ಉಪಯುಕ್ತ ಸಮ್ಮೇಳನ ಮಾಡುವುದು ಹೇಗೆ? 
 

 ಲಕ್ಷಾಂತರ ಸದಸ್ಯರಿರುವ ಪರಿಷತ್ತಿಗೆ ಇವತ್ತು ಸಂವೇದನಾ ಶೀಲ ಲೇಖಕರು ಅಧ್ಯಕ್ಷರಾಗುವುದೂ ಸಾಧ್ಯವಿಲ್ಲ ಎಂಬುದೂ ಸಾಬೀತಾಗಿದೆ. 
ಈ ಎಲ್ಲಾ ಕಾರಣದಿಂದಾಗಿ ಜನರು ಉಪಯುಕ್ತವಾದ ಒಂದು ಸಾಹಿತ್ಯಿಕ ಸಂಘಟನೆಯನ್ನು ಕಟ್ಟಿಕೊಳ್ಳುವುದು ಇವತ್ತಿನ ಅಗತ್ಯ. ಅದು ಒಂದು ಬಗೆಯ ಪ್ರತಿಭಟನೆಯಿಂದ ಆರಂಭವಾಗುವುದೂ ಅನಿವಾರ್ಯ.
 | 
sammelana

ನನ್ನ ನಿಜವಾದ ಆತಂಕವಿರುವುದು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅದು ನಡೆಸುವ ಸಮ್ಮೇಳನಗಳು ಸಂಪೂರ್ಣ ಅನುಪಯುಕ್ತವಾಗಿರುವುದರ ಬಗ್ಗೆ. ತೆರಿಗೆದಾರರ ಹಣ ಪೋಲಾಗುತ್ತಿರುವುದರ ಬಗ್ಗೆ. ಕರ್ನಾಟಕ ಏಕೀಕರಣ ಚಳುವಳಿಯೂ ಸೇರಿದಂತೆ ಪರಿಷತ್ತು ಹಿಂದೆ ಅನೇಕ ಉಪಯುಕ್ತ ಕೆಲಸಗಳನ್ನು ಮಾಡಿದೆ. ಆದರೆ ಇವತ್ತು ಅದಕ್ಕೆ ಏನೂ ಮಾಡಲಾಗುತ್ತಿಲ್ಲ. ೨೧ನೇ ಶತಮಾನದ ಕನ್ನಡ - ಕರ್ನಾಟಕ ಇದಿರಿಸುತ್ತಿರುವ ಕೋಮುವಾದ ಮತ್ತು ಜಾಗತೀಕರಣದ ಪ್ರಶ್ನೆಗಳಿಗೆ ಪರಿಷತ್ತಿನಲ್ಲಿ ಯಾವುದೇ ಉತ್ತರಗಳಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ, ಹಿಂದಿ ಹೇರಿಕೆ, ಗಡಿ ಸಮಸ್ಯೆ, ತ್ರಿಭಾಷಾ ಸೂತ್ರ,  ಇತ್ಯಾದಿಗಳಿಂದಾಗಿ ಕನ್ನಡ ಇವತ್ತು ಹಿಂದೆ ಬಿದ್ದಿದೆ. ಇಂಥ ವಿಷಯಗಳಲ್ಲಿ ಕನ್ನಡದ ಪರವಾಗಿ ಧ್ವನಿ ಎತ್ತಿ, ನಾಯಕತ್ವ ನೀಡುವ ಅರ್ಹತೆಯನ್ನು ಪರಿಷತ್ತು ಕಳೆದುಕೊಂಡಿದೆ. ಪರಿಷತ್ತೇ ಸಮ್ಮೇಳನಗಳಲ್ಲಿ ಅಂಗೀಕರಿಸಿದ ನಿರ್ಣಯಗಳೆಷ್ಟು? ಅವುಗಳ ಗತಿ ಏನಾಗಿದೆ?  ಸರಕಾರೀ ಅಂಗ ಸಂಸ್ಥೆಯಾಗಿ ಬೆಳೆದಿರುವ ಅದು ಸಾಹಿತ್ಯದ ಮೂಲ ಭೂತ ಗುಣಗಳಿಗೆ ವ್ಯತಿರಿಕ್ತವಾದ ಕೆಲಸಗಳನ್ನು ಮಾಡುತ್ತಿದೆ.

 ಲಕ್ಷಾಂತರ ಸದಸ್ಯರಿರುವ ಪರಿಷತ್ತಿಗೆ ಇವತ್ತು ಸಂವೇದನಾ ಶೀಲ ಲೇಖಕರು ಅಧ್ಯಕ್ಷರಾಗುವುದೂ ಸಾಧ್ಯವಿಲ್ಲ ಎಂಬುದೂ ಸಾಬೀತಾಗಿದೆ. 
ಈ ಎಲ್ಲಾ ಕಾರಣದಿಂದಾಗಿ ಜನರು ಉಪಯುಕ್ತವಾದ ಒಂದು ಸಾಹಿತ್ಯಿಕ ಸಂಘಟನೆಯನ್ನು ಕಟ್ಟಿಕೊಳ್ಳುವುದು ಇವತ್ತಿನ ಅಗತ್ಯ. ಅದು ಒಂದು ಬಗೆಯ ಪ್ರತಿಭಟನೆಯಿಂದ ಆರಂಭವಾಗುವುದೂ ಅನಿವಾರ್ಯ. ಆದರೆ ಪ್ರತಿಭಟನೆಯೇ ಅದರ ಕೆಲಸವಲ್ಲ, ಕೆಲಸವಾಗಬಾರದು. ನಾನು ಹೇಳುತ್ತಿರುವುದು ಹೊಸ ಮಾತುಗಳೇನೂ ಅಲ್ಲ. ೧೯೭೫ರಲ್ಲಿ ಕುವೆಂಪು ಅವರು ಮೈಸೂರಿನಲ್ಲಿ ಉದ್ಘಾಟಿಸಿದ   ಬರಹಗಾರ ಕಲಾವಿದರ  ಸಮ್ಮೇಳನದಲ್ಲಿ ಆಡಿದ ಮಾತುಗಳು ಇಂದಿಗೂ ನಮಗೆ ಪ್ರೇರಣೆ ನೀಡುತ್ತಿವೆ. ಇಂಥ ಕೆಲಸಗಳು ನಿರಂತರವಾಗಿ ನಡೆಯಬೇಕಾಗುತ್ತದೆ. ಲಂಕೇಶ್‌, ಸುಬ್ಬಣ್ಣ, ತೇಜಸ್ವಿ, ರಾಮದಾಸ್‌ ಮೊದಲಾದವರ ಮಾರ್ಗ ನಮ್ಮ ಮುಂದಿದೆ.

ಹಾವೇರಿ ಸಮ್ಮೇಳನದಲ್ಲಿ   ಮುಸ್ಲಿಮರನ್ನು ಹೊರಗಟ್ಟಿರುವುದು ತಕ್ಷಣಕ್ಕೆ ಎದ್ದು ಕಾಣುವ ಸಂಗತಿಯಾಗಿದೆ. ೮೩ಜನ ಸನ್ಮಾನಿತರಲ್ಲಿ ಮುಸ್ಲಿಮನೊಬ್ಬನೂ ಇರದಿರುವುದು ಆಕಸ್ಮಿಕ ಏನೂ ಅಲ್ಲ.   ಇದೊಂದು ಕೋಮುವಾದೀ ಪ್ರಕ್ರಿಯೆ. ಹಾಗಂತ ನಾವಿದನ್ನು ಹೇಳಿದರೆ-ʼ ನೋಡಿ ಇವರು ಜನರನ್ನು ಒಡೆಯುತ್ತಿದ್ದಾರೆʼ ಎಂದು ಅವರೇ ಹೇಳಬಹುದು. 
ಇದನ್ನು ನೆವ ಮಾಡಿಕೊಂಡು ನಾವೆಲ್ಲ ಮತ್ತೊಂದು ವೇದಿಕೆಯನ್ನು ಕಟ್ಟಿಕೊಂಡು ಕ್ರಿಯಾಶೀಲರಾಗಬೇಕಾದ್ದು ಅತ್ಯಗತ್ಯ. ಅಂದರೆ ಮುಸ್ಲಿಂ ಲೇಖಕರ ಸಮ್ಮೇಳನ ಮಾಡುವುದು ಎಂಬ ಅರ್ಥವಲ್ಲ. ನಾಡು ನುಡಿಗೆ ಉಪಯುಕ್ತವಾದ ಒಂದು ಸಮಾವೇಶವನ್ನು ಎಲ್ಲರೂ ಒಳಗೊಂಡಂತೆ ನಡೆಸುವುದು ಎಂದರ್ಥ. ಇದಕ್ಕೆ ದೂರಗಾಮೀ ಪರಿಣಾಮ ಬೀರುವ ಶಕ್ತಿ ಇರುವುದರಿಂದ ಸಾಕಷ್ಟು ಯೋಚಿಸಿ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ.
ಈ ಯೋಚನೆಗಳಿಗೆ ಇದುವರೆಗೆ ದೊರೆತ ಬೆಂಬಲ ಮಾತ್ರ ಅಸಾಧಾರಣ