ಈ ಊರಿನ ಜನರಿಗೆ ಸರ್ಕಾರಿ ಆಸ್ಪತ್ರೆ ಅಂದರೆ ಭಯವಂತೆ

ರಸ್ತೆ ಬದಿಯ ಬಯಲು ಆಸ್ಪತ್ರೆಯಲ್ಲೆ ಇವರಿಗೆ ಚಿಕಿತ್ಸೆ

 | 
Field Hospital in Madhya pradesh

ರಸ್ತೆ ಬದಿಯ ಮರದ ಕೆಳಗೆ ಮಲಗಿರುವ ರೋಗಿಗಳು, ಮರಕ್ಕೆ ನೆತು ಹಾಕಿರುವ ಐವಿ ಫ್ಲೂಯ್ಡ್ ಬಾಟಲ್, ಇದು ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲಿಗಳ ಗ್