ಮಾರ್ಚ್ 4ಕ್ಕೆ ಸಿಎಂ ಬೊಮ್ಮಯಿ ಚೊಚ್ಚಲ ಬಜೆಟ್ ಮಂಡನೆ

ಶಾಲಾ-ಕಾಲೇಜು ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್, ರೈತರ ಸಾಲಮನ್ನಾ, ಸ್ತ್ರೀ ಶಕ್ತಿ ಸಂಘಗಳಿಗೆ ಅರ್ಥಿಕ ಉತ್ತೇಜನ, ರೈತರಿಗೆ ಧನ ಸಹಾಯದಂತ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿ ಮಾಡಲಿದ್ದಾರೆ ಎಂಬ ನೀರಿಕ್ಷೆ ಇದೆ. ಅಲ್ಲದೇ ಬಿಜೆಪಿ ಸರ್ಕಾರ ನೀರಾವರಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ
 | 
karnataka cm

* ಚುನಾವಣ ವರ್ಷವಾದ ಕಾರಣ ಭರಪೂರ ಯೋಜನೆಗಳ ಬಜೆಟ್ ನಿರೀಕ್ಷೆ!

* ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್, ರೈತರ ಸಾಲಮನ್ನಾ, ಸ್ತ್ರೀ ಶಕ್ತಿ ಸಂಘಗಳಿಗೆ ಅರ್ಥಿಕ ಉತ್ತೇಜನದಂತ ಜನಪ್ರಿಯ ಕಾರ್ಯಕ್ರಮಗಳ ಜಾರಿ?!

* ಬಜೆಟ್ ಅಧಿವೇಶನದ ನಂತರ ಸಚಿವ ಸಂಪುಟ ವಿಸ್ತರಣೆಗೆ ಬೊಮ್ಮಯಿ ಪ್ಲಾನ್!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಅನ್ನು ಮಾರ್ಚ್ 4 ರಂದು ಮಂಡಿಸಲಿದ್ದಾರೆ. ವಿಧಾನಸಭಾ ಚುನಾವಣೆಗೆ 14 ತಿಂಗಳಷ್ಟೇ ಬಾಕಿಯಿದ್ದು, ಚುನಾವಣ ವರ್ಷವಾದ ಕಾರಣ ಭರಪೂರ ಯೋಜನೆಗಳ ಬಜೆಟ್ ಮಂಡಿಸುವ ನಿರೀಕ್ಷೆ ಇದೆ. ಇನ್ನೂ ಚುನವಾಣೆ 6 ತಿಂಗಳು ಇರುವಂತೆ ಶಾಸಕರ ಪಕ್ಷಾಂತರ ಪರ್ವ ಹೆಚ್ಚಾಗಿ, ರಾಷ್ಟ್ರಪತಿ ಅಡಳಿತ ಹೇರುವ ಸಂಭವವಿದೆ ಎನ್ನಲಾಗುತ್ತೀದ್ದು,  ಸರ್ಕಾರದ ನೀತಿಗಳನ್ನು ವಿವರಿಸಲು ಮತ್ತು ಮತದಾರರನ್ನು ಓಲೈಸಲು ಬೊಮ್ಮಯಿಯವರಿಗೆ ಈ ಬಜೆಟ್ ಕೊನೆಯ ಅವಕಾಶವಾಗಲಿದೆ.

ಶಾಲಾ-ಕಾಲೇಜು ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್, ರೈತರ ಸಾಲಮನ್ನಾ, ಸ್ತ್ರೀ ಶಕ್ತಿ ಸಂಘಗಳಿಗೆ ಅರ್ಥಿಕ ಉತ್ತೇಜನ, ರೈತರಿಗೆ ಧನ ಸಹಾಯದಂತ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿ ಮಾಡಲಿದ್ದಾರೆ ಎಂಬ ನೀರಿಕ್ಷೆ ಇದೆ. ಅಲ್ಲದೇ ಬಿಜೆಪಿ ಸರ್ಕಾರ ನೀರಾವರಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ ಎಂದು ಕಾಂಗ್ರೇಸ್  ಆರೋಪಿಸಿ  ಪ್ರಚಾರ ಮಾಡುತ್ತಿದ್ದು, ಇದರಿಂದ ಹೊರಬರಲು ಬೊಮ್ಮಾಯಿ ಅವರು ನೀರಾವರಿ ಯೋಜನೆಗಳಿಗೆ ಹೆಚ್ಚು ಹಣ ಘೋಷಿಸುವ ನಿರೀಕ್ಷೆಯಿದೆ.  ಕಾಂಗ್ರೆಸ್ ಇದನ್ನು ಚುನಾವಣಾ ವಿಷಯವನ್ನಾಗಿ ಮಾಡಲು ಬಯಸಿದೆ ಅದರಂತೆ ಮೇಕೆದಾಟು ಪಾದಯಾತ್ರೆ ಕಾರ್ಯಕ್ರಮಗಳನ್ನು ಈಗಾಗಲೇ ರೂಪಿಸಿದೆ.
 ಈ ವರ್ಷಾಂತ್ಯದಲ್ಲಿ ನಡೆಯಲಿರುವ ಬಿಬಿಎಂಪಿ ಚುನಾವಣೆಯು  ಮುಂಬರುವ ಸಾರ್ವತ್ರಿಕ  ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎನ್ನಲಾಗುತ್ತಿದ್ದು,  ಈ ಹಿನ್ನಲೆ ಬೆಂಗಳೂರು ನಗರಕ್ಕೆ ಸಿಎಂ ಹೆಚ್ಚಿನ ಗಮನ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.  ಬೊಮ್ಮಾಯಿ ಅವರು ಉಪನಗರ ರೈಲು ಯೋಜನೆಗೆ ಯೋಗ್ಯವಾದ ಹಂಚಿಕೆಯನ್ನು ಮಾಡುವುದರ ಹೊರತಾಗಿ ಬಿ ಖಾಟಾ ಆಸ್ತಿಗಳನ್ನು ಎ ಖಾತಾಗೆ ಕ್ರಮಬದ್ಧಗೊಳಿಸಲು ಮತ್ತು ನವೀಕರಿಸಲು ಯೋಜನೆಯನ್ನು ಪ್ರಕಟಿಸಬಹುದು.
 ಫೆ.25ರಂದು ದೆಹಲಿಗೆ ಭೇಟಿ ಕೊಟ್ಟಿರುವ ಸಿಎಂ ಬೊಮ್ಮಾಯಿ ಬಜೆಟ್ ಮಂಡನೆಗೆ  ಮುನ್ನ  ರಾಷ್ಟ್ರೀಯ ನಾಯಕರುಗಳ ಸಲಹೆ ಪಡೆದಿದ್ದಾರೆ. ಅದಲ್ಲದೇ ಹಿಜಾಬ್ ಮತ್ತು ಧ್ವಜಾರೋಹಣ ವಿವಾದಗಳ ಕುರಿತು ಚರ್ಚಿಸಲು ಬೊಮ್ಮಾಯಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದು,  ಸಂಪುಟ ವಿಸ್ತರಣೆ/ಪುನರ್ರಚನೆಗೆ ಅನುಮತಿ ಪಡೆಯಲು ಪಕ್ಷದ ಹಿರಿಯ ಪದಾಧಿಕಾರಿಗಳನ್ನ ಭೇಟಿಯಾಗಿದ್ದರು, ಬಜೆಟ್ ಅಧಿವೇಶನದ ನಂತರವೇ  ಸಂಪುಟ ವಿಸ್ತರಣೆ ನಡೆಯಲಿದೆ  ಎಂದು ಮೂಲಗಳು ತಿಳಿಸಿವೆ.