ರಷ್ಯಾದಲ್ಲಿ ಪ್ರಾಣಿಗಳಿಗೂ ಕೊರೋನಾ ಲಸಿಕೆ ಆರಂಭ

ಕಾರ್ನಿವಾಕ್-ಕೋವ್ ಲಸಿಕೆಯನ್ನು ಸಾಕು ಪ್ರಾಣಿಗಳಿಗೆ ನೀಡುತ್ತಿರುವ ರಷ್ಯಾ

 | 
Doctors giving Covid vaccine for pets

ಮಾಸ್ಕೋ: ರಷ್ಯಾ ತನ್ನ ಪ್ರಜೆಗಳಿಗೆ ಕೋವಿಡ್ ಲಸಿಕೆ ನೀಡಲು ಪ್ರಾರಂಭಿಸುತ್ತಿದ್ದಂತೆ, ಈಗ ಪ್ರಾಣಿಗಳಿಗೂ ಕೋವಿಡ್ ಲಸಿಕೆ ನೀಡುವ ಗುರಿಯನ್ನು ಹಾಕಿಕೊಂಡಿದೆ,

ಈ ಬಗ್ಗೆ ಮಾತನಾಡಿರುವ ರಷ್ಯಾದ ಅಧಿಕಾರಿಗಳು ಮೆನೆಗಳಲ್ಲಿ ಸಾಕಿರುವ ಪ್ರಾಣಿಗಳಿಗೆ ಕೋವಿಡ್ ಲಸಿಕೆ ನೀಡಲು ನಿರ್ಧರಿಸಿದ್ದು, ಕಾರ್ನಿವಾಕ್-ಕೋವ್ ಎಂಬ ಲಸಿಕೆ ನಾಯಿ, ಬೆಕ್ಕು, ನರಿ ಮತ್ತಿತರ ಪ್ರಾಣಿಗಳಲ್ಲಿ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂದು ಪ್ರಯೋಗಗಳಿಂದ ತಿಳಿದು ಬಂದಿದೆ ಎಂದು ಹೇಳಿದ್ದಾರೆ.

ರಷ್ಯಾದ ಕೃಷಿ ಸುರಕ್ಷತಾ ಸಮಿತಿಯ ರೊಸ್ಸೆಲ್ ಸುದ್ದಿ ಮೂಲ ಒಂದರ ಜೊತೆ ಮಾತನಾಡಿದ್ದು, ಈ ಸಮಿತ ಈಗಾಗಲೇ ಮಾಸ್ಕೋ ಸೇರಿದಂತೆ ಹಲವು ಪ್ರಾಂತ್ಯಗಳ ರಾಜ್ಯ ಮತ್ತು ಖಾಸಗಿ ಚಿಕಿತ್ಸಾ ಕೇಂದ್ರಗಳಿಗೆ 17,000 ಡೋಸ್ ಲಸಿಕೆಯನ್ನು ವಿತರಿಸಲಾಗಿದೆ. ಪ್ರಾಣಿ ಪ್ರಯರು, ಪ್ರಾಣಿ ಸಾಕಾಣಿಕೆದಾರರು, ಪ್ರಾಣಿಗಳ ಮಾಲೀಕರು ಸೇರಿದಂತೆ ಹಲವರು ಲಸಿಕೆ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಲಸಿಕಯನ್ನು 21 ದಿನಗಳ ಅಂತರದಲ್ಲಿ ಎರಡು ಡೋಸ್ ಗಳನ್ನು ಪ್ರಾಣಿಗಳಿಗೆ ನೀಡಲಾಗುತ್ತದೆ. ಇದಕ್ಕೆ ಸುಮಾರು 500 ರೂಬೆಲ್ಸ್ ತಗಲುತ್ತದೆ. ಮನುಷ್ಯರಿಗೆ ನೀಡುವ ಮಾದರಿಯಲ್ಲೇ ಪ್ರಾಣಿಗಳಿಗೆ ಪ್ರಾನಿಗಳಿಗೂ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.