ಸಾಮೂಹಿಕ ನಾಯಕತ್ವದಡಿ 2023ರ ಚುನಾವಣೆ-ಓಗ್ಗಟಿನ ಮಂತ್ರ ಪಠಿಸಿದ ಸಿದ್ದು-ಡಿಕೆಶಿ!

ಇನ್ನೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ,  'ನಮ್ಮದು ರಾಷ್ಟ್ರೀಯ ಪಕ್ಷ. ಒಗ್ಗಟ್ಟಿನಿಂದ ಕೆಲಸ ಮಾಡುವುದೇ ಕಾಂಗ್ರೆಸ್ ತತ್ವ. ನಾವು ಸಾಮೂಹಿಕ ನಾಯಕತ್ವವನ್ನು ನಂಬುತ್ತೇವೆ.  ಚುನಾವಣೆಗಳನ್ನು ಕೂಡ ಸಾಮೂಹಿಕ ನಾಯಕತ್ವದಡಿಯಲ್ಲೇ ಸ್ಪರ್ಧಿಸುತ್ತವೆ.
 | 
siddhu

ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ, 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ!

ಅಸೆಂಬ್ಲಿ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸುವುದಿಲ್ಲ!

ಕರ್ನಾಟಕ ಕಾಂಗ್ರೆಸ್‌ನಲ್ಲಿ ಯಾವುದೇ ಬಿರುಕು ಇಲ್ಲ ನಾವು ಒಟ್ಟಾಗಿ ಪಕ್ಷವನ್ನು ಕಟ್ಟುತ್ತಿದ್ದೇವೆ?
 
ಓಗ್ಗಟಿನ ಮಂತ್ರ ಹಾಡಿದ ಸಿದ್ದರಾಮಯ್ಯ-ಡಿಕೆ ಶಿವಕುಮಾರ್!

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸಿಎಂ ಅಭ್ಯರ್ಥಿ ಘೋಷಿಸದೆ ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಓಗ್ಗಟಿನ ಮಂತ್ರ ಪಟಿಸಿದ್ದಾರೆ. ಹೈಕಮಾಂಡ್ ಆದೇಶದಂತೆ ಈ ನಿರ್ಣಯ ಕೈಗೊಳ್ಳಲಾಗಿದೆ, ಕರ್ನಾಟಕದಲ್ಲಿ ಮುಂದಿನ ಅಸೆಂಬ್ಲಿ ಚುನಾವಣೆಗೆ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸುವುದಿಲ್ಲ ಎಂದು ಇಬ್ಬರು ನಾಯಕರು ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ, 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾನು ಸಹ ಪ್ರತಿಪಕ್ಷದ ನಾಯಕನಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ. ಎಂದು ಸಿದ್ದರಾಮಯ್ಯ ಹೇಳಿದರು. ಅಲ್ಲದೇ ಶಿವಕುಮಾರ್ ಮತ್ತು ತಮ್ಮ ನಡುವಿನ ಜಗಳವನ್ನು ತಳ್ಳಿಹಾಕಿದ ಸಿದ್ದರಾಮಯ್ಯ,  “ ಕರ್ನಾಟಕ ಕಾಂಗ್ರೆಸ್‌ನಲ್ಲಿ ಯಾವುದೇ ಬಿರುಕು ಇಲ್ಲ ನಾವು ಒಟ್ಟಾಗಿ ಪಕ್ಷವನ್ನು ಕಟ್ಟುತ್ತಿದ್ದೇವೆ.  ಕೆಲವು ಸಂದರ್ಭಗಳಲ್ಲಿ, ಭಿನ್ನಾಭಿಪ್ರಾಯಗಳಿವೆ ಅಷ್ಟೇ, ನಮ್ಮ ಪಕ್ಷವು ಆಂತರಿಕ ಪ್ರಜಾಪ್ರಭುತ್ವವನ್ನು ನಂಬುವುತ್ತದೆ, ಹೊರತು ಸರ್ವಾಧಿಕಾರಿ ಸಿದ್ಧಾಂತವಲ್ಲ. ಕೆಲವು ಸಮಸ್ಯೆಗಳ ಬಗ್ಗೆ ಬಿನ್ನ ದೃಷ್ಟಿಕೋನವಿರಬಹುದು, ಇದು ಸಹಜ ಮತ್ತು ಆರೋಗ್ಯಕರವಾದ ಬೆಳವಣಿಗೆ”ಎಂದು  ಹೇಳಿದರು.
ಇನ್ನೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ,  'ನಮ್ಮದು ರಾಷ್ಟ್ರೀಯ ಪಕ್ಷ. ಒಗ್ಗಟ್ಟಿನಿಂದ ಕೆಲಸ ಮಾಡುವುದೇ ಕಾಂಗ್ರೆಸ್ ತತ್ವ. ನಾವು ಸಾಮೂಹಿಕ ನಾಯಕತ್ವವನ್ನು ನಂಬುತ್ತೇವೆ.  ಚುನಾವಣೆಗಳನ್ನು ಕೂಡ ಸಾಮೂಹಿಕ ನಾಯಕತ್ವದಡಿಯಲ್ಲೇ ಸ್ಪರ್ಧಿಸುತ್ತವೆ. ವ್ಯಕ್ತಿಗಳಿಗಿಂತ ಪಕ್ಷ ಮುಖ್ಯ. ಕಾಂಗ್ರೆಸ್‌ನಲ್ಲಿ ಹಲವಾರು ನಾಯಕರಿದ್ದಾರೆ ನಾವೆಲ್ಲ ಒಟ್ಟಾಗಿ ಚುನಾವಣೆಗೆ ಹೋಗುತ್ತೇವೆ, ಎಂದರು.


ಇನ್ನೂ, ಸಚಿವ ಕೆ.ಎಸ್‌.ಈಶ್ವರಪ್ಪ  ಧ್ವಜಾರೋಹಣ ಹೇಳಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ ಮುಂದುವರಿಸಲಿದೆ.  "ನಮ್ಮ ಮೇಕೆದಾಟು  ಪಾದಯಾತ್ರೆಯ ಮುಗಿಯುತ್ತಿದ್ದಂತೆ ಜನರ ನ್ಯಾಯಾಲಯಕ್ಕೆ ಇದನ್ನು ಒಯ್ಯುತ್ತೇವೆ" ಎಂದು ಹೇಳಿದರು.