ಮಿಯಾ ಖಲೀಫಾ ಟಿಕ್ ಟಾಕ್ ಅಕೌಂಟ್ ಪಾಕಿಸ್ತಾನದಲ್ಲಿ ಬ್ಯಾನ್
ಇದಕ್ಕೆ ಮಾಜಿ ನೀಲಿ ತಾರೆ ಮಿಯಾ ಖಲಿಫಾ ರಿಯಾಕ್ಷನ್ ಏನು?
ಮಾಜಿ ನೀಲಿ ತಾರೆ ಮಿಯಾ ಖಲಿಫಾರ ಟಿಕ್ ಟಾಕ್ ಅಕೌಂಟನ್ನು ಪಾಕಿಸ್ತಾನದಲ್ಲಿ ಬ್ಯಾನ್ ಮಾಡಿದೆ. ಇದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರೆಯೆ ನೀಡಿರುವ ಮಿಯಾ ಖಲಿಫಾ ತನ್ನ ಎಲ್ಲಾ ವಿಡಿಯೋ ಪೋಸ್ಟ್ ಗಳನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡುವುದಾಗಿ ತಿಳಿಸಿದ್ದಾರೆ.
ಅನಿತೈಕತೆಯ ನೆಪವೊಡ್ಡಿ ಟಿಕ್ ಟಾಕ್ ಅನ್ನು ಪಾಕಿಸ್ತಾನದಲ್ಲಿ ಎರಡು ಬಾರಿ ಬ್ಯಾನ್ ಮಾಡಲಾಗಿತ್ತು. ಏಪ್ರಿಲ್ ನಲ್ಲಿ ಎರಡನೇ ಬಾರಿಯ ಬ್ಯಾನ್ ತೆರವು ಮಾಡಲಾಗಿತ್ತು.
ಪಾಕಿಸ್ತಾನ ಟಿಕ್ ಟಾಕ್ ಖಾತೆಯನ್ನು ನಿಷೇಧ ಮಾಡಿರುವ ಹಿನ್ನೆಲೆ ಮುನಿಸಿಕೊಂಡಿರುವ ಮಿಯಾ ಈ ಸಂಬಂಧ ಟ್ವೀಟ್ ಮಾಡಿದ್ದು, ‘ನನ್ನ ಖಾತೆಯನ್ನು ನಿಷೇಧಿಸಿದಕ್ಕೆ ಪಾಕಿಸ್ತಾನಕ್ಕೆ ಕೂಗಿ ಹೇಳುತ್ತೇನೆ. ನಾನು ಟಿಕ್ ಟಾಕ್ ನಲ್ಲಿ ಮಾಡುವ ಎಲ್ಲಾ ವಿಡಿಯೋಗಳನ್ನು ನನ್ನ ಪಾಕಿಸ್ತಾನಿ ಅಭಿಮಾನಿಗಳಿಗಾಗಿ ಟ್ವಿಟ್ಟರ್ ನಲ್ಲಿ ರೀಪೋಸ್ಟ್ ಮಾಡುವುದಾಗಿ ಹೇಳಿದ್ದಾರೆ.
ಪಾಕಿಸ್ತಾನ ದೂರ ಸಂಪರ್ಕ ಪ್ರಾಧಿಕಾರಿ ಯಾವುದೇ ಅಧಿಕೃತ ಆದೇಶ ಹೊರಡಿಸದೆ ಮಿಯಾ ಖಾಲಿಫಾರ ಟಿಕ್ ಟಾಕ್ ಅಕೌಂಟ್ ಬ್ಯಾನ್ ಮಾಡಿದೆ. ಇದಕ್ಕೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಮಿಯಾ ಖಾಲಿಫಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಆಕ್ಟಿವ್ ಆಗಿದ್ದು, ಅವರು ಪ್ಯಾಲಿಸ್ತೀನ್ ಪರ ಮತ್ತು ಭಾರತದ ರೈತ ಹೋರಾಟದ ಪರವೂ ಧ್ವನಿ ಎತ್ತಿ ಗಮನ ಸೆಳೆದಿದ್ದರು.