ಮೇರಿ ಪುಕಾರ್ ಸುನೋ ಆಂಥೆಮ್ ರಚಿಸಲು ಸಂಗೀತ ದಿಗ್ಗಜ ಎ.ಆರ್.ರೆಹಮಾನ್ ಮತ್ತು ಗುಲ್ಝಾರ್ರನ್ನು ಒಟ್ಟಾಗಿಸಿದ ಸೋನಿ ಮ್ಯೂಸಿಕ್

* ಸೋನಿ ಮ್ಯೂಸಿಕ್ ಇಂಡಿಯಾ ನಮ್ಮ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಂಗೀತ ಮತ್ತು ಸ್ಫೂರ್ತಿದಾಯಕ ಶಬ್ದಗಳ ಮೂಲಕ ಶ್ರೋತೃಗಳ ಮನದುಂಬಿಸಲು ಬಯಸುತ್ತದೆ
*ಇದು ಭೂತಾಯಿಯ ಕಥೆ. ತನ್ನ ಮಾತು ಕೇಳಿ ಎಂದು ಆಕೆ ನಮಗೆ ಮನವಿ ಮಾಡಿಕೊಳ್ಳುತ್ತಾಳೆ. ಅಪಾರ ಸಂಪತ್ತು, ತಂಗಾಳಿ, ಹರಿವ ನದಿಗಳು ಮತ್ತು ಅನವರತ ಬೆಳಕಿನಿಂದ ಆಕೆ ನಮಗೆ ಭರವಸೆಯನ್ನು ನೀಡುತ್ತಾಳೆ
*ಈ ಸಾಂಕ್ರಾಮಿಕ ರೋಗದ ಸಮಯವು, ಎಲ್ಲರ ಜೀವನದಲ್ಲಿ ಅತ್ಯಂತ ಸಂಕಷ್ಟದ ಸಮಯ. ಎಲ್ಲೆಡೆ ಅನಿಶ್ಚಿತತೆ ಮತ್ತು ನೋವು ಇದೆ. ಆದರೂ, ತುಂಬಾ ಸಹಿಷ್ಣುತೆ ಮತ್ತು ಶಮನವೂ ಇದೆ.
ಭಾರತ, 25ಜೂನ್, 2021: ಈ ಸಂಕಷ್ಟದ ಸಮಯದಲ್ಲಿ ಮನಮುಟ್ಟುವ ಮಾಧುರ್ಯದ ಜೊತೆಗೆ ಸ್ಫೂರ್ತಿದಾಯಕ ಹಾಡುಗಳು ಒಂದು ಆಶಾಕಿರಣವಾಗಿ ನಮಗೆ ಕಾಣಿಸುತ್ತದೆ. ಈ ನಿಟ್ಟಿನಲ್ಲಿ, ಸೋನಿ ಮ್ಯೂಸಿಕ್ ಇಂಡಿಯಾ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಗುಲ್ಝಾರ್ ಮತ್ತು ಗ್ರ್ಯಾಮಿ ಹಾಗೂ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಂಗೀತಗಾರ ಎ.ಆರ್.ರೆಹಮಾನ್ 'ಮೇರಿ ಪುಕಾರ್ ಸುನೋ' ಎಂಬ ಶೀರ್ಷಿಕೆಯ ಭರವಸೆ ಮತ್ತು ಶಮನದ ಆಂಥೆಮ್ ಅನ್ನು ರಚಿಸಲು ಒಟ್ಟಾಗಿದೆ. ಸೋನಿ ಮ್ಯೂಸಿಕ್ ಇಂಡಿಯಾ ಅನಾವರಣಗೊಳಿಸಿದ ಈ ಹಾಡು, ದಿಲ್ ಸೇ, ಗುರು, ಸ್ಲಮ್ಡಾಗ್ ಮಿಲಿಯನೇರ್, ಸಾಥಿಯಾ ಮತ್ತು ಓಕೆ ಜಾನು ರೀತಿಯ ಸ್ಮರಿಸಿಕೊಳ್ಳಬಹುದಾದ ಸಂಯೋಜನೆಯನ್ನು ಮತ್ತೆ ನೆನಪಿಸಿದೆ.
ಭಾರತದ ಸಂಗೀತ ಉದ್ಯಮದ ಕೆಲವು ಪ್ರಮುಖ ಸಂಗೀತಗಾರರನ್ನು ಮೇರಿ ಪುಕಾರ್ ಸುನೋ ಒಟ್ಟಾಗಿಸಿದೆ. ಅಲ್ಲದೆ, ಜನಪ್ರಿಯ ಹೊಸ ಕಾಲದ ಗಾಯಕಿಯರಾದ ಅಲ್ಕಾ ಯಾಗ್ನಿಕ್, ಶ್ರೇಯಾ ಘೋಷಾಲ್, ಕೆ ಎಸ್ ಚಿತ್ರಾ, ಸಾಧನಾ ಸರ್ಗಮ್, ಶಶಾ ತಿರುಪತಿ, ಅರ್ಮಾನ್ ಮಲಿಕ್ ಮತ್ತು ಆಸೀಸ್ ಕೌರ್ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಸಪ್ತ ಸ್ವರಗಳ ಹಾಗೆಯೇ, ಈ ವಿಶಿಷ್ಟ ಸಂಯೋಜನೆಯು ತಲೆಮಾರುಗಳು ಮತ್ತು ಸಂಸ್ಕೃತಿಗಳಾದ್ಯಂತ ಏಕತೆಯ ಪ್ರತೀಕವಾಗಿದೆ.
