SBIನಿಂದ 5000 ಗುಮಾಸ್ತ ಹುದ್ದೆಗೆ ಅರ್ಜಿ ಆಹ್ವಾನ

ಹುದ್ದೆಗೆ ಅರ್ಹತೆ ಏನು? ಇದರ ಸಂಪೂರ್ಣ ವಿವರ ಇಲ್ಲಿದೆ

 | 
SBIನಿಂದ 5000 ಗುಮಾಸ್ತ ಹುದ್ದೆಗೆ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಿರಿಯ ಸಹಾಯಕ ಅಥವಾ ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 5000 ರೆಗ್ಯುಲರ್ ಮತ್ತು 237 ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಹೊರಡಿಸಿದ್ದು, ಏಪ್ರಿಲ್ 27ರಿಂದ ಮೇ 17, 2021 ರವರೆಗೆ ಆಸಕ್ತರು sbi.co.inವೆಬ್ ಸೈಟ್ನಲ್ಲಿ ಯಾವುದಾದರು ಒಂದು ರಾಜ್ಯದಲ್ಲಿ ಅರ್ಜಿ ಸಲ್ಲಿಸಬಹುದು.

ಪೂರ್ವಭಾವಿ ಪರೀಕ್ಷೆಯನ್ನು ಜೂನ್ ನಲ್ಲಿ ಹಾಗೂ ಮುಖ್ಯ ಪರೀಕ್ಷೆಯನ್ನು ಜುಲೈ 31 ರಂದು ನಡೆಸಲು ನಿಗದಿಪಡಿಸಲಾಗಿದೆ. ಪರೀಕ್ಷೆಗಳು ಆನ್ ಲೈನ್ ನಡೆಯಲಿದ್ದು, ಅಭ್ಯರ್ಥಿಗಳು ಸ್ಥಳೀಯ ಭಾಷೆಯಲ್ಲಿ ಬರೆಯಬಹುದು. ಕಿರಿಯ ಸಹಾಯಕ/ಗುಮಾಸ್ತ ಹುದ್ದೆಗೆ ಸಂದರ್ಶನ ಇರುವುದಿಲ್ಲ.

ಅರ್ಹತೆ: ಅಭ್ಯರ್ಥಿಗಳು ಕೇಂದ್ರ ಸರ್ಕಾರದಿಂದ ಮಾನ್ಯತೆ ಹೊಂದಿರುವ ವಿವಿಗಳಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು, ವಯೋಮಿತಿ 20-28ರ ಒಳಗಿರಬೇಕು. ಮೀಸಲಾತಿ ಅನ್ವಯಿಸುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ವಿನಾಯ್ತಿ ನೀಡಲಾಗಿದೆ. ಎಪ್ರಿಲ್ 1, 2021 ಕ್ಕೆ ಅನ್ವಯವಾಗುವಂತೆ ವಯಸ್ಸನ್ನು ಗಣನೆಗೆ ತೆಗೆದುಕೊಳ್ಳಬೇಕು.

ಅರ್ಜಿ ಶುಲ್ಕ: ಸಾಮಾನ್ಯ, OBC & EWS ಅಭ್ಯರ್ಥಿಗಳಿಗೆ 750ರೂ ನಿಗದಿಪಡಸಲಾಗಿದೆ. ಮೀಸಲಾತಿ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ.

ವೇತನ ನಿಗದಿ: ಆಯ್ಕೆಯಾದ ಅಭ್ಯರ್ಥಿಗಳಿಗೆ 17,900ರಿಂದ 47,920ಗಳ ಸ್ಕೆಲ್ ಇರಲಿದೆ. ಬೇಸಿಕ್ ಪೇ 19,900 ರೂಪಾಯಿಗಳು. ಅಭ್ಯರ್ಥಿಗಳಿಗೆ 17,900ರ ಜೊತೆಗೆ ಎರಡು ಅಡ್ವಾನ್ಸ್ ಇನ್ಕ್ರೀಮೆಂಟ್ ದೊರೆಯುತ್ತವೆ. ಮುಂಬೈನಂತ ಮೆಟ್ರೋ ನಗರಕ್ಕೆ ಆಯ್ಕೆಯಾಗುವವರಿಗೆ ತಿಂಗಳಿಗೆ 29,000 ರೂ ದೊರೆಯಲಿದೆ.