ಪತಾಂಜಲಿಯ ಕೊರೋನಿಲ್ ಕಿಟ್ ಗೆ ನೇಪಾಳದಲ್ಲಿ ಕೋಕ್!

ಕೊರೋನಿಲ್ ಪರಿಣಾಮಕಾರಿತ್ವ ಕೊರತೆ ಬಗ್ಗೆ ಉಲ್ಲೇಖ

 | 
Patanjali Coronil Kit

ಯೋಗ ಗುರು ಬಾಬಾ ರಾಮ್ ದೇವ್ ಗ್ರೂಪ್ ತಯಾರಿಸುವ ಕೊರೋನಿಲ್ ಕಿಟನ್ನು ಭೂತಾನ್ ನಂತರ ಈಗ ನೇಪಾಳ ವಿತರಿಸುವುದನ್ನು ನಿಲ್ಲಿಸಿದೆ. ಕೋವಿಡ್ ವಿರುದ್ಧ ಕೊರೋನಿಲ್ ಪರಿಣಾಮಕಾರಿತ್ವದ ಕೊರತೆ ಹಿನ್ನೆಲೆ ಕೊರೋನಿಲ್ ಕಿಟ್ ವಿತರಣೆಯನ್ನು ನಿಲ್ಲಿಸಲಾಗಿದೆ.

ಕೋವಿಡ್ ಸೋಂಕನ್ನು ಎದುರಿಸಲು ಈ ಕಿಟ್ ಉಪಯುಕ್ತ ಎಂದು ಪತಾಂಜಲಿ ಹೇಳಿದೆ, 1,500 ಕೊರೋನಿಲ್ ಕಿಟ್ ಗಳನ್ನು ಸಂಗ್ರಹಿಸುವಾಗ ಸರಿಯಾದ ವಿಧಾನವನ್ನು ಅನುಸರಿಸಿಲ್ಲ, ಇವು ದೇಶಕ್ಕೆ ಕಾಣಿಕೆಯಾಗಿ ನೀಡಿಲಾಗಿದೆ ಎಂದು ನೇಪಾಳ ಆಯುರ್ವೇದ ಮತ್ತು ಪರ್ಯಾಯ ಔಷಧ ಇಲಾಖೆ ತಿಳಿಸಿದೆ.

ರಾಮ್ ದೇವ್ ಅವರ ಕೊರೋನಿಲ್ ಪರಿಣಾಕಾರಿತ್ವದ ಬಗ್ಗೆ ಭಾರತೀಯ ವೈಧ್ಯಕೀಯ ಸಂಘ ಸವಾಲು ಮಾಡಿರುವುದನ್ನು ನೇಪಾಲ್ ಆರೋಗ್ಯ ಸಚಿವಾಲಯ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕೊರೋನಿಲ್ ಕಿಟ್ ನ ಭಾಗವಾಗಿರುವ ಮಾತ್ರೆ ಮತ್ತು ಮೂಗಿನ ಎಣ್ಣೆ ಕೋವಿಡ್ ವೈರಸ್ ಅನ್ನು ಗುಣಪಡಿಸುವ ಔಷಧಿಗಳಗೆ ಸಮಾನವಲ್ಲ ಎಂದು ನೇಪಾಳ ಸರ್ಕಾರ ಹೇಳಿದೆ.

ಅದಾಗ್ಯೂ, ದೇಶದಲ್ಲಿ ಪತಾಂಜಲಿ ವಸ್ತುಗಳ ಮೇಲೆ ಯಾವುದೇ ಅಧಿಕೃತ ನಿಷೇಧವಿಲ್ಲ, ನೇಪಾಳ ಸರ್ಕಾರ ಪತಾಂಜಲಿಯ ಕೊರೋನಿಲ್ ಕಿಟ್ ವಿರುದ್ಧವೂ ಅಧಿಕೃತ ನಿಷೇಧ ಏರಿಲ್ಲ ಎಂದು ನೇಪಾಳ ಆರೋಗ್ಯ ಸಚಿವಾಲಯ ತಿಳಿಸಿದೆ.