ಚೇತನ್ ಭಾಷೆ ಎಕ್ಸಾಗರೇಟ್ ಆಗಿರಬಹುದು, ಬುದ್ದಿಯಲ್ಲ.. ಚೇತನ್ ಪ್ರಶ್ನೆ ಸಹಿಸದವರು ಪ್ರಮಾದ ಎಸಗುತ್ತಿದ್ದಾರೆ...
ಸಿದ್ದರಾಮಯ್ಯ ಕಂಪ್ಲೀಟ್ ಪರ್ಸನ್ ಎಂಬಂತೆ ವಾದಿಸುತ್ತಿರುವ ಅವರ ಬೆಂಬಲಿಗರ ಕಿರುಚಾಟ- ಪರಚಾಟ ನೊಡಿದರೆ ಬೇಸರ ಮತ್ತು ಅಸಹ್ಯವಾಗುತ್ತದೆ. ಇದರಿಂದ ಮೋದಿ ಭಕ್ತರು- ಸಿದ್ದರಾಮಯ್ಯ ಭಕ್ತರ ನಡುವೆ ಏರ್‌ಲೈನ್ ಡಿಫರೆನ್ಸ್ ಅಷ್ಟೆ ಉಳಿದಿದೆ..
ಚೇತನ್ ಕೆಲವು ಪ್ರಶ್ನೆಗಳನ್ನ ಸಿದ್ದರಾಮಯ್ಯ ಬಗ್ಗೆ ಕೇಳಿದ್ದಾರೆ. ಅವರ ಪ್ರಶ್ನೆ ಅಸಂಗತವಾಗಿದೆ, ಎಕ್ಸಾಗರೇಟಾಗಿರಬಹುದು. ಆದರೆ ಅವುಗಳಲ್ಲಿ ಉರುಳೇ ಇಲ್ಲ ಎಂದು ಹೇಳಹುದೇ..?
ಸಿದ್ದರಾಮಯ್ಯ ಒಬ್ಬ ಕಂಪ್ಲೀಟ್ ಕ್ಲೀನ್ ರಾಜಕಾರಣಿ ಎಂಬಂತೆಯೂ, ಪ್ರಶ್ನಾತೀತ ಎಂಬಂತೆಯೂ, ಮೋದಿ ಎದುರು ಸಿದ್ದರಾಮಯ್ಯರನ್ನು ಪ್ರಶ್ನೆಗೆ ಒಡ್ಡಲು ಇದು ಕಾಲವಲ್ಲ ಎಂಬಂತೆಯೂ ತಕರಾರು ತೆಗೆಯುತ್ತಿರುವವರು ತಾವು ಎಷ್ಟು ದೊಡ್ಡ ಪ್ರಮಾದ ಎಸಗುತ್ತಿದ್ದೇವೆ ಎಂದು ಬಹುಷಃ ತಿಳಿದಿಲ್ಲ ಎನಿಸುತ್ತಿದೆ.
ಭ್ರಷ್ಟಾಚಾರ, ಅಸಮಾನತೆ,, ತಾರತಮ್ಯ ಜಾತಿ, ಧರ್ಮ, ಕೋಮು ರಾಜಕಾರಣವನ್ನು ಸೋಲಿಸಲು ಜನರಿಗೆ ಸರಳವಾಗಿ ಅರ್ಥ ಮಾಡಿಸಬಲ್ಲ, ಸರ್ವ ಸಾಮನ್ಯರನ್ನೂ ಒಳಗೊಳ್ಳುವ ಸ್ಟೋರಿಯೊಂದನ್ನು ತಯಾರು ಮಾಡಿಕೊಳ್ಳಬೇಕಾದ ಜರೂರು ಈಗ ತುಂಬ ಅಗತ್ಯವಾಗಿದೆ. ಸೈದ್ಧಾಂತಿಕವಾದ ತೀಕ್ಷ್ಣ ಸಲಕರಣೆಗಳಿಲ್ಲದೆ ವಿರೋಧಿಗಳನ್ನು ಎದುರಿದುವುದು ಹೇಗೆ? ಚೇತನ್ ಹೇಳುತ್ತಿರುವುದೂ ಇದನ್ನೇ.
ಕಾಂಗ್ರೆಸ್ ಸೇರಿದಂತೆ ಯಾವ ವಿಪಕ್ಷಗಳಿಗೂ ಈವರೆಗೆ ಕೋಮುವಾದಿಗಳ ವಿರುದ್ಧ ಒಂದು ಗಟ್ಡಿಯಾದ ಸ್ಸ್ಟೋರಿಯನ್ನು ಸಿದ್ದಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಾರಣ ಇವರ ರಾಜಕಾರಣ ಮತ್ತೆ ಹಿಂದುತ್ವದ ಸಲಕರಣೆಗಳನ್ನೇ ಅವಲಂಬಿಸಿರುವುದು ದುರದೃಷ್ಟಕರ ಮತ್ತು ನಿರಾಶದಾಯಕ. ಸಿದ್ದರಾಮಯ್ಯ ಅವರಿಗೆ ಅಹಿಂದ ಎಂಬುದು ಚುನಾವಣೆ ಕಾಲದಲ್ಲಿ ಬೆದರಿಸಿ ಅಧಿಕಾರ ಗಳಿಸುವ ಒಂದು ವೆಪನ್ ಆಗಿದೆ ಹೊರತು, ಅಹಿಂದ ವರ್ಗಗಳ ಶಾಶ್ವತ ಧ್ವನಿಯಾಗಿಲ್ಲ, ಅವರ ಬಿಡುಗಡೆ ಶಕ್ತಿಯಾಗಿಲ್ಲ ಯಾಕೆ? ಕೇವಲ ಬಿಡಿಬಿಡಿಯಾದ, ತಮಾಶೆ ಭರಿತ ಅವರ ಪ್ರಶ್ನೆಗಳು ಹಿಂದುತ್ವದ ಶಕ್ತಿಗಳು ಸೃಷ್ಟಿಸಿರುವ ಸರಳುಗಳನ್ನು ಕತ್ತರಿಸುವಷ್ಟು ಶಕ್ತಿಯುತವಾಗಿಲ್ಲ. ಹೀಗಾಗಿ ಅವರ ಸಟೈರ್ ಪ್ರಶ್ನೆಗಳು ಕೋಮು ಶಕ್ತಿಗಳನ್ನು ಸೋಲಿಸಲು ಶಕ್ತವಾಗಿಲ್ಲ.
ಚೇತನ್ ಒಬ್ಬ ಸ್ನಾತಕೋತ್ತರ ಪದವೀಧರಾಗಿದ್ದು ಬಹುಷಃ ಪ್ರಜ್ಞಾಪೂರ್ವಕವಾಗೇ ಹೀಗೆ ಪ್ರಶ್ನೆ ಮಾಡಿರಬಹುದು. ಸಿದ್ದರಾಮಯ್ಯ ವಿರುದ್ಧ ಪ್ರಶ್ನೆ ಯಾಕೆ. ಇದೇ ಪ್ರಶ್ನೆಯನ್ನ ಚೇತನ್ ಯಡಿಯೂರಪ್ಪ, ಹೆಚಡಿಕೆ, ಬಿಜೆಪಿ, ಮೋದಿ, ಡಿಕೆಶಿ ಮತ್ತಿತರರ ಬಗ್ಗೆ ಕೇಳಿಲ್ಲ ಯಾಕೆ ಎಂದು ಕೆಲವರು ಕೇಳುತ್ತಿದ್ದಾರೆ. ಸೈದ್ದಾಂತಿಕವಾಗಿ ಜನ ವಿರೋಧಿ ನೀತಿ ನಿಲುವು ಮತ್ತು ಅಜೆಂಡಾ ಹೊಂದಿದವರ ವಿರುದ್ಧ ಚೇತನ್‌ಗೆ ಸೈದ್ಧಾಂತಿಕ ವಿರೋಧ ಇದ್ದೇ ಇದೆ.
ಆದರೆ ಪ್ರಶ್ನೆ, ಜಗಳ, ಚರ್ಚೆ ಇರೋದು ಸೈದ್ಧಾಂತಿಕ ಸಮಾನ ನಿಲುವು ಹೊಂದಿಯೂ ಗೊಂದಲದ ನಿಲುವು, ಅಸ್ಪಷ್ಟ ನೀತಿ, ನಿರ್ಧಾರಗಳನ್ನು ಕೈಗೊಳ್ಳುವವ ಪಕ್ಷ, ನಾಯಕರು, ಸರ್ಕಾರಗಳ ವಿರುದ್ಧ. ಸಿದ್ಧರಾಮಯ್ಯ ಅವರಿಗೆ ಚೇತನ್ ಕೇಳಿರುವ ಪ್ರಶ್ನೆಗಳೂ ಇದೇ ನೆಲೆಯಲ್ಲಿ ಇವೆ. ಅವರ ಪ್ರಶ್ನೆಗಳು ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಾಯಕರ ಮಿತಿಗಳನ್ನು ಪರಿಹರಿಸಿಕೊಳ್ಳಲು ಒಂದು ಸಕಾಲವಾಗಿತ್ತು ಮತ್ತು ಅವಕಾಶವಾಗಿತ್ತು. ಆದರೆ ಕೇಳಿಸಿಕೊಳ್ಳಲು ಸಿದ್ದವೇ ಇರದ ಇವರಿಗೆ ಬಿಜೆಪಿಯನ್ನು ಸೋಲಿಸುವುದು ಇರಲಿ, ಸ್ಪರ್ಧಾತ್ಮಕ ರಾಜಕೀಯ ಶಕ್ತಿಯಾಗಿ ಉಳಿಯುವ ಫೇರ್‌ನೆಸ್ ಮತ್ತು ಫಿಟ್‌ನೆಸ್ ಕೂಡ ಕಳೆದುಕೊಂಡಿದ್ದಾರೆ ಅನಿಸುತ್ತದೆ.ಕೋಮುವಾದಿ ಗೂಂಡಾ ರಾಜಕಾರಣದ ಎದುರು ಗೂಂಡಾ ಅಥವಾ ಗಾಂಧಿ, ಅಂಬೇಡ್ಕರ್ ರಾಜಕಾರಣ ಮಾತ್ರ ಗೆಲ್ಲಬಹುದು. ಆದರೆ ಗಾಂಧಿಯನ್ನು ಐಕಾನ್ ಆಗಿ ಹೊಂದಿರುವ ಇವರಿಗೆ ಇಂದು ಗೂಂಡಾಗಿರಿಯೂ ಗೊತ್ತಿಲ್ಲ ಗಾಂಧಿಗಿರಿಯೂ ಗೊತ್ತಿಲ್ಲ.
ಮೂಢನಂಬಿಕೆ ನಿಷೇಧದ ಕಾಯ್ದೆ ಕರಡು ಸಿದ್ದವಾದ ಮೇಲೆ ಸಚಿವ ಸಂಪುಟ ಉಪಸಮಿತಿಗೆ ಒಪ್ಪಿಸಿ ಕೈತೊಳೆದುಕೊಂಡ ಸಿದ್ದರಾಮಯ್ಯ, ( ವಿಚಿತ್ರ ಗೊತ್ತೆ ಈ ಕಾಯ್ದೆಯನ್ನು ಅಧಿಕಾರಕ್ಕೆ ಬಂದ ಬಿಜೆಪಿ ಜಾರಿಗೆ ತಂತು,😀😀😀) ಲೊಕಾಯುಕ್ತದ ದೆಸೆಯಿಂದ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅದನ್ನ ಮೂಲೆಗೆ ತಳ್ಳಿದರು. ಯಾಕೆ..? ನ್ಯಾ. ಸಂತೋಷ್ ಹೆಗ್ಡೆ ಅವರು ನೀಡಿದ್ದ ಎರಡು ವರದಿಗಳಲ್ಲಿ ಮೊದಲ ವರದಿಯನ್ನು ಯಾಕೆ ಜಾರಿಗೊಳಿಸಲಿಲ್ಲ? ಯಾಕೆಂದರೆ ಮೊದಲ ವರದಿಯಲ್ಲಿ ಲಾಡ್ ಸಹೋದರರು, ಧರ್ಮಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರಿದ್ದರು..
ಇಂದು ತಮಿಳುನಾಡಿನಲ್ಲಿ ಸ್ಟಾಲಿನ್ ಅವರು ತೆಗೆದುಕೊಳ್ತಿರುವ ಪ್ರಗತಿಪರ ನಿರ್ಧಾರಗಳನ್ನು ನೋಡಿ. ಐದು ವರ್ಷ ಬಹುಮತದ ಸರ್ಕಾರ ಇದ್ದೂ ಇಂಥ ಒಂದು ಸೈಧ್ದಾಮತಿಕ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಯಾಕೆ ಎಂದರೆ ಅವರ ಬೆಂಬಲಿಗರು
ಮತ್ತದೇ ಕಾಂಗ್ರೆಸ್ ಕೂಡ ಒಂದು ರಾಜಕೀಯ ಪಕ್ಷ ಎನ್ನುತ್ತಾರೆ. ಹೀಗೆ ಒಂದೊಂದನ್ನೇ ರಾಜಿ ಮಾಡಿಕೊಂಡು ಹೊರಟಿರೋದರಿಂದಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡವೆ ಇಂದು ವ್ಯತ್ಯಾಸ ಉಳಿದಿಲ್ಲ.ಚೇತನ್ ಎತ್ತಿದ ಪ್ರಶ್ನೆಗಳ ಚರ್ಚೆ ವೇಳೆ ಹಲವರು ಅವರ ನುಡಿಗಟ್ಟು, ಭಾಷೆ, ತಿಳುವಳಿಕೆ, ಜಾತಿಯ ಕುರಿತು ( ಚರ್ಚಿಸಿದ್ದರೆ ಓಕೆ ಎನ್ನಬಹುದಿತ್ತು) ಅಪಹಾಸ್ಯ ಮಾಡುತ್ತಿರುವುದು ಜಾತ್ಯತೀತ ಸಿದ್ದರಾಮಯ್ಯರ ಟೊಳ್ಳುಗಳಂತೆ ಅವರ ಬೆಂಬಲಿಗರ ನಕಲಿ ಜಾತ್ಯತೀತತೆಯನ್ನೂ ಬೆತ್ತಲು ಮಾಡುತ್ತಿದೆ.
ಚೇತನ್ ಅವರ ಕನ್ನಡ ಮಾತು, ಚರಿತ್ರೆ, ಭಾಷಾ ಜ್ಞಾನ ಕಡಿಮೆ ಇರಬಹುದು, ಭಾಷಾ ಬಳಕೆ, ನುಡಿಗಟ್ಟು ತಪ್ಪಾಗಿರಬಹುದು. ಆದರೆ ಅವರ ಭಾವ ಕುರುಡಾಗಿಲ್ಲ, ಸಮಾನತೆಯ ಆಶಯ ಕುಂಟಾಗಿಲ್ಲ ದೃಷ್ಟಿಕೋನ ಕಿವುಡಾಗಿಲ್ಲ ಎಂಬುದನ್ನ ಸಿದ್ದರಾಮಯ್ಯ ಮತ್ತು ಬೆಂಬಲಿಗರು ಅರಿಯಬೇಕು