ಆಂಧ್ರಪ್ರದೇಶದಲ್ಲಿ ರೈತನಿಗೆ ಸಿಕ್ತಾ 30 ಕ್ಯಾರೆಟ್ ವಜ್ರ!?

ಪೊಲೀಸರಿಂದ ಕರ್ನೂಲ್ ನ ಹಲವೆಡೆ ತನಿಖೆ ಆರಂಭ

 | 
Combing for stones representative Image

ಕರ್ನೂಲ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನ ಜೊನ್ನಗಿರಿ ಪ್ರದೇಶದ ಕೃಷಿ ಭೂಮಿಯಲ್ಲಿ 30 ಕ್ಯಾರೆಟ್ ನ ವಜ್ರ ದೊರೆತಿದೆ. ಈ ವಜ್ರವನ್ನು ರೈತ ಸ್ಥಳೀಯ ವ್ಯಾಪಾರಿಗೆ 1.20 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾನೆ ಎಂದು ದೃಢೀಕರಿಸದ ವರದಿಗಳಿಂದ ತಿಳಿದುಬಂದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ರೈತನಿಗೆ ವಜ್ರ ಸಿಕ್ಕಿರುವುದು ನಿಜ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ಇಂಡಿಯಾ ಟುಡೆ ಟಿವಿಗೆ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಹಿಂದಿನಿಂದಲೂ ಹಲವು ಜನರು ಜೂನ್ ನಿಂದ ನವೆಂಬರ್ ವರೆಗೆ ಪ್ರತೀವರ್ಷ ಬೆಲೆಬಾಳುವ ಕಳ್ಳುಗಳಿಗಾಗಿ ಕರ್ನೂಲ್ ಜಿಲ್ಲೆಯಲ್ಲಿ ಸೇರುತ್ತಾರೆ. ಈ ಪ್ರದೇಶ ಮಂಗಾರು ಮಳೆಯಲ್ಲಿ ಭೂಮಿಯ ಮೇಲ್ಭಾಗದ ಮಣ್ಣು ಕೊಚ್ಚಿ ಹೋಗಿ ಅಮೂಲ್ಯವಾದ ಕಲ್ಲುಗಳನ್ನು ಹೊರಸೂಸುತ್ತದೆ ಎಂದು ಪ್ರಸಿದ್ದಿಯಾಗಿದೆ ಎಂದು ತಿಳಿಸಿದ್ದಾರೆ ಎಂದು ಇಂಡಿಯಾ ಟುಡೆ ಹೇಳಿದೆ.

ಜೊನ್ನಗಿರಿ, ತುಗ್ಗಲಿ, ಮಡ್ಡಿಕೆರಾ, ಪಗಿದಿರರೈ, ಪೆರವಲಿ, ಮಹಾನಂದಿ, ಮತ್ತು ಮಹಾದೇವಪುರಂ ಜಿಲ್ಲೆಗಳಲ್ಲಿ ಮಳೆಯ ನಂತರ ವಜ್ರಗಳಿಗಾಗಿ ಜನರು ಹುಡುಕಾಟ ನಡೆಸುತ್ತಾರೆ ಎಂದು ಎಸ್ಪಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ 2019, 18 ರಲ್ಲೂ ವಜ್ರದ ತುಣುಕುಗಳು ದೊರೆತಿದ್ದವು ಎಂದು ವರದಿ ಮಾಡಲಾಗಿತ್ತು.