ಜೇನು ಹುಳುಗಳನ್ನು ಮೈ ಮೇಲೆ ಬಿಟ್ಕೊಂಡು ಎಂಜಲೀನಾ ಪೋಟೋ ಶೂಟ್

ಸುಮಾರು 18 ನಿಮಿಷಗಳ ಕಾಲ ಪೋಟೋಗೆ ಪೋಸ್ ನೀಡಿದ ಹಾಲಿವುಡ್ ಸ್ಟಾರ್

 | 
Anjelina jolie with Bees

ಜೇನು ಹುಳುಗಳು ಹತ್ತಿರ ಬದರೆ ಎಲ್ಲಾ ಹೌಹಾರಿ ಓಡಿ ಹೋಗುತ್ತಾರೆ. ಆದರೆ, ಹಾಲಿವುಡ್ ಸ್ಟಾರ್ ನಟಿ ಎಂಜಲೀನಾ ಜೋಲಿ ಜೇನು ಹುಳುಗಳನ್ನು ತನ್ನ ಮೈ ಮೇಲೆ ಬಿಟ್ಟುಕೊಂಡು ಪೋಟೋ ಶೂಟ್ ಮಾಡಿ ಗಮನ ಸೆಳೆದಿದ್ದಾಳೆ. ಈ ಪೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಪೋಟೋವನ್ನು ಲೆಜೆಂಡ್ ಪೋಟೋಗ್ರಾಪರ್ ಡಾನ್ ವಿಂಟರ್ಸ್ ತೆಗಿದಿದ್ದು, ಎಂಜಲೀನಾ ಜೋಲಿ ಸುಮಾರು 60,000 ಜೇನು ನೊಣಗಳನ್ನು ಯಾವುದೇ ಸುರಕ್ಷತಾ ಸೂಟ್ ಗಳಿಲ್ಲದೆ ಮೈ ಮತ್ತು ಮುಖದ ಮೇಲೆ ಬಿಟ್ಟುಕೊಂಡು 18 ನಿಮಿಷಗಳ ಕಾಲ ಪೋಟೋಗೆ ಪೋಸ್ ನೀಡಿದ್ದಾರೆ.

ಈ ಪೋಟೋಸೂಟ್ ಅನ್ನು ದಿನಾಂಕ ಮೇ 20 ರಂದು ಬೀ ಡೇ ಹಿನ್ನೆಲೆ ಜೇನು ಹುಳುಗಳ ಸಂಭಾಷಣೆಯನ್ನು ಉತ್ತೇಜಿಸುವ ಮತ್ತು ಜೇನುಸಾಕಾಣಿಕಾ ಮಹಿಳೆಯರನ್ನು ಉತ್ತೇಜಿಸುವ ಉದ್ದೇಶದಿಂದ ನ್ಯಾಷಿನಲ್ ಜಿಯೋಗ್ರಾಫಿಕ್ ಸಹಾಯೋಗದಲ್ಲಿ ನಡೆಸಲಾಗಿದೆ. ಹಾಗೆ, 1981 ಲೆಜೆಂಡ್ ರಿಚರ್ಡ್ ಅವೆಡನ್ ಭಾವಚಿತ್ರ ದಿ ಬೀ ಕೀಪರ್ ಅನ್ನು ಮರುಸೃಷ್ಟಿ ಮಾಡುವ ಗುರಿಯನ್ನೂ ಹೊಂದಿದೆ.

ಎಂಜಲೀನಾ ಜೋಲಿಯನ್ನು ವಿಶ್ವದಾದ್ಯಂತ ಯುನೆಸ್ಕೋ ಮತ್ತು ಗುರ್ಲಿನ್ ಟೂ ಟ್ರೈನ್ & ಸಪೋರ್ಟ್ ಫೀಮೇಲ್ ಬೀಕೀಪರ್ ಎಂಟ್ರಪ್ರೆನ್ಯೂರ್ಸ್ ನ “ಗಾಡ್ ಮದರ್’ ಎಂದು ಗುರುತಿಸಲಾಗಿದೆ. ಇದು 2025 ರ ವೇಳೆಗೆ 2,500 ಜೇನು ಗೂಡುಗಳು, 125 ಮಿಲಿಯನ್ ಜೇನೊಣಗಳನ್ನು ಬೆಳೆಸುವುದು, 50 ಮಹಿಳಾ ಜೇನು ಸಾಕಾಣಿಕೆದಾರರಿಗೆ ಟ್ರೈನಿಂಗ್ ಮತ್ತು ಸಹಾಯ ಮಾಡುವ ಉಪಕ್ರಮವಾಗಿದೆ ಎಂದು ಸಾಮಾಜಿಕ ಜಾಲತಾಣ ಮತ್ತು ಮ್ಯಾಗಝೈನ್ ಗಳಲ್ಲಿ ತಿಳಿಸಲಾಗಿದೆ.

ಈ ಪೋಸ್ಟ್ ಬಗ್ಗೆ ಮಾತನಾಡಿರುವ ಕ್ಯಾಮೆರಾಮನ್ ಮತ್ತು ಸ್ವತಃ ಜೇನು ಸಾಕಾಣಿದಾರರಾಗಿರುವ ವಿಂಟರ್ಸ್

ನನ್ನನ್ನು ಈ ಕೆಲಸಕ್ಕೆ ಎಂಜಲೀನಾ ಜೊತೆ ನಿಯೋಜಿಸಿದಾಗ, ನನ್ನ ಮೊದಲ ಪ್ರಾಮುಖ್ಯತೆ ಸುರಕ್ಷತೆಯಾಗಿತ್ತು. ಈ ಸಾಂಕ್ರಾಮಿಕದ ಸಂದರ್ಭ ಸಜೀವ ಜೇನುಗಳು ಮತ್ತು ನಮ್ಮ ಸದ್ಯರೊಂದಿಗೆ ಕೆಲಸ ಮಾಡುವುದು ಸುಲಭವಾಗಿರಲಿಲ್ಲ. ಸಾಂಪ್ರದಾಯಕ ಜೇನು ಸಾಕಾಣಿಕೆದಾರರ ಭಾವಚಿತ್ರವನ್ನು ಮರುಸೃಷ್ಟಿಸಲು ರಿಚರ್ಡ್ ಅವೆಡನ್ ಅವರು ಬಳಸಿದ್ದ 40 ವರ್ಷದ ಹಿಂದಿನ ತಂತ್ರಜ್ಞಾನವನ್ನೆ ಬಳಸಲಾಯಿತು. ನನ್ನ ಸಹಾಯಕ್ಕಾಗಿ ಸ್ನೇಹಿತ ಕೋನ್ರಾಡ್ ಬೌಫರ್ಡ್ ನೆಮಿಸಿಕೊಂಡೆ. ಅವನು ವಿಶೇಷ ಫೆರೋಮೋನ್ ಗಾಗಿ ಕೀಟಶಾಸ್ತ್ರಜ್ಞರನ್ನು ಭೇಟಿ ಮಾಡದ. ಕೀಟಶಾಸ್ತ್ರಜ್ಞರು ಫೆರೋಮೋನ್ ನೀಡಿದರು. ನಾವು ಈ ಪೋಟೋ ಶೂಟ್ ಗಾಗಿ ಇಟಾಲಿಯನ್ ಜೇನೊಣಗಳನ್ನು ಬಳಸಿದೆವು.

ಸೆಟ್ ನಲ್ಲಿ ಎಂಜಲೀನಾ ಜೋಲಿಯನ್ನು ಹೊರತುಪಡಿಸಿ ಎಲ್ಲರೂ ಸುರಕ್ಷತಾ ಸೂಟ್ ಗಳನ್ನು ಧರಿಸಿದ್ದರು. ಆ ಸೂಟ್ ಗಳು ಕಡುಕಪ್ಪು ಬಣ್ಣದಲ್ಲಿದ್ದು ಜೇನು ನೊಣಗಳನ್ನು ಶಾಂತವಾಗಿರಿಸಲು ಸಹಕಾರಿಯಾಗಿದ್ದವು. ನಾನು ಜೇನುಗಳು ಎಂಜಲೀನಾ ಜೋಲಿಯ ದೇಹದ ಮೇಲೆ ಕೂರಲು ಫೆರೋಮೋನ್ ಸಿಂಪಡಿಸಿದೆ. ಜೇನೊಣಗಳು ಫೆರೋಮೋನ್ ಗೆ ಆಕರ್ಷಿತವಾದವು, ನಾವು ಹೆಚ್ಚು ಸಂಖ್ಯೆಯ ಜೇನೊಣಗಳನ್ನು ಅವಳ ದೇಹದ ಮೇಲೆ ಬಿಟ್ಟೆವು.

ಜೇನೊಣಗಳಿಂದ ಸುತ್ತುವರಿದಿದ್ದ ಎಂಜಲೀನಾ 18 ನಿಮಿಷಗಳ ಕಾಲ ಅನಗತ್ಯ ಅಲುಗಾಡದೆ ಸರಿಯಾಗೇ ನಿಂತರು, ಇದು ಒಂದು ವಿಷ್ಮಯಕರ ಸಂಗತಿ, ಅಲ್ಲಿ ಬಂದಿದ್ದ ಎಲ್ಲರಿಗೂ ಪೋಟೋ ಶೂಟ್ ವಿಷ್ಮಯ ಮತ್ತು ಸ್ಪೂರ್ತಿದಾಯಕ. ಈ ವರ್ಷದ ಬೀ ಡೇ ಐತಿಹಾಸಿಕ ಪೊಟೋಗ್ರಾಪೀಕ್ ದಿನವಾಗಿ ಉಳಿಯಿತು ಎಂದು ವಿಂಟರ್ಸ್ ಹೇಳಿದ್ದಾರೆ.