ಐಪೋನ್ ಸರ್ವಿಸ್ ಸೆಂಟರ್ ನಿಂದ ವಿದ್ಯಾರ್ಥಿನಿ ಬೆತ್ತಲೆ ಚಿತ್ರ ಸೋರಿಕೆ

ಮಿಲಿಯನ್ ಡಾಲರ್ ದಂಡ ತೆರುತ್ತಿದೆ ಆಪಲ್ ಕಂಪನಿ

 | 
Representative Image

ರಿಪೇರಿ ಮಾಡಲೆಂದು ಆಪಲ್ ಸರ್ವೀಸ್ ಸೆಂಟರ್ ಗೆ ಕೊಟ್ಟಿದ್ದ ಪೋನ್ ನಿಂದ ಬೆತ್ತಲೆ ಪೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲಾತಾಣದಲ್ಲಿ ಸೋರಿಕೆಯಾದ ಹಿನ್ನೆಲೆ ಆಪಲ್ ಕಂಪನಿ ವಿದ್ಯಾರ್ಥಿಯೋರ್ವಳಿಗೆ ಬಹು ಮಿಲಿಯನ್ ಡಾಲರ್ ಹಣವನ್ನು ದಂಡವಾಗಿ ತೆರಬೇಕಾಗಿ ಬಂದಿದೆ.

ಈ ಕೃತ್ಯ ಪೆಗಾಟ್ರಾನ್ ನಡೆಸುವ ಆಪೆಲ್ ಸರ್ವೀಸ್ ಸೆಂಟರ್ ನಲ್ಲಿ ಇಬ್ಬರು ತಂತ್ರಜ್ಞರಿಂದ ನಡೆದಿದೆ. ಓರೆಗಾನ್ ವಿಶ್ವವಿದ್ಯಾಲಯದ ವಿದ್ಯರ್ಥಿನಿ 2016 ರಲ್ಲಿ ರಿಪೇರಿಗೆಂದು ಸರ್ವೀಸ್ ಸೆಂಟರ್ ಗೆ ತನ್ನ ಐಪೋನ್ ಕಳುಹಿಸಿದ್ದಳು. ಮೊಬೈಲ್ ರಿಪೇರಿ ಮಾಡಿದ ತಂತ್ರಜ್ಞರು ಮೊಬೈಲ್ ನಲ್ಲಿದ್ದ ವಿದ್ಯಾರ್ಥಿನಿಯ ಬಟ್ಟೆ ಕಳಚುವ ವಿವಿಧ 10 ಪೋಟೋ ಮತ್ತು ವಿಡಿಯೋಗಳನ್ನು ಆಕೆಯ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.

ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಲಾದ ಕಂಟೆಂಟ್ ಗಳನ್ನು ಎಲ್ಲೋ ಆ ವಿದ್ಯಾರ್ತಿನಿಯೇ ಮಾಡಿದ್ದಾಳೆ ಎಂದು ತಿಳಿದಿದ್ದರು. ಆದರೆ, ಈ ಪೋಸ್ಟ್ ಗಳ ಬಗ್ಗೆ ಸ್ನೇಹಿತರಿಂದ ತಿಳಿದ ವಿದ್ಯಾರ್ಥಿನಿ ತಕ್ಷಣ ಪೋಸ್ಟ್ ಗಳನ್ನು ಡಿಲೀಟ್ ಮಾಡಿ ಕಾನೂನಿನ ಮೊರೆ ಹೋಗಿದ್ದಳು.

ಈಗ ತೀರ್ಪು ಪ್ರಕಟಗೊಂಡಿದ್ದು, ಈ ಒಪ್ಪಂದ ಹಣ ಎಷ್ಟು ಎಂದು ಬಹಿರಂಗಗೊಂಡಿಲ್ಲ. ಆದರೆ ಸಂತ್ರಸ್ಥೆಯ ಪರ ವಕೀಲರ ಬೇಡಿಕೆಯಂತೆ ಐದು ಮಿಲಿಯನ್ ಡಾಲರ್ ಹಣ ನೀಡಬೇಕಂದು ಹೇಳಲಾಗುತ್ತಿದೆ.