ನಾವು ಮತ್ತು ನಮ್ಮ ಕನ್ನಡ ಚಿತ್ರಗಳ ಪರಿಸ್ಥಿತಿ...

ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕು... ಅದು ಹಣ ಮಾಡಿದರೆ ಎಲ್ಲಾ ಹಕ್ಕುಗಳು ಬರಬರನೇ ಮಾರಾಟವಾಗಿ ಹೋಗುತ್ತವೆ. ಇಲ್ಲವಾದಲ್ಲಿ
ಉಪಗ್ರಹವಾಹಿನಿಯವರು,
ಓಟಿಟಿಯವರು
ಮುಂತಾದವರು ಕಸಕ್ಕಿಂತ ಕಡೆಯಾಗಿ ಸಿನಿಮಾ ನೋಡುತ್ತಾರೆ.
 | 
RC

ಸ್ವಲ್ಪಮಟ್ಟಿಗೆ ಚಿತ್ರಕರ್ಮಿಗಳು ಸಮಾಧಾನ ಪಟ್ಟುಕೊಳ್ಳುವಂತಾಗಿದೆ. ಅದಕ್ಕೆ ಕಾರಣ ಯೂ ಟ್ಯೂಬ್ ಎನ್ನುವ ವಿಡಿಯೋ ಪ್ರಸಾರ ಅಂತರ್ಜಾಲ ಸೌಲಭ್ಯ. ತೀರಾ ವ್ಯವಹಾರಕ್ಕಾಗಿಯೇ ಸಿನಿಮಾ ಮಾಡುವ ನಿರ್ಮಾಪಕರು ಹೊಸಬರಿಗೆ ಸಿನಿಮಾ ಮಾಡುವ ಸಾಧ್ಯತೆ ಕಡಿಮೆ. ಅವರು ಮಾರುಕಟ್ಟೆ, ಹಣ ವಾಪಸು ಬರುವ ದಾರಿ ಇತ್ಯಾದಿಗಳನ್ನು ಲೆಕ್ಕ ಹಾಕಿಕೊಂಡು, ಅಂತಹ ನಾಯಕನನ್ನೇ ಒಪ್ಪಿಸಿ ಅಪ್ಪಿಕೊಂಡೆ ಸಿನಿಮಾ ಮಾಡುತ್ತಾರೆ. ಸಿನಿಮಾ ಹೇಗಾದರೂ ಇರಲಿ ಬಿಡುಗಡೆಗೆ ಮುನ್ನ ಇಷ್ಟು ಸೇಫ್. ಆದರೆ ಹೊಸಬರ ಸಿನಿಮಾಗಳನ್ನು, ಹೊಸ ಕತೆಗಳನ್ನು ಸಿನಿಮಾ ಮಾಡುವ ನಿರ್ಮಾಪಕರು ವ್ಯವಹಾರವನ್ನು ನಿರೀಕ್ಷೆ ಮಾಡಲು ಸಧ್ಯದ ಮಟ್ಟಿಗೆ ಸಾಧ್ಯವಿಲ್ಲ. 
ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕು... ಅದು ಹಣ ಮಾಡಿದರೆ ಎಲ್ಲಾ ಹಕ್ಕುಗಳು ಬರಬರನೇ ಮಾರಾಟವಾಗಿ ಹೋಗುತ್ತವೆ. ಇಲ್ಲವಾದಲ್ಲಿ
ಉಪಗ್ರಹವಾಹಿನಿಯವರು,
ಓಟಿಟಿಯವರು
ಮುಂತಾದವರು ಕಸಕ್ಕಿಂತ ಕಡೆಯಾಗಿ ಸಿನಿಮಾ ನೋಡುತ್ತಾರೆ.
ಯಾರಿದ್ದಾರೆ ಸ್ಟಾರ್ ಎನ್ನುವ ಮಾತಿನಿಂದಲೇ ಶುರು ಮಾಡುವ ಅವರ ವ್ಯವಹಾರದ ಮಾತುಗಳಲ್ಲಿ ಕತೆ ಚಿತ್ರಕತೆ ಪ್ರಯೋಗ ಪ್ರತಿಭೆಗಳೆಲ್ಲ ವ್ಯರ್ಥ ಎನ್ನುವುದು ಕಾಣಿಸಿಬಿಡುತ್ತದೆ.
ಒಮ್ಮೆ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಚಿತ್ರ ಆನಂತರ ಅದು ಮತ್ಯಾವ ಚಿತ್ರಮಂದಿರದಲ್ಲೂ ಕಾಣಸಿಗುವುದಿಲ್ಲ. ಮೊದಲು ಎ ಸೆಂಟರ್, ಬಿ ಸೆಂಟರ್, ಸಿ ಸೆಂಟರ್ ಇತ್ಯಾದಿಗಳೆಲ್ಲ ಈವತ್ತು ಲೆಕ್ಕಕ್ಕಿಲ್ಲ.
ಒಮ್ಮೆ ಬಂತು
 ಹೋಯ್ತು..
ಮತ್ಯಾವುದು ಹೊಸತು

ಅಷ್ಟೇ. ಹಾಗಿದ್ದಾಗ ಅದೆಷ್ಟೋ ಸಿನಿಮಾಗಳು ಉಚಿತವಾಗಿಯಾದರು ನೋಡಲಿ ಎಂದರೆ ವಾಹಿನಿಯವರು, ott ಯವರು ಮೂಗು ಮುರಿಯುತ್ತಾರೆ.
ಹಾಗಾಗಿ ಮಾಡಿದ ಚಿತ್ರವನ್ನು ಸಾರ್ವಜನಿಕರ ಮುಂದೆ ಪ್ರದರ್ಶನಕ್ಕೆ ಇಡಲು ಬೇರೆ ಮಾರ್ಗವಿರಲಿಲ್ಲ.
ಈಗ ಯೂ ಟ್ಯೂಬ್ ಇದೆ.
ಯಾವುದೇ ಚಂದವಿಲ್ಲದೆ ಉಚಿತವಾಗಿ ಸಿಗುತ್ತದೆ. ನೋಡಿದ ವೀಕ್ಷಣೆಯ ಮೇಲೆ ಅಷ್ಟೊ ಇಷ್ಟೊ ಹಣ ಸಂದಾಯವಾಗುತ್ತದೆ.
ನಿರ್ಮಾಪಕರಿಗೆ ಲಾಭವಾಗುತ್ತದಾ...?
ಗೊತ್ತಿಲ್ಲ..
ಆದರೆ ಅವರ ಚಿತ್ರವನ್ನು ತೋರಿಸಿದ, ಪ್ರೇಕ್ಷಕರಿಗೆ ತಲುಪುವಂತೆ ಮಾಡಿದ ಸಾರ್ಥಕತೆಯಂತೂ ಸಿಗುತ್ತದೆ.