ಸೋನು ಸೂದ್ ಹೆಸರಿನಲ್ಲಿ ರಿಯಾಯಿತಿ ದರದ ಮಟನ್ ಮಾರಾಟ

ಇದಕ್ಕೆ ಹಾಸ್ಯದಿಂದ ಪ್ರತಿಕ್ರಿಯೆ ನೀಡಿದ ಸೋನು ಸೂದ್

 | 
Sonu  sood mutton stall

ಹೈದರಾಬಾದ್: ಬಾಲಿವುಡ್ ನಟ ಸೋನು ಸೂದ್ ಅವರ ಸಾಮಾಜಿಕ ಕಾರ್ಯಕ ದೇಶದ ಜನತೆ ಮಾರುಹೋಗಿದ್ದು, ಇದರಿಂದ ಸೋನುಸೂದ್ ಗೆ ದೇಶದಲ್ಲಿ ದೊಡ್ಡ ಅಭಿಮಾನಿಗಳ ಬಳಗವೇ ಹುಟ್ಟಿಕೊಂಡಿದೆ. ಕೆಲವರು ತಾವು ಮಾಡುವ ಒಳ್ಳೆಯ ಕೆಲಸ ಕಾರ್ಯಗಳಿಗೆ ಸೋನು ಸೂದ್ ಪೋಟೋಗಳನ್ನು ಇಟ್ಟು ಪೂಜೆ ಮಾಡುತ್ತಿದ್ದಾರೆ. ಇನ್ನು ಕೆಲವರು ತಮ್ಮ ಮಕ್ಕಳಿಗೆ ಅವರ ಹೆಸರನ್ನಿಟ್ಟು ಪ್ರೀತಿ ತೋರಿದರೆ ಇನ್ನು ಕೆಲವರು ತಾವು ಪ್ರಾರಂಭಿಸುವ ವ್ಯವಹಾರ ಅಂಗಡಿಗಳಿಗೆ ಅವರ ಹೆಸರುಗಳನ್ನು ಇಟ್ಟು ಪ್ರೀತಿ ತೋರಿಸುತ್ತಿದ್ದಾರೆ.

ಆದರೆ, ಇಲ್ಲೊಬ್ಬ ತಾನು ತೆರೆದಿರುವ ಮಟನ್ ಶಾಪ್ ನಲ್ಲಿ ಸೋನು ಸೂದ್ ಹೆಸರಿನ ಮೂಲಕ ರಿಯಾಯಿತಿ ದರದಲ್ಲಿ ಮಟನ್ ಮಾರಾಟ ಮಾಡುವ ಮೂಲಕ ಗಮನ ಸೆಳೆದಿದ್ದಾನೆ. ತೆಲಂಗಾಣದ ಕರೀಂನಗರದಲ್ಲಿ ಕನ್ನಯ್ಯ ಮಟನ್ ಶಾಪ್ ಮಾಲೀಕ ತನ್ನ ಮಟನ್ ಆಂಗಡಯಲ್ಲಿ ಸೋನು ಸೂದ್ ಹೆಸರಿಟ್ಟು ಮಾಂಸಕ್ಕೆ ರಿಯಾಯಿತಿ ನೀಡಿದ್ದಾನೆ. ಈ ಕುರಿತ ಸುದ್ದಿಯನ್ನು ತೆಲುಗಿನ ವಿ6 ಚಾನೆಲ್ ಪ್ರಸಾರ ಮಾಡಿದ್ದು, ಇದನ್ನು ಸೋನು ಸೂದ್ ಅವರಿಗೆ ಟ್ಯಾಗ್ ಮಾಡಲಾಗಿದೆ.

ಇದಕ್ಕೆ ಪ್ರತಿಕ್ರಯೆ ನೀಡಿರುವ ಅವರು, ಸೋನು ಸೂದ್ “ನಾನು ಸಸ್ಯಹಾರಿ… ಮತ್ತು ನನ್ನ ಹೆಸರಿನಲ್ಲಿ ಮಟನ್ ಶಾಪ್? ಸಸ್ಯಹಾರಕ್ಕೆ ಸಂಬಂಧಿಸಿದನ್ನು ಏನಾದರೊಂರು ತೆರೆಯಲು ಸಹಾಯ ಮಾಡಲೆ ಎಂದು ಹಾಸ್ಯ ಮಾಡಿದ್ದಾರೆ.

ಇದಕ್ಕೆ ಕೆಲ ಸೋನು ಸೂದ್ ಅಭಿಮಾನಿಗಳು ಕಮೆಂಟ್ ಮಾಡಿದ್ದು, ಇದು ಅಂಗಡ ಮಾಲೀಕರು ಸೋನು ಸೂದ್ ಅವರಿಗೆ ತಿಳಿಸುತ್ತಿರುವ ಕೃತಜ್ಞತೆ. ಆ ಅಂಗಡಿಯ ಮಾಲೀಕ 700 ರೂಪಾಯಿಯ ಮಾಂಸವನ್ನು 650 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಹಾಗೆ ಪ್ರತಿ ಕೆಜಿ ಮಾಂಸದ 50 ರೂಪಾಯಿಗಳನ್ನು ನಿಮ್ಮ ಫೌಂಡೇಷನ್ ಗೆ ನೀಡಲು ನಿರ್ಧರಿಸಲಿದ್ದಾರೆ. ಹೇಳಬೇಕೆಂದರೆ ನಾವು ನಿನ್ನ ಜೊತೆಗಿದ್ದೇವೆ. ಇದು ಒಳ್ಳಯ ನಿರ್ಧಾರ ಕನ್ನಯ್ಯ ಎಂದು ಬರೆದಿದ್ದಾರೆ.

ಇನ್ನೊಬ್ಬ ಅಭಿಮಾನಿ ಕಮೆಂಟ್ ಮಾಡಿ ಸೋನು ಸಾರಿ ನಿವು ತಪ್ಪು ತಿಳಿಯಬೇಡಿ, ಒಂದು ಕೆಜಿ ಮಾಂಸ 700 ಆದ್ರೆ ಆ ವ್ಯಾಪಾರಿ 50 ರೂಪಾಯಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾನೆ. ಹಾಗೆ 50 ರೂಪಾಯಿಯನ್ನು ನಿಮ್ಮ ಫೌಂಡೇಷನ್ ಗೆ ನೀಡುತ್ತಿದ್ದಾನೆ. ಒಟ್ಟಾರೆ ಅವನಿಗೆ 100 ರೂಪಾಯಿ ನಷ್ಟವಾಗುತ್ತಿದೆ. ಇದ್ಯಾವುದನ್ನು ಲೆಕ್ಕಕ್ಕಿಟ್ಟುಕೊಳ್ಲದೆ ಅವನು ನಿಮಗೆ ಸಪೋರ್ಟ್ ಮಾಡ್ತಾ ಇದ್ದಾನೆ ಸಾರ್ ಎಂದು ಬರೆದಿದ್ದಾನೆ.