ಹೆಚ್ಚು ಮಕ್ಕಳ ಪೋಷಕರಿಗೆ 1ಲಕ್ಷ ರೂ. ಬಹುಮಾನ

ಮಿಜೋರಾಂ ಸಚಿವನಿಂದ ನಗದು ಬಹುಮಾನ ಘೋಷಣೆ

 | 
Mizoram Sports Minister Robert Romawia Royte

ಜನಸಂಖ್ಯೆ ನಿಯಂತ್ರಣಕ್ಕೆ ತರಲು ಭಾರತದ ಹಲವು ರಾಜ್ಯಗಳು ಹಲವು ಕಾನೂನುಗಳನ್ನು ಜಾರಿಗೆ ತರುತ್ತಿವೆ. ಇಂತಹ ಸಂದರ್ಭದಲ್ಲಿ ಮುಜೋರಾಂ ರಾಜ್ಯದ ಸಚಿವರೊಬ್ಬರು ತನ್ನ ಕ್ಷೇತ್ರದಲ್ಲಿ ಹೆಚ್ಚು ಮಕ್ಕಳನ್ನೆತ್ತು ಪೋಷಿಸುವ ಪೋಷಕರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಹೇಳಿದ್ದಾರೆ.

ಜನಸಂಖ್ಯಾಶಸ್ತ್ರದ ಪ್ರಕಾರ ಮಿಜೋ ಜನಾಂಗ ಒಂದು ಸಣ್ಣ ಸಮುದಾಯವಾಗಿದ್ದು, ಇದರ ಬಳವಣಿಗೆಯನ್ನು ಉತ್ತೇಜಿಸುವ ಸಲುವಾಗಿ ಮಿಜೋರಾಂ ಕ್ರೀಡಾ ಸಚಿವ ರಾಬರ್ಟ್ ರೋಮಾವ್ಯ ರೋಯ್ಟೆ ಈ ರೀತಿ ಹೇಳಿದ್ದು, ಆದರೆ, ಕನಿಷ್ಟ ಎಷ್ಟು ಜನ ಮಕ್ಕಳಿರಬೇಕು ಎಂದು ಹೇಳಿಲ್ಲ.

ಅಪ್ಪಂದೀರ ದಿನಾಚರಣೆ ಸಂದರ್ಭ ಬಾನುವಾರ ರೋಯ್ಟೆ ಈ ಬಹುಮಾನವನ್ನು ಘೋಷಿಸಿದ್ದು, ತನ್ನ ಕ್ಷೇತ್ರವಾದ ಐಜ್ವಾಲ್ ಪೂರ್ವ-2ರಲ್ಲಿ ಹೆಚ್ಚು ಮಕ್ಕಳನ್ನು ಪೋಷಿಸುವ ಮಹಿಳೆ ಅಥವಾ ಪುರುಷರಿಗೆ ಒಂದು ಲಕ್ಷ ರೂಪಾಯಿಗಳ ಜೊತೆಗೆ ಬಹುಮಾನ ಪತ್ರ ಮತ್ತು ಟ್ರೋಪಿಯನ್ನು ನೀಡುವುದಾಗಿ ಹೇಳಿದ್ದಾರೆ.

ಈ ಬಹುಮಾನದ ಮೊತ್ತವನ್ನು ರೋಯ್ಟೆ ಒಡೆತನದ ರೋಯ್ಟೆ ಸನ್ಸ್ ಕನ್ಸ್ಟ್ರಕ್ಷನ್ ಕನ್ಸಲ್ಟೆನ್ಸಿ ಭರಿಸಲಿದೆ. ಮಿಜೋ ಸಮುದಾಯದಲ್ಲಿ ಬಂಜೆತನ ಮತ್ತು ಮಿಜೋ ಜನಸಂಖ್ಯೆ ಇಳಿಕೆಯಾಗುತ್ತಿದೆ  ಹಿನ್ನೆಲೆ ಈ ಕಾಳಜಿ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.