ಹಿಜಾಬ್ ಧರಿಸಬೇಕಿದ್ದರೆ ಪಾಕಿಸ್ತಾನಕ್ಕೆ ಹೋಗಿ.. ಈ ನೆಲದಲ್ಲಿ ಅವಾಕಶ ನೀಡೋಲ್ಲ: ಯತ್ನಾಳ್  ಮಾತುಗಳು

ಈ ನೆಲದಲ್ಲಿ ಹಿಜಾಬ್‌ಗೆ ಅವಕಾಶ ಇಲ್ಲ..ಇವತ್ತು ಹಿಜಾಬ್ ಕೇಳಿದವರು ನಾಳೆಯಲ್ಲಿ ಶಾಲೆಯಲ್ಲಿ ಮಸೀದಿ ಬೇಕು ಅಂತಾರೆ.. ಭಾರತ ಹಿಂದೂಗಳಿಗಾಗಿ ಮಾಡಿರುವ ರಾಷ್ಟ್ರ..ಇಲ್ಲಿ ಗಣಪತಿ ಪೂಜೆಯು ನಡೆಯುತ್ತದೆ ಕುಂಕುಮಕ್ಕೂ ಅವಕಾಶ ಇದೆ..ಅದನ್ನು ಯಾರು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ.
 | 
basavaraj

* ಸಿದ್ದರಾಮಯ್ಯ ಹಿಂದೂನ..? ಸಾಬ್ರಾ..?
* ಹಿಜಾಬ್‌ಗೆ ಬೆಂಬಲಿಸುವವರು ದೇಶದ್ರೋಹಿಗಳು
* ಕರ್ನಾಟಕವನ್ನು  ತಾಲಿಬಾನ್ ಆಗಲು ಬಿಡೋಲ್ಲ
* ಭಾರತ ಹಿಂದೂಗಳಿಗಾಗಿ ಮಾಡಿರುವ ರಾಷ್ಟ್ರ
* ಶಾಲೆಗೆ ಹಿಜಾಬ್ ಹಾಕಿ ಹೋಗುವುದಾದರೆ ಪಾಕಿಸ್ತಾನಕ್ಕೆ ಹೋಗಿ

ಹಿಜಾಬ್ ವಿವಾದ ಈಗ ರಾಜಕೀಯ ತಿರುವು ಪಡೆದುಕೊಂಡಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇಂದು ಬೆಳಗ್ಗೆಯಿಂದ ರಾಜ್ಯ, ರಾಷ್ಟದ ಹಲವು ನಾಯಕರುಗಳು ಬಹಿರಂಗವಾಗಿ ಹಿಜಾಬ್ ಕುರಿತು ಪರ-ವಿರೋಧ ಹೇಳಿಕೆ ನೀಡುತ್ತಿದ್ದು, ವಿವಾದದ ಕಾವು ಹೆಚ್ಚಾಗಿಸಿದೆ . ಇನ್ನೂ ಸುದ್ದಿಗಾರರೊಂದಿಗೆ ಮೈಸೂರಿನಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್  ಮಾತಾಡಿ,  'ಶಾಲೆಗಳಲ್ಲಿ ಹಿಜಾಬ್‌ಗೆ ಬೆಂಬಲಿಸುವವರು ದೇಶದ್ರೋಹಿಗಳಾಗಿದ್ದಾರೆ, ಶಾಲೆಗೆ ಹಿಜಾಬ್ ಹಾಕಿ ಹೋಗುವುದಾದರೆ ಅವರು ಪಾಕಿಸ್ತಾನಕ್ಕೆ ಹೋಗಲಿ..ಈ ನೆಲದಲ್ಲಿ ಹಿಜಾಬ್‌ಗೆ ಅವಕಾಶ ಇಲ್ಲ..ಇವತ್ತು ಹಿಜಾಬ್ ಕೇಳಿದವರು ನಾಳೆಯಲ್ಲಿ ಶಾಲೆಯಲ್ಲಿ ಮಸೀದಿ ಬೇಕು ಅಂತಾರೆ.. ಭಾರತ ಹಿಂದೂಗಳಿಗಾಗಿ ಮಾಡಿರುವ ರಾಷ್ಟ್ರ..ಇಲ್ಲಿ ಗಣಪತಿ ಪೂಜೆಯು ನಡೆಯುತ್ತದೆ ಕುಂಕುಮಕ್ಕೂ ಅವಕಾಶ ಇದೆ..ಅದನ್ನು ಯಾರು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ.
ಅದನ್ನು ಪ್ರಶ್ನಿಸುವವರು ಪಾಕಿಸ್ತಾನಕ್ಕೆ ಹೋಗಿ..ಹಿಜಾಬ್ ಹೋರಾಟದ ಹಿಂದೆ ಉಗ್ರ ಸಂಘಟನೆಗಳ ಕೈವಾಡ ಇರುವ ಶಂಕೆ ಇದೆ.. ದೇಶದ ರಾಜ್ಯದ ಶಾಂತಿ ಕದಡಲು ದೊಡ್ಡ ಹುನ್ನಾರ ನಡೆಯುತ್ತಿದೆ.. ತಾಲಿಬಾನ್ ಸಂಸ್ಕೃತಿಗೆ ಅವಕಾಶ ಕೊಡುವುದಿಲ್ಲ..ಕರ್ನಾಟಕವನ್ನು ಮತ್ತೊಂದು ತಾಲಿಬಾನ್ ಮಾಡಲು ಬಿಡುವುದಿಲ್ಲ ಎಂದಿದ್ದಾರೆ. ಅಲ್ಲದೇ ಹಿಜಾಬ್‌ ಗೆ ಬೆಂಬಲಿಸಿದ್ದ ಸಿದ್ದರಾಮಯ್ಯ ವಿರುದ್ದ  ಶಾಸಕ ಯತ್ನಾಳ್ ಕಿಡಿಕಾರಿದ್ದು, ಸಿದ್ದರಾಮಯ್ಯ ಹಿಂದೂನ ಅಥವಾ ಸಾಬ್ರಾ.. ? ಯಾವಾಗ್ಲೂ ಸಾಬ್ರನ್ನೇ ತಲೆ ಮೇಲೆ ಹೊತ್ತು ಮೆರೆಯುತ್ತಾರೆ. ಸಿದ್ದರಾಮಯ್ಯ ಅವರದ್ದು ಓಲೈಕೆ ರಾಜಕಾರಣನ ಅಥವಾ ಜಾತ್ಯಾತೀತಾನಾ ?  ಎಂದು ಪ್ರಶ್ನಿಸಿದ್ದಾರೆ.