ಡಿಕೆಶಿ-ಅನಂದ್ ಸಿಂಗ್ ಭೇಟಿ : ಬಿಜೆಪಿಯಲ್ಲಿ ಅಕ್ರೋಶ, ಸಂಪುಟದಿಂದ ಕೈ ಬಿಡುವಂತೆ ಒತ್ತಾಯ.. ವಲಸಿಗರ ಮೇಲೇ ಹೈಕಮಾಂಡ್ ಹದ್ದಿನ ಕಣ್ಣು!

ಒಬ್ಬ ಕ್ಯಾಬಿನೆಟ್  ಸಚಿವನಾಗಿ  ಎದುರಾಳಿ ಪಕ್ಷದ ಮುಖಂಡ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಮನೆಗೆ ದಿಢೀರ್ ಭೇಟಿ ಮಾಡುವುದು, ಖಾಸಗಿ ಕಾರಿನಲ್ಲಿ‌ ಹೋಗುವುದು, ಅಭಿವೃದ್ದಿ ಹೆಸರಿನಲ್ಲಿ ಮನೆಗೆ ತೆರಳಿ ಚರ್ಚೆ ಮಾಡುವುದು,
 | 
Anand Singh meeting with  DK Sivakumar

* ಸಚಿವ‌ ಆನಂದ್‌  ಸಿಂಗ್  ಬೇಸರಗೊಂಡಿದ್ದು, 'ಕಮಲ'ಕ್ಕೆ 'ಕೈ' ಕೊಟ್ಟು ಕಾಂಗ್ರೇಸ್ ಸೇರಲಿದ್ದಾರೆ

*ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್ ಮನೆಗೆ ಸಚಿವ‌ ಆನಂದ್‌ಸಿಂಗ್ ಭೇಟಿ

*ಸಿಎಂ‌ ಬೊಮ್ಮಾಯಿ ಸಹ ಆನಂದ್‌ಸಿಂಗ್ ಮೇಲೆ ಅಸಮಾಧಾನ

ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್ ಮನೆಗೆ ಸಚಿವ‌ ಆನಂದ್‌ಸಿಂಗ್ ಭೇಟಿಯಾದ ಕುರಿತು ಬಿಜೆಪಿಗರು ಗರಂ ಅಗಿದ್ದು,  ಸಿಎಂ‌ ಬೊಮ್ಮಾಯಿ ಸಹ ಆನಂದ್‌ಸಿಂಗ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬ್ಬ ಕ್ಯಾಬಿನೆಟ್  ಸಚಿವನಾಗಿ  ಎದುರಾಳಿ ಪಕ್ಷದ ಮುಖಂಡ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಮನೆಗೆ ದಿಢೀರ್ ಭೇಟಿ ಮಾಡುವುದು, ಖಾಸಗಿ ಕಾರಿನಲ್ಲಿ‌ ಹೋಗುವುದು, ಅಭಿವೃದ್ದಿ ಹೆಸರಿನಲ್ಲಿ ಮನೆಗೆ ತೆರಳಿ ಚರ್ಚೆ ಮಾಡುವುದು, ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಇರುಸುಮುರುಸಿನ ವಿಚಾರವಾಗಿದೆ ಎಂದು ಸಚಿವ ಆನಂದ್ ಸಿಂಗ್‌ ವಿರುದ್ದ  ಕಮಲ ಪಾಳಯ  ಅಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ, ಸಚಿವ ಸಂಪುಟ ಪುನರ್ ರಚನೆಯಲ್ಲಿ ಅನಂದ್ ಸಿಂಗ್ ರನ್ನು ಕೈಬಿಟ್ಟು, ಮೂಲ ಬಿಜೆಪಿಗರನ್ನು ಪರಿಗಣಿಸಿ ಎಂದು ಬಿಜೆಪಿಗರು ಒತ್ತಾಯಿಸುತ್ತಿದ್ದಾರೆ.


ಈಗಾಗಲೇ ವಲಸಿಗ ಸಚಿವರಲ್ಲಿ ಹಲವರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗ್ತಾರೆ ಎಂಬ ಮಾಹಿತಿ ಬಿಜೆಪಿಗೆ ಹೈಕಮಾಂಡ್‌ಗೆ  ಸಿಕ್ಕಿದ್ದು, ಡಿಕೆಶಿ- ಸಿಂಗ್ ಭೇಟಿ ಬೆನ್ನಲೇ ಪಕ್ಷಾಂತರಿಗಳ ಬಗ್ಗೆ ಎಚ್ಚೆತ್ತುಕೊಂಡಿರುವ ಬಿಜೆಪಿ ಹೈಕಮಾಂಡ್ ವಿರೋದ ಪಕ್ಷ ನಾಯಕರ‌ಗಳ ಭೇಟಿಯಾಗೋ‌ ಶಾಸಕರ ಮೇಲೇ ಅದರಲ್ಲೂ, ವಲಸಿಗ ಸಚಿವರ ಚಲನವಲನಗಳ‌ ಮೇಲೆ ಹದ್ದಿನ ಕಣ್ಣಿಟ್ಟಿದೆ. ಸಿಎಂ‌ ಗಮನಕ್ಕೆ‌ ತಾರದೆ ವಿಪಕ್ಷ‌ ನಾಯಕರ ಭೇಟಿಯಾಗುವಂತಿಲ್ಲ ಎಂದು ಷರತ್ತು ನೀಡಿದ್ದು, ಪಕ್ಷಾಂತರಕ್ಕೆ ಸಿದ್ದಾವಾಗಿರುವ ನಾಯಕರುಗಳನ್ನು ಈಗಿನಿಂದಲೇ ಮೂಲೆ‌ಗುಂಪು ಮಾಡಬೇಕು, ಪಕ್ಷ‌ ಹಾಗೂ‌ ಸರ್ಕಾರದಲ್ಲಿ‌ ಯಾವುದೇ ಸ್ಥಾನಮಾನ‌‌ ನೀಡಬಾರದು, ಅವರ ಕ್ಷೇತ್ರಗಳಲ್ಲಿ ಪರ್ಯಾಯ ಬಿಜೆಪಿ ನಾಯಕನ‌ ಗುರುತಿಸಿ ‌ ಬೆಳೆಸುವ ಪ್ಲಾನ್ ಅನ್ನು ರಾಜ್ಯ ಬಿಜೆಪಿಗೆ ಸೂಚಿಸಿದೆ,      


ಜಿಲ್ಲಾ ಉಸ್ತುವಾರಿ ಕುರಿತಂತೆ ಸಚಿವ‌ ಆನಂದ್‌  ಸಿಂಗ್  ಬೇಸರಗೊಂಡಿದ್ದು, 'ಕಮಲ'ಕ್ಕೆ 'ಕೈ' ಕೊಟ್ಟು ಕಾಂಗ್ರೇಸ್ ಸೇರಲಿದ್ದಾರೆ, ಈ ಹಿನ್ನಲೆಯಲ್ಲಿ  ಡಿಕೆಶಿ ಜೊತೆ ಮಾತನಾಡಿ, ಕಾಂಗ್ರೇಸ್ ನಲ್ಲಿನ ತಮ್ಮ ಸ್ಥಾನಮಾನ ಕುರಿತಂತೆ ಹಾಗೂ ಮುಂಬರುವ ರಾಜ್ಯ ವಿಧಾನಸಭೆ ಚನಾವಣೆಯಲ್ಲಿ ಅವಿಭಜಿತ ಬಳ್ಳಾರಿಯ ಕಾಂಗ್ರೇಸ್ ಟಿಕೆಟ್ ಹಂಚಿಕೆ ಜವಬ್ಥಾರಿ ತನಗೆ  ನೀಡುವಂತೆ ಮಾತಾಡಿದ್ದಾರೆ ಎನ್ನಲಾಗುತ್ತಿದೆ.