ದೂರದ ಇಟಲಿ ನೆಲದಲ್ಲಿ ಕನ್ನಡದ ಕಂಪು ಮೊಳಗಿಸಿದ ಹೇಮೆಗೌಡ!

ಹೇಮೆಗೌಡ ಮಧುರವರು ಮೂಲತಃ ಕಾಫಿ ನಾಡು ಚಿಕ್ಕಮಗಳೂರಿನವರು, ತಮ್ಮ ಶುಶ್ರೂಷ ಹುದ್ದೆಯನ್ನು ನಿರ್ವಹಿಸುತ್ತ ಇಟಲಿಯಲ್ಲಿ ವಾಸವಾಗಿದ್ದರೆ. ಕನ್ನಡ ಪರ ಸಂಘಟನೆಗಳ ಜೊತೆಗೂಡಿ ಇಟಲಿಯಲ್ಲಿ ಕನ್ನಡವನ್ನು ಕಟ್ಟುವ ಕೆಲಸವಗಳನ್ನು ಮಾಡುತ್ತಿದ್ದಾರೆ.
 | 
hemegowda

* ಜಗತ್ತಿನ ಹಲವು ರಾಷ್ಟ್ರಗಳು ತಮ್ಮದೆಯಾದ ನಾಗರಿಕತೆಗಳನ್ನು ಮೈಗೂಡಿಸಿಕೊಂಡು ಸಾಕಷ್ಟು ಹೆಸರು ಮಾಡಿದಲ್ಲದೆ 

* ಇಟಲಿಯಲ್ಲಿ ನೆಲೆಯೂರಿರುವ ಕನ್ನಡಿಗರ ಧ್ವನಿಯಾಗಿ ಅವರ ಸಮಸೈಗಳನ್ನು ಬಗೆ ಹರಿಸುತ್ತಿದ್ದಾರೆ.

*ತುಮಕೂರಿನ ಸಿದ್ದಗಂಗಾ ಬಾಲಕರ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದು, 2003 ರಿಂದ 2007ರಲ್ಲಿ ಬೆಂಗಳೂರಿನ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ  ಬಿ. ಎಸ್ಸಿ ಪದವಿ

ಜಗತ್ತಿನ ಹಲವು ರಾಷ್ಟ್ರಗಳು ತಮ್ಮದೆಯಾದ ನಾಗರಿಕತೆಗಳನ್ನು ಮೈಗೂಡಿಸಿಕೊಂಡು ಸಾಕಷ್ಟು ಹೆಸರು ಮಾಡಿದಲ್ಲದೆ, ಇತರೆ ರಾಷ್ಟ್ರಗಳೆಡೆಗೂ ತಮ್ಮ ನಾಗರಿಕತೆಯ ಛಾಪು ಮೂಡಿಸಲು ಯತ್ನಿಸಿವೆ, ಅಂತಹ ದೇಶಗಳಲ್ಲಿ ಮೆಡಿಟರೇನಿಯನ್ ಸಮುದ್ರದಾಚೆ ಚಾಚಿ ನಿಂತಿರುವ ಬಹು ಸಣ್ಣ ದ್ವೀಪವು ಒಂದು. ಗಾತ್ರದಲ್ಲಿ ಈ ದ್ವೀಪ ಚಿಕ್ಕದಾದರೂ ಹಿಂದಿನ ಕಾಲದಲ್ಲಿ ಇದು ಹೊಂದಿದ್ದ ವ್ಯಾಪ್ತಿ ಅಚ್ಚರಿಗೊಳಿಸುವಂಥದ್ದು. ಇತಿಹಾಸದಲ್ಲಿ ಈ ಸಾಮ್ರಾಜ್ಯಕ್ಕಿದ್ದ ವಿಸ್ತಾರ ಮತ್ತು  ವೈಭವೋಪಿತ ಸವಲತ್ತು ಜಗತ್ತಿನಲ್ಲಿ ಮತ್ತೊಂದು ಇಲ್ಲದಾಗಿತ್ತು.  


ಅಂತಹ ಬೃಹತ್‌ ಸಂಪತ್ತ್ ಭರಿತ ದೇಶ ಬೇರಾವುದು ಅಲ್ಲ, ದಕ್ಷಿಣ ಯೂರೋಪಿನ ಸಣ್ಣ ದ್ವೀಪ  ಇಟಲಿ. ಟೈಬರ್ ನದಿಯ ದಡದಲ್ಲಿ ಏಳು ಬೆಟ್ಟಗಳ ಮಧ್ಯೆ ಸ್ಥಾಪಿತವಾಗಿರುವ ನಗರ ಇಟಲಿ. ಐರೋಪ್ಯ ನಾಗರಿಕತೆ ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿತ್ತು. ಜಗತ್ತಿನ ಕ್ರೈಸ್ತರೆಲ್ಲರ ಧಾರ್ಮಿಕ ಶ್ರದ್ಧಾ ಕೇಂದ್ರವಾದ ರೋಮ್‌(ಇಟಲಿಯ ರಾಜಧಾನಿ) ಅನ್ನು ಕಲಾನಗರಿ, ಏಳು ಬೆಟ್ಟಗಳ ನಗರ, ಎಲ್ಲಾ ರಸ್ತೆಗಳೂ ಸಾಗುವವುದೇ ರೋಮ್‌ ನೆಡೆಗೆ, ರೋಮ್‌ ನಗರವನ್ನು ಒಂದು ದಿನದಲ್ಲಿ ಕಟ್ಟಲಾಗಿಲ್ಲ ಎಂಬಿತ್ಯಾದಿ ಉತ್ಪ್ರೇಕ್ಷಿತ ಸಾಲುಗಳಿಂದ ಬಣ್ಣಿಸಲಾಗುತ್ತಿತ್ತು.
ಇಂಥಹ ಜಗತ್ಪ್ರಸಿದ್ಧ ದೇಶವಾದ ಇಟಲಿಯಲ್ಲೂ  ಕನ್ನಡದ ಕಂಪನ್ನು ಹರಿಸಿ, ಜಗತ್ತಿನ ಯಾವ ಮೂಲೆಯಲ್ಲಿದ್ದರೂ, ಆ ದೇಶದ ಸಂಸ್ಕೃತಿ ಆಚಾರ-ವಿಚಾರಗಳಿಗೆ ಒಗ್ಗಿಕೊಂಡು ಕನ್ನಡಕ್ಕಾಗಿ ತನು-ಮನದಿಂದ ದುಡಿಯುತ್ತ, ನಮ್ಮ ಕನ್ನಡ ಸಂಸ್ಕೃತಿ ಆಚಾರ-ವಿಚಾರಗಳನ್ನು ಜಗತ್ತಿಗೆ ಸಾರುತ್ತೆನೆ ಎಂದು ಪಣ ತೊಟ್ಟವರು ಇಟಲಿಯಲ್ಲಿ ವಾಸವಾಗಿರುವ ನಮ್ಮ ಕಾಫಿನಾಡಿನ ಹೆಮ್ಮೆಯ ಕುವರ ಹೇಮೆಗೌಡ ಮಧುರವರು.
ನಾಡು-ನುಡಿ ವಿಚಾರವಾಗಿ ಸದಾ ಮುಂಚಣಿಯಲ್ಲಿ ನಿಲ್ಲುವ ಹೇಮೇಗೌಡ ಮಧುರವರ ಕಥೆ ನಿಜಕ್ಕೂ ರೋಚಕ, ಒಬ್ಬ ಶುಶ್ರೂಷಕರಾಗಿ ಕೆಲಸ ಅರಸುತ್ತ ಇಟಲಿಗೆ ಪ್ರಯಾಣ ಬೆಳೆಸಿದ ಇವರು, ಅಲ್ಲಿನ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಶುಶ್ರೂಷಕರಾಗಿ ಹಗಲಿರುಳು ಎನ್ನದೆ ಕಾರ್ಯನಿರ್ವಹಿಸುತ್ತ, ಪ್ರಸ್ತುತ ಇಟಲಿಯ ಸರ್ಕಾರದಲ್ಲಿ ಶಾಶ್ವತ ಮಹನ್ನೊತ ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗಿರುವ ಹೆಮ್ಮೆಯ ಕನ್ನಡಿಗ.

 ಹೌದು..! ಹೇಮೆಗೌಡ ಮಧುರವರು ಮೂಲತಃ ಕಾಫಿ ನಾಡು ಚಿಕ್ಕಮಗಳೂರಿನವರು, ತಮ್ಮ ಶುಶ್ರೂಷ ಹುದ್ದೆಯನ್ನು ನಿರ್ವಹಿಸುತ್ತ ಇಟಲಿಯಲ್ಲಿ ವಾಸವಾಗಿದ್ದರೆ. ಕನ್ನಡ ಪರ ಸಂಘಟನೆಗಳ ಜೊತೆಗೂಡಿ ಇಟಲಿಯಲ್ಲಿ ಕನ್ನಡವನ್ನು ಕಟ್ಟುವ ಕೆಲಸವಗಳನ್ನು ಮಾಡುತ್ತಿದ್ದಾರೆ. ಇಟಲಿಯಲ್ಲಿ ನೆಲೆಯೂರಿರುವ ಕನ್ನಡಿಗರ ಧ್ವನಿಯಾಗಿ ಅವರ ಸಮಸೈಗಳನ್ನು ಬಗೆ ಹರಿಸುತ್ತಿದ್ದಾರೆ. ಅಲ್ಲದೇ ಕೊವಿಡ್  ಸಂದರ್ಭದಲ್ಲಿ ಕೋವಿಡ್ ವಾರಿಯರ್ ಆಗಿ ಕೂಡ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡುತ್ತಾ ಸಾಗುತ್ತಿದ್ದಾರೆ.


ಹೇಮೆಗೌಡ ಮಧುರವರ ಪರಿಚಯ;


ಶ್ರೀಯುತ ಹೇಮೆಗೌಡರವರು ಮಾರ್ಚ್ 3-1985ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡುರು ತಾಲ್ಲೂಕಿನ ಚಿಕ್ಕಬನ್ನುರು ಎಂಬ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಮೂಡಿಗೆರೆಯ ಸೇಂಟ್‌ ಮಾರ್ಥಾಸ್ ಶಾಲೆಯಲ್ಲಿ ಮುಗಿಸಿದರು. ತುಮಕೂರಿನ ಸಿದ್ದಗಂಗಾ ಬಾಲಕರ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದು, 2003 ರಿಂದ 2007ರಲ್ಲಿ ಬೆಂಗಳೂರಿನ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ  ಬಿ. ಎಸ್ಸಿ ಪದವಿಯನ್ನು ಪಡೆದುಕೊಂಡರು. ನಂತರ ಸಿಕ್ಕಿಂ-ಮಣಿಪಾಲ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಸಂಶೋಧನೆ ಮತ್ತು ನಿಯಂತ್ರಕ ವ್ಯವಹಾರಗಳಲ್ಲಿ ಎಂ ಎಸ್ಸಿ ಪದವಿಯನ್ನೂ ಕೂಡ ಪೂರ್ಣಗೊಳಿಸಿದರು.