ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಭಗವಂತ್‌ ಮಾನ್‌ ಪ್ರಮಾಣ ವಚನ: ಇಂದಿನಿಂದ ಅಪ್ ಕಾ ಪಂಜಾಬ್!

ಭಗವಂತ್ ಮಾನ್ ಅವರು ಪಂಜಾಬ್‌ನ 18 ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲುತ್ತಿದ್ದು,ಪ್ರಮಾಣ ವಚನ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಪ್ ಪಕ್ಷದ ಇತರ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಇನ್ನೂ ಕಾರ್ಯಕ್ರಮದಲ್ಲಿ ಭಾಗಿಯಾಗುವ ಆಮ್ ಆದ್ಮಿ
 | 
bhagvanth mann

ಸಿಖ್ಖರ ನಾಡಿನಲ್ಲಿ ಇಂದು ಅಧಿಕೃತವಾಗಿ ಅಧಿಕಾರದ ಗದ್ದುಗೆಗೆ AAP. 


ಸ್ವಾತಂತ್ರ್ಯ ಸೇನಾನಿ ಭಗತ್‌ಸಿಂಗ್‌ ಹುಟ್ಟೂರು ಖಟ್ಕರ್‌ ಕಳನ್‌ನಲ್ಲಿ ಭಗವಂತ್‌ ಮಾನ್ ಮಖ್ಯಮಂತ್ರಿಯಾಗಿ ಪ್ರಮಾಣ ವಚನ.


ಸಮಾರಂಭಕ್ಕೆ 4 ಲಕ್ಷ ಜನರು ಭಾಗಿಯಾಗುವ ನೀರಿಕ್ಷೆ.


ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಪ್ ಪಕ್ಷದ ಇತರ ಹಿರಿಯ ನಾಯಕರು ಭಾಗಿ.

ಅಡಳಿತರೂಡ ಕಾಂಗ್ರೆಸ್ ಪಕ್ಷವನ್ನು ಹೇಳಹೆಸರಿಲ್ಲದೆ ಗುಡಿಸಿ ಹಾಕಿರುವ ಅಮ್ ಆದ್ಮಿ ಪಕ್ಷವು(AAP),ಸಿಖ್ಖರ ನಾಡಿನಲ್ಲಿ ಇಂದು ಅಧಿಕೃತವಾಗಿ ಅಧಿಕಾರದ ಗದ್ದುಗೆ ಏರುತ್ತಿದೆ. ಸ್ವಾತಂತ್ರ್ಯ ಸೇನಾನಿ ಭಗತ್‌ಸಿಂಗ್‌ ಹುಟ್ಟೂರು ಖಾಟ್ಕರ್‌ ಕಾಲನ್‌ನಲ್ಲಿ AAP ನಾಯಕ ಭಗವಂತ್‌ ಮಾನ್‌ ಬುಧವಾರ ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಿಸಲಿದ್ದಾರೆ.ಇವರ ಜತೆ 18 ಕ್ಕೂ ಹೆಚ್ಚು ಸಚಿವರೂ ಸಹ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದ್ದು, ಸಮಾರಂಭಕ್ಕೆ 4 ಲಕ್ಷ ಜನರು ಭಾಗಿಯಾಗುವ ನೀರಿಕ್ಷೆ ಇದೆ.

ಭಗವಂತ್ ಮಾನ್ ಅವರು ಪಂಜಾಬ್‌ನ 18 ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲುತ್ತಿದ್ದು,ಪ್ರಮಾಣ ವಚನ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಪ್ ಪಕ್ಷದ ಇತರ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಇನ್ನೂ ಕಾರ್ಯಕ್ರಮದಲ್ಲಿ ಭಾಗಿಯಾಗುವ ಆಮ್ ಆದ್ಮಿ ಪಕ್ಷದ(ಎಎಪಿ) ಪುರುಷ ಕಾರ್ಯಕರ್ತರು ಹಳದಿ ಬಣ್ಣದ ಪೇಟಗಳು ಮತ್ತು ಮಹಿಳೆಯರು ಹಳದಿ ದುಪಟ್ಟಾಗಳನ್ನು ಧರಿಸುವಂತೆ ಮಾನ್  ಕೇಳಿಕೊಂಡಿದ್ದಾರೆ. ಪ್ರಮಾಣವಚನ ಸಮಾರಂಭಕ್ಕೆ ಖಟ್ಕರ್ ಕಳನ್ ಗ್ರಾಮದ ಭಗತ್ ಸಿಂಗ್ ಸ್ಮಾರಕದ ಬಳಿ 40 ಎಕರೆ ಪ್ರದೇಶದಲ್ಲಿ ವೇದಿಕೆ ನಿರ್ಮಿಸಲಾಗಿದ್ದು, ಹಳದಿ ಪರದೆಗಳು ಮತ್ತು 50,000 ಕುರ್ಚಿಗಳನ್ನು ನಿರ್ಮಿಸಲಾಗಿದೆ.


ಗುರುವಾರ ಪಂಜಾಬ್ ವಿಧಾನ ಸಭಾ ಅಧಿವೇಶನ ನಡೆಯಲ್ಲಿದ್ದು, ಶಾಸಕರ ಪ್ರಮಾಣ ವಚನ ಹಾಗೂ ಖಾತೆ ಹಂಚಿಕೆ ನಡೆಯಲಿದೆ. ಪಂಚರಾಜ್ಯರ ಚುನಾವಣೆಯಲ್ಲಿ 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿAAP, ಕಾಂಗ್ರೆಸ್-ಶಿರೋಮಣಿ ಅಕಾಲಿದಳ-ಬಿಜೆಪಿ ಪಕ್ಷಗಳನ್ನು ದೂಳಿಪಟ ಮಾಡಿ 92 ಸ್ಥಾನಗಳನ್ನು ಗೆದ್ದಿತ್ತು.