ಭಾರತೀಯರ ಏರ್ ಲಿಫ್ಟ್ ಕಾರ್ಯಕ್ಕಾಗಿ ಉಕ್ರೇನ್ ಗೆ ತೆರಳಿದ  ಕೇಂದ್ರ ಸಚಿವರುಗಳು!

 | 
ukrain

ಉಕ್ರೇನಿನಲ್ಲಿ ಸಿಲುಕಿರವ  ಭಾರತೀಯರನ್ನು ಸ್ಥಳಾಂತರಿಸಲು 4 ಕೇಂದ್ರ ಸಚಿವರನ್ನು ನೇಮಿಸಿದ ಮೋದಿ!

ಯುದ್ದಭೂಮಿಗೆ ಇಳಿದ ಸಚಿವ ಹರ್ದೀಪ್ ಪುರಿ, ಕಿರಣ್ ರಿಜಿಜು, ಜ್ಯೋತಿರಾದತ್ಯ ಸಿಂಧಿಯಾ, ವಿಕೆ ಸಿಂಗ್!

ಭಾರತದಿಂದ ಬೃಹತ್ ಏರ್ ಲಿಫ್ಟ್ ಕಾರ್ಯಚರಣೆ! 

ವೀಸಾ ಇಲ್ಲದೇಯು ಗಡಿಯೊಳೆಗೆ ಭ
 ಪ್ರವೇಶಿಸಲು ಭಾರತೀಯರಿಗೆ ಅನುಮತಿ ಕೊಟ್ಟ ಪೊಲೇಂಡ್!

ಉಕ್ರೇನ್‌ನಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಕುರಿತು ಸೋಮವಾರ ಸಭೆ ಕರೆದಿದ್ದ ಪ್ರಧಾನಿ ನರೇಂದ್ರ ಮೋದಿ, ಕದನ ಕೂಪ ಉಕ್ರೇನಿನಲ್ಲಿ ಸಿಲುಕಿರವ  ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಕ್ಕೆನಾಲ್ಕು ಕೇಂದ್ರ ಸಚಿವರನ್ನು ಕಳುಹಿಸಿಕೊಟ್ಟಿದ್ದಾರೆ.
ಕೇಂದ್ರದ ಸಚಿವರುಗಳಾದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಪುರಿ, ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದತ್ಯ ಸಿಂಧಿಯಾ, ಹಾಗೂ ಸಾರಿಗೆ ಮತ್ತು ನಾಗರಿಕ ವಿಮಾನಯಾನ ರಾಜ್ಯಖಾತೆ ಸಚಿವ ಜನರಲ್ ವಿಕೆ ಸಿಂಗ್ ಉಕ್ರೇನಿನ ಗಡಿ ಪ್ರದೇಶಗಳಿಗೆ ತೆರಳಿದ್ದಾರೆ.ಜ್ಯೋತಿರಾದಿತ್ಯ ಸಿಂಧಿಯಾ ಅವರು ರೊಮೇನಿಯಾ ಮತ್ತು ಮೊಲ್ಡೊವಾದಲ್ಲಿ ಕಾರ್ಯಾಚರಣೆಯನ್ನು ನೋಡಿಕೊಳ್ಳಲಿದ್ದು, ಕಿರಣ್ ರಿಜಿಜು ಸ್ಲೋವಾಕಿಯಾಕ್ಕೆ, ಹರ್ದೀಪ್ ಸಿಂಗ್ ಪುರಿ ಹಂಗೇರಿಗೆ ಮತ್ತು ಜನರಲ್ ವಿ ಕೆ ಸಿಂಗ್ ಪೋಲೆಂಡ್‌ನಲ್ಲಿ ಏರ್ ಲಿಫ್ಟ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.


ಸೋಮವಾರ ನಡೆದ ಸಭೆಯಲ್ಲಿ ನಾಲ್ವರು ಸಚಿವರಗಳಲ್ಲದೆ,  ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್, ಪ್ರಧಾನಿ ಸಚಿವಾಲಯದ ಕಾರ್ಯದರ್ಶಿ ಪಿ.ಕೆ.ಮಿಶ್ರಾ, ಭಾಗವಹಿಸಿದ್ದರು.
ಪಶ್ಚಿಮ ಉಕ್ರೇನ್‌ನ ಉಜ್ಹೋರೋಡ್‌ನಿಂದ ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ಗೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಸರ್ಕಾರವು ಪರ್ಯಾಯ ರೈಲು ಮಾರ್ಗವನ್ನು ಗುರುತಿಸಿದೆ. ಉಕ್ರೇನಿಯನ್ನರು ಸೇರಿದಂತೆ ಸಾವಿರಾರು ಜನರು ಪೋಲೆಂಡ್ ಮಾರ್ಗವನ್ನು ಬಳಸುತ್ತಿರುವುದರಿಂದ ಪೋಲೆಂಡ್ ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಿಸುವಿಕೆಯು ಸಮಸ್ಯೆಯಾಗಿದೆ. ಹಿಗಾಗೀ ಪರ್ಯಾಯ ಆಯ್ಕೆಗಳಲ್ಲಿ ಒಂದಾದ ಉಜ್ಹೊರೊಡ್‌ಗೆ ಬಳಸಬೇಕು, ಅಲ್ಲಿಂದ ಪ್ರತಿ ಎರಡು ಗಂಟೆಗಳಿಗೊಮ್ಮೆ ಹಂಗೇರಿಯ ಬುಡಾಪೆಸ್ಟ್‌ಗೆ ಹೊರಡುವ ರೈಲು ಇದೆ  ಎಂದು ಈ ವೇಳೆ ನಿರ್ಣಯಿಸಲಾಯಿತು. 


ಇನ್ನೂ ಭಾರತದಲ್ಲಿರುವ ಪೊಲೆಂಡ್ ರಾಯಭಾರಿ ಅಡಂ ಬುರಾಕವ್ಸ್ ಕಿ  'ಭಾರತಿಯರು ವೀಸಾ ಇಲ್ಲದೆಯು ಪೊಲೆಂಡ್ ಗಡಿಯೊಳಗೆ ಪ್ರವೇಶಿಸಲು ಮುಕ್ತ ಅನುಮತಿ ನೀಡಲಾಗಿದೆ. ಭಾರತೀಯರ ಏರ್ ಲಿಫ್ಟ್ ಕಾರ್ಯಚರಣೆಗೆ ಪೊಲೇಂಡ್ ಸರ್ಕಾರವು ಸಕಲ ನೆರವು ನೀಡುತ್ತದೆ ಎಂದು ಹೇಳಿದರು.