ಬಿರಿಯಾನಿಯಲ್ಲಿ ಹೆಚ್ಚು ಲೆಗ್ ಪೀಸ್ ಹಾಕಿಲ್ಲವೆಂದು ಸಚಿವರಿಗೆ ದೂರು!

ತೆಲಂಗಾಣದ ಹುಡುಗನ ಟ್ವೀಟ್ ಗೆ ಸಚಿವ ಕೆಟಿಆರ್ ನೀಡದ ಪ್ರತಿಕ್ರಿಯೆ ಏನು...?

 | 
biriyani representative image

ತೆಲಂಗಾಣದ ಬಿರಿಯಾನಿ ಪ್ರಿಯನೋರ್ವ ತಾನು ಝೋಮ್ಯಾಟೋದಲ್ಲಿ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ಹೆಚ್ಚುವರಿ ಲೆಗ್ ಪೀಸ್ ಹಾಕಿಲ್ಲವೆಂದು ಅಸಂತೃಪ್ತನಾಗಿ ಟ್ವಿಟ್ಟರ್ ನಲ್ಲಿ ತೆಲಂಗಾಣದ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ ರಾಮ ರಾವ್ ಅವರನ್ನು ಟ್ಯಾಗ್ ಮಾಡಿ ದೂರು ನೀಡಿದ್ದಾನೆ.

ಥೊಟಕುರಿ ರಘುಪತಿ ಎಂಬ ಟ್ವಿಟ್ಟರ್ ಬಳಕೆದಾರ ಚಿಕನ್ ಬಿರಿಯಾನಿಯ ಚಿತ್ರವನ್ನು ಹಾಕಿ, “ನಾನು ಚಿಕನ್ ಬಿರಿಯಾನಿಯಲ್ಲಿ ಹೆಚ್ಚುವರಿ ಮಸಾಲಾ ಮತ್ತು ಲೆಗ್ ಪೀಸ್ ಬೇಕೆಂದು ಆರ್ಡರ್ ಮಾಡಿದ್ದೆ ಆದ್ರೆ ನಾನು ಅವುಗಳನ್ನು ಪಡೆಯಲಾಗಿಲ್ಲ, ಇದೇನಾ ಜನರಿಗೆ ಸೇವೆ ಮಾಡುವ ಪರಿ ಎಂದು ಝೊಮ್ಯಾಟೊ ಮತ್ತು ಸಚಿವ ಕೆಟಿಆರ್ ಅವರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾನೆ.

ಆನಂತರ ಆ ಪೋಸ್ಟನ್ನು ಹುಡುಗ ಡೆಲಿಟ್ ಮಾಡಿದ್ದು, ಇದು ಸಚಿವ ಕೆ.ಟಿ ರಾಮ್ ರಾವ್ ಅವರ ಗಮನಕ್ಕೆ ಬಂದಿದೆ, ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ಶ್ರಮಿಸುತ್ತಿರುವ ಸಚಿವರು ಬಿರಿಯಾನಿ ಪ್ರಿಯನ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದು, “ನನ್ನನ್ನು ಇದಕ್ಕೆ ಯಾಕೆ ಟ್ಯಾಗ್ ಮಾಡಲಾಗಿದೆ ಬರ್ದರ್? ನೀನು ನನ್ನಿಂದ ಏನನ್ನು ಮಾಡಲು ಭಯಸಿದ್ದಿಯಾ ಎಂದು ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಹೈದರಾಬಾದ್ ಎಂಪಿ ಅಸಾವುದ್ದೀನ್ ಓವೈಸಿಯವರು ಸಹ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು ಬಿರಿಯಾನಿಯ ಮಹತ್ವ ತಿಳಿಸಿದ್ದು, ಕೆಲವರು ನಗು ತರಿಸುವ ಕಾಮೆಂಟ್ ಗಳನ್ನು ಹಾಕಿದ್ದಾರೆ.