ಎಸ್. ಜಾನಕಿ ನೆನಪಿನಂಗಳದಲ್ಲಿ....!
ಗಾನಲೋಕದ ಸರ್ವೋಚ್ಚ ನ್ಯಾಯಾಧೀಶೆ ಜಾನಕಿ ಅಮ್ಮ ಅವರ ಜನುಮ ದಿನದ ನೆನಪಿನಲ್ಲಿ. ಒಂದು ಘಟನೆಯನ್ನು ಹಂಚಿಕೊಳ್ಳ ಬಯಸುತ್ತೇನೆ.
ಸಂಗೀತಲೋಕದ ಗಾರುಡಿಗ ಇಳಯರಾಜ ಅವರ ಸಂಗೀತ ನಿರ್ದೇಶನದ ಮೊಳದಳ ಚಿತ್ರ "ಅನ್ನಕ್ಕಿಳಿ" ಚಿತ್ರದಲ್ಲಿ ಮೂಡಿಬಂದಿರುವ ಎಲ್ಲ ಹಾಡುಗಳಿಗೆ ಜಾನಕಿ ಅಮ್ಮನವರು ಸ್ವರಧಾರೆ ಎರೆದಿದ್ದಾರೆ. ಆ ಕಾಲಘಟ್ಟದಲ್ಲಿ ಈ ಹಾಡುಗಳು ಸಂಗೀತಲೋಕದಲ್ಲಿ ಸಂಚಲನ ಮೂಡಿರುವುದನ್ನು ದಾಖಲೆ ಸಹಿತ ವೀಕ್ಷಿಸಬಹುದು.
ಇವರ ಸ್ವರಮಾಧುರ್ಯದ ಜೊತೆಗೆ ಇಳಯರಾಜ ಅವರ ಸಂಗೀತ ಸಂಯೋಜನೆ ಕೇಳಿ ಅಪಾರ ಸಂಖ್ಯೆಯ ಅಭಿಮಾನಿಗಳು ಅಮ್ಮನವರ ಸ್ವರಮಾದುರ್ಯಕ್ಕೆ ಶರಣಾಗಿದ್ದರಂತೆ. ಜೊತೆಗೆ ಅಸಂಖ್ಯಾತ ಪತ್ರಗಳೊಂದಿಗೆ ತಮ್ಮ ದೈವಭಕ್ತಿಯನ್ನು ಅವರ ಪಾದಕ್ಕೆ ಅರ್ಪಿಸಿರುವುದನ್ನ ಭಾರತ ಸರ್ಕಾರದ ಅಂಚೆ ಇಲಾಖೆಯಲ್ಲಿ ಪರಿಶೀಲಿಸಬಹುದು.
ಈ ಪರಿಶೀಲನೆಯಲ್ಲಿ ಸಿಕ್ಕ ಸಣ್ಣ ಸಾಕ್ಷಿಯೊಂದನ್ನು ನಿಮ್ಮ ಮುಂದೆ ಹಂಚಿಕೊಳ್ಳ ಬಯಸುತ್ತೇನೆ.
ಈ ಮೇಲೆ ನಮೂದಿಸಿರುವ ಗೀತೆಯನ್ನು ಕೇಳಿ. ಓರ್ವ ಅಭಿಮಾನಿ, ಜಾನಕಿ ಅಮ್ಮನವರಿಗೆ ಭಕ್ತಿಪರವಶನಾಗಿ ಪತ್ರದ ಮೂಲಕ ತನ್ನ ಮನದಾಳದ ಅಭಿಪ್ರಾಯವನ್ನು ಹೀಗೆ ಮುದ್ರಿಸುತ್ತಾನೆ.
ಗಾನಕೋಗಿಲೆ ಜಾನಕಿ ಅವರಿಗೆ ನಿಮ್ಮ ಅಭಿಮಾನಿ ಮಾಡುವ ಶಿರಸಾಷ್ಟಾಂಗ ನಮಸ್ಕಾರಗಳು. ನಿಮ್ಮ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಗೀತೆಯನ್ನು ಕೇಳುವ ಸಂದರ್ಭದಲ್ಲಿ ಯಾವ ರೀತಿ ಪರವಶನಾಗಿದ್ದೇನೆಂದರೆ. ಗೀತೆ ಆಲಿಸುವಾಗ ನನ್ನ ಬೆನ್ನಿಗೆ ಯಾರಾದರೂ ಕತ್ತಿಯಿಂದ ಬರ್ಭರವಾಗಿ ಚುಚ್ಚಿದರೂ ನನಗೆ ಅವರು ನನ್ನ ದೇಹ ಹಾನಿಗೊಳಿಸಿದ ಅನುಭವ ಒಂಚೂರು ಆಗಲಿಕ್ಕೆ ಸಾಧ್ಯವೇ ಇಲ್ಲವೆಂಬಂತೆ ನಿಮ್ಮ ಸ್ವರ ನನಗೆ ಜಾದು ಮಾಡಿ ಬಿಡುತ್ತದೆ. ಮತ್ತು ಆ ಸಾವಿನ ನೋವಿನಲ್ಲೂ ನಿಮ್ಮ ಗಾಯನ ಹಿತ ನೀಡುತ್ತದೆ. ಎಂದು ಪತ್ರದ ಮೂಲಕ ಹಂಚಿಕೊಂಡಿದ್ದರಂತೆ.
ಇದಕ್ಕೆ ಜಾನಕಿ ಅಮ್ಮ ಅವರ ಅಭಿಮಾನದ ಸೆಲೆಯಲ್ಲಿ ತನ್ಮಯರಾಗಿ, ಪ್ರಿಯ ಗೆಳೆಯನೇ ನಿಮ್ಮ ಈ ಅಭಿಮಾನಕ್ಕೆ ನಾನು ಇಂದಿಗೂ ಚಿರಋಣಿ. ನಿಮ್ಮ ಈ ಅನಿಸಿಕೆಗೆ ಪ್ರತಿಕ್ರಿಯಿಸುವುದಾದರೆ. ನನ್ನ ಗಾಯನವನ್ನು ಆಲಿಸುವ ಪ್ರತಿ ಜೀವಿಗೂ ಸಹ ಒಂದು ಸಣ್ಣ ಮುಳ್ಳು ಸಹ ತಾಗಬಾರದೆಂದು ಬಯಸುತ್ತೇನೆ. ಎಂದು ವಿನಯಪೂರ್ವಕವಾಗಿ ತಮ್ಮ ಅನಿಸಿಕೆಯನ್ನು ರವಾನಿಸಿದ್ದರಂತೆ.
ನೆನಪಿನ ಅಂಗಳದಲ್ಲಿ ಈ ದಿನ ಅಮ್ಮನ ಹಾಡುಗಳನ್ನು ಮೆಲುಕು ಹಾಕುತ್ತಾ ನನ್ನ ಮನದಾಳದಲ್ಲಿ ಅವರ ಜನ್ಮ ದಿನದ ಆಚರಣೆಯೊಂದಿಗೆ ನಿಮ್ಮ ಮುಂದೆ ವಿಷಯವನ್ನು ಪ್ರಸ್ತುತಪಡಿಸುತ್ತಿದ್ದೇನೆ.