ಈ ಆಂಥೆಮ್ ಎಂಬುದು ಭೂತಾಯಿಯ ಕರೆಯಾಗಿದ್ದು, ಭೂತಾಯಿಯ ಎಲ್ಲ ಮಕ್ಕಳೂ ಒಟ್ಟಾಗಿ ಎಂಬ ಕರೆ ನೀಡುತ್ತದೆ. ಅಲ್ಲದೆ, ಈ ಸಂಕಷ್ಟದ ಸಮಯ ನಿವಾರಣೆಯಾಗುತ್ತದೆ ಎಂಬ ಭರವಸೆಯನ್ನೂ ಇದು ನೀಡುತ್ತದೆ. ಇದು ಭರವಸೆ ಮತ್ತು ಒಮ್ಮತದ ಭಾವವನ್ನು ನಮ್ಮೊಳಗೆ ಇದು ಮರುರೂಪಿಸುತ್ತದೆ. ನಮ್ಮೊಳಗೆ ಇರುವ ನಂಬಿಕೆಯ ಮೇಲೆ ವಿಶ್ವಾಸ ಇಡುವುದಕ್ಕಾಗಿ ಪ್ರೋತ್ಸಾಹ ನೀಡುವ ಈ ಹಾಡು, ಈ ಸಂಕಷ್ಟದ ಸಮಯವು ಎಷ್ಟು ಪ್ರಖರ ಮತ್ತು ಖುಷಿಯ ಭವಿಷ್ಯದ ಸೂಚಕವಾಗಿದೆ ಎಂಬುದನ್ನು ಎತ್ತಿಹೇಳುತ್ತದೆ. 'ಮೇರಿ ಪುಕಾರ್ ಸುನೋ' ಎಂಬುದು ಒಂದು ಸ್ಥಳ. ಒಂದು ಭರವಸೆ. ಒಂದು ವಿಶ್ವಾಸ ಎಂಬ ನಂಬಿಕೆಯನ್ನು ಆಧರಿಸಿದೆ .
ಹಾಡಿನ ನಿರ್ದೇಶನ ಮತ್ತು ಸಂಗೀತ ಸಂಯೋಜನೆಯ ಬಗ್ಗೆ ಮಾತನಾಡಿದ ಸಂಗೀತಗಾರ ಎ.ಆರ್.ರೆಹಮಾನ್, "ಈ ಸಾಂಕ್ರಾಮಿಕ ರೋಗದ ಸಮಯವು, ಎಲ್ಲರ ಜೀವನದಲ್ಲಿ ಅತ್ಯಂತ ಸಂಕಷ್ಟದ ಸಮಯ. ಎಲ್ಲೆಡೆ ಅನಿಶ್ಚಿತತೆ ಮತ್ತು ನೋವು ಇದೆ. ಆದರೂ, ತುಂಬಾ ಸಹಿಷ್ಣುತೆ ಮತ್ತು ಶಮನವೂ ಇದೆ. ಭರವಸೆಯ ಹಾಡೊಂದನ್ನು ರೂಪಿಸಲು ಗುಲ್ಝಾರ್ ಮತ್ತು ನಾನು ಬಯಸಿದ್ದೇವೆ. ಯಾಕೆಂದರೆ, ನಮಗೆಲ್ಲರಿಗೂ ಅನುಕೂಲ ಮತ್ತು ಭರವಸೆ ಅಗತ್ಯವಿದೆ. ಮೇರಿ ಪುಕಾರ್ ಸುನೋ ಎಂಬುದು ತನ್ನ ಮಕ್ಕಳ ಮೂಲಕ ಮಕ್ಕಳಿಗೆ ಹಾಡುವಂಥ ಹಾಡಾಗಿದೆ. ಮನುಷ್ಯರು ಹಲವು ಕಾಲಗಳನ್ನು ದಾಟಿಯೂ ಬದುಕುಳಿದಿದ್ದಾರೆ ಮತ್ತು ಈ ಸಂಕಷ್ಟವನ್ನೂ ಅವರು ಎದುರಿಸಿ ನಿಲ್ಲಲಿದ್ದಾರೆ ಎಂಬುದನ್ನು ಇದು ಹೇಳುತ್ತದೆ.
ಆಂಥೆಮ್ನ ಮೂಲ ಧ್ಯೇಯದ ಬಗ್ಗೆ ಮಾತನಾಡಿದ ಗುಲ್ಝಾರ್, "ಇದು ಭೂತಾಯಿಯ ಕಥೆ. ತನ್ನ ಮಾತು ಕೇಳಿ ಎಂದು ಆಕೆ ನಮಗೆ ಮನವಿ ಮಾಡಿಕೊಳ್ಳುತ್ತಾಳೆ. ಅಪಾರ ಸಂಪತ್ತು, ತಂಗಾಳಿ, ಹರಿವ ನದಿಗಳು ಮತ್ತು ಅನವರತ ಬೆಳಕಿನಿಂದ ಆಕೆ ನಮಗೆ ಭರವಸೆಯನ್ನು ನೀಡುತ್ತಾಳೆ. ನಮಗೆ ಜೀವನ ಎಂಬ ಉಡುಗೊರೆಯನ್ನು ಕಾಯ್ದುಕೊಳ್ಳುವ ಭರವಸೆಯನ್ನೂ ನಮಗೆ ಇದು ನೀಡುತ್ತದೆ. ರಹಮಾನ್ ನನ್ನ ಶಬ್ದಗಳಿಗೆ ನಿಜಕ್ಕೂ ಅದ್ಭುತ ಸಂಯೋಜನೆಯನ್ನು ಮಾಡಿದ್ದಾರೆ."
ಸೋನಿ ಮ್ಯೂಸಿಕ್ ಇಂಡಿಯಾದ ಭಾರತೀಯ ವ್ಯವಸ್ಥಾಪಕ ನಿರ್ದೇಶಕ ರಜತ್ ಕಕ್ಕರ್, ಹೇಳುವಂತೆ “ಸೋನಿ ಮ್ಯೂಸಿಕ್ ಇಂಡಿಯಾ ನಮ್ಮ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಂಗೀತ ಮತ್ತು ಸ್ಫೂರ್ತಿದಾಯಕ ಶಬ್ದಗಳ ಮೂಲಕ ಶ್ರೋತೃಗಳ ಮನದುಂಬಿಸಲು ಬಯಸುತ್ತದೆ. ಎ.ಆರ್.ರೆಹಮಾನ್ ಮತ್ತು ಗುಲ್ಝಾರ್ ಸಾಹಬ್ರಂತಹ ದೈತ್ಯರು ರಚಿಸಿ ಸಂಗೀತ ಸಂಯೋಜಿಸಿದ ಮೇರಿ ಪುಕಾರ್ ಸುನೋ, ಸ್ಫೂರ್ತಿದಾಯಕ ಹಾಡಾಗಿದ್ದು, ಇದು ಎಲ್ಲರನ್ನೂ ಭವಿಷ್ಯದ ಕಡೆಗೆ ಭರವಸೆ ಹೊಂದಿರಿ ಎಂಬುದಕ್ಕಾಗಿ ಸ್ಫೂರ್ತಿ ನೀಡುತ್ತದೆ.
ಈ ಸಂಗೀತವು ಸ್ಫೂರ್ತಿಯನ್ನು ಹುಡುಕುತ್ತಿರುವ ಒಬ್ಬ ಮಗುವಿನ ದೃಷ್ಟಿಕೋನವನ್ನು ಹೊಂದಿದೆ. ಅತ್ಯದ್ಭುತ ಧ್ವನಿಗಳು ಈ ಹಾಡಿಗೆ ಧ್ವನಿಯಾಗಿದ್ದು, ಭರವಸೆ ಮತ್ತು ಸಮಗ್ರತೆಗೆ ಸ್ಫೂರ್ತಿಯ ಕ್ಷಣವನ್ನಾಗಿ ಇದು ರೂಪಿಸಿದೆ. ಅತ್ಯದ್ಭುತ ಮತ್ತು ಸಕಾಲಿಕ ವೀಡಿಯೋ ಗುಚ್ಛ ಇದಾಗಿದ್ದು, ಎಲ್ಲ ಸಂಕಷ್ಟದ ಸಮಯವನ್ನೂ ಸಹಿಸಿಕೊಳ್ಳುವುದಕ್ಕೆ ಸ್ಫೂರ್ತಿಯಾಗಿದೆ. ಈ ದೃಶ್ಯಗಳನ್ನು ದೇಶದ ವಿವಿಧ ಭಾಗಗಳಲ್ಲಿ ಪ್ರತ್ಯೇಕವಾಗಿ ಸೆರೆಹಿಡಿದಿದ್ದರೂ, ವೀಕ್ಷಕರಿಗೆ ಮನೋಹರವಾದ ಭಾವವನ್ನು ನೀಡುತ್ತದೆ.
ಈ ಹಾಡಿನ 50% ಗಳಿಕೆಯನ್ನು, ದೇಶದ ಪ್ರಮುಖ ದತ್ತಿ ಸಂಸ್ಥೆಗಳ ನೆರವಿನಲ್ಲಿ ದೇಶದ ಕೋವಿಡ್ ಪರಿಹಾರಕ್ಕೆ ಮೀಸಲಿಡಲಿದೆ.
ಹಾಡು ಈಗಾಗಲೇ ಎಲ್ಲ ಮಾಧ್ಯಮಗಳಲ್ಲೂ ಲಭ್ಯವಿದೆ - MeriPukaarSuno