ರಾಜ್ಯದಲ್ಲಿ 1,250 ಬ್ಲಾಕ್ ಫಂಗಸ್ ಪ್ರಕರಣ ಪತ್ತೆ, 39 ಜನ ಸಾವು
ಬೆಂಗಳೂರು ನಗರ ಜಿಲ್ಲೆಯಲ್ಲೇ ಅತೀ ಹಚ್ಚು ಪ್ರಕರಣಗಳು
ಬೆಂಗಳೂರು: ಕೋವಿಡ್ ನಂತರ ಹೆಚ್ಚು ತಲೆನೋವಾಗಿ ಪರಿಣಮಿಸಿರುವ ಬ್ಲಾಕ್ ಪಂಗಸ್ ಕರ್ನಾಟಕ ರಾಜ್ಯದಲ್ಲಿ ಈವರೆಗೆ ಒಟ್ಟು 1,250 ಜನರಲ್ಲಿ ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
1,250 ರೋಗಿಗಳಲ್ಲಿ 1,193 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ, 18 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ, 39 ಜನರು ಬ್ಲಾಕ್ ಫಂಗಸ್ ಗೆ ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೆಲ್ಟ್ ಬುಲೆಟಿನ್ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲೇ ಹಚ್ಚು ಪ್ರಕರಣಗಳು ಕಾಣಿಸಿಕೊಂಡಿದ್ದು, 521 ಜನರು ಬ್ಲಾಕ್ ಫಂಗಸ್ ಗೆ ತುತ್ತಾಗಿದ್ದಾರೆ. 508 ಜನರಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 10 ಜನ ಗುಣಮುಖರಾಗಿದ್ದು, ಈವರೆಗೆ ಮೂರು ಜನ ಮೃತಪಟ್ಟಿದ್ದಾರೆ.
ಬೆಂಗಳೂರು ನಗರದ ನಂತರ ಧಾರವಾಡದಲ್ಲಿ 119 ಬ್ಲಾಕ್ ಫಂಗಸ್ ಪ್ರಕರಣಗಳು ಕಾಣಿಸಿಕೊಂಡಿವೆ. ಆನಂತರದಲ್ಲಿ ಕಲ್ಬುರ್ಗಿ 102, ಬಾಗಲಕೋಟೆಯಲ್ಲಿ 68, ವಿಜಯಪುರದಲ್ಲಿ 57 ಪ್ರಕರಣಗಳು ಕಾಣಿಸಿಕೊಂಡವೆ. ಹೀಗೆ ರಾಜ್ಯಾದ್ಯಂತ 1,250 ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ.