವನ್ನು ಸೋಲಿಸಲು 1977 ರಲ್ಲಿ ತಾತ್ಕಾಲಿಕ ವಾಗಿಯಾದರೂ ಎಲ್ಲರೂ ಒಂದಾದರು. 
ಈಗ ಅಂತಹ ಅಗತ್ಯ ಇದೆ. ದುರಂತ ವೆಂದರೆ ಅಂತಹ ಹೋರಾಟದ ಮುನ್ನಡೆಸುವ ಜವಾಬ್ದಾರಿ ಯೂ ಕಾಂಗ್ರೆಸ್ ಮೇಲಿದೆ.
ಅವರಿಗೆ ಅರಿವು ಮೂಡಲಿ.