ಮುಂದೊಂದು ದಿನ ಕೇಸರಿ ದ್ವಜವೇ ರಾಷ್ಟ್ರ ಧ್ವಜವಾಗುತ್ತೆ!: ಸಚಿವ ಈಶ್ವರಪ್ಪ
* ಕೇಸರಿ ಧ್ವಜವನ್ನು ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಹರಿಸುತ್ತೇವೆ
* ಇವತ್ತಲ್ಲ ನಾಳೆ ಕೆಂಪುಕೋಟೆ ಮೇಲೆ ಹಾರಿಸುತ್ತೇವೆ
* ಮುಂದೊಂದು ದಿನ ಕೇಸರಿ ಧ್ವಜವೇ ತ್ರಿವರ್ಣಧ್ವಜವಾಗುತ್ತ
ಹಿಜಾಬ್- ಕೇಸರಿ ಗಲಾಟೆಗೆ ಸಂಭಂದಿಸಿದಂತೆ ಹಿಂದೂ ವಿದ್ಯಾರ್ಥಿಗಳಿಗೆ ಲೋಡುಗಟ್ಟಲೆ ಕೇಸರಿ ಶಾಲುಗಳನ್ನು ನೀಡಿ ಬಿಜೆಪಿ ಪ್ರಚೋದನೆ ನೀಡುತ್ತಿದೆ, ಎಂಬ ಡಿಕೆ ಶಿವಕುಮಾರ ಆರೋಪಕ್ಕೆ ಉತ್ತರಿಸಿದ ಸಚಿವ ಈಶ್ವರಪ್ಪ ಬಂಡೆಯನ್ನು ಲೂಟಿ ಮಾಡಿರುವುದು ಡಿ.ಕೆ.ಶಿ. ನಾವು ಎಷ್ಟು ಬೇಕಾದರೂ ಕೇಸರಿ ಶಾಲು ಹಂಚುತ್ತೇವೆ. ಅದನ್ನು ಕೇಳಲು ಡಿ.ಕೆ.ಶಿವಕುಮಾರ್‌ಗೆ ಅಧಿಕಾರವಿಲ್ಲ. ಡಿಕೆಶಿ ಏನು ಹೇಳುತ್ತಿದ್ದಾರೆ ಎನ್ನುವುದನ್ನು ನೇರವಾಗಿ ಹೇಳಲಿ. ಹೀಗೆ ಸುತ್ತಿ ಬಳಸಿ ಮಾತನಾಡಿದರೆ ಪ್ರಯೋಜನವಿಲ್ಲ ಎಂದು ಹೇಳಿದರು.
ಬಂಡೆ ಹೊಡೆದು ಅಭ್ಯಾಸ ನನಗೆ ಇಲ್ಲ ಕೇಸರಿ ಶಾಲು ಎಂದಾಕ್ಷಣ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ತಳಮಳವಾಗುತ್ತೆ. ಕೇಸರಿ ಶಾಲು ಹಾಕಲು ಹೋದರೆ ತಪ್ಪೇನು..? ಕೇಸರಿ ಶಾಲು ಹಂಚಲು ನಾನು ತಯಾರಿದ್ದೇನೆ... ನಾನು ಸ್ವತಂತ್ರ ಭಾರತದಲ್ಲಿ ಸ್ವತಂತ್ರ... ಪ್ರಶ್ನೆ ಮಾಡಲು ಅವರು ಯಾರು ನಾನು ಹಂಚಿಲ್ಲ.. ಹಂಚಿದರು ಏನು ತಪ್ಪು? ಎಂದು ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿನಿಯರು ಶಾಲೆಗೆ ಮಾತ್ರ ಸಮವಸ್ತ್ರ ಧರಿಸಿ ಹೋಗಿ ಎಂದಷ್ಟೇ ನಾವು ಹೇಳುತ್ತಿದ್ದೇವೆ. ಬೇರೆ ಕಡೆ ಅವರು ಯಾವ ವಸ್ತ್ರ ಬೇಕಾದರು ಧರಿಸಿಕೊಳಲ್ಲಿ ನಮ್ಮ ಆಕ್ಷೇಪವಿಲ್ಲ. ಅವರನ್ನು ನಾವು ತಡೆಯೊದಿಲ್ಲ. ನಾವು ಸಹ ಎಲ್ಲಿಗೆ ಬೇಕಾದರೂ ಕೇಸರಿ ಶಾಲು ಧರಿಸಿ ಹೋಗುತ್ತೇವೆ. ಆದರೆ ಸಮವಸ್ತ್ರ ಧರಿಸಿ ಹೋಗಬೇಕಾದ ಶಾಲ- ಕಾಲೇಜಿನಲ್ಲಿ ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ಹೋಗುವುದು ತಪ್ಪು. ಕೇಸರಿ ಧ್ವಜವನ್ನು ನಾವು ಎಲ್ಲಿ ಬೇಕಾದರೂ ಹಾರಿಸುತ್ತೇವೆ. ಕೆಂಪುಕೋಟೆ ಮೇಲೂ ನಾವು ಕೇಸರಿ ಧ್ವಜ ಹಾರಿಸುವವರೇ ಎಂದು ಸವಾಲು ಹಾಕಿದರು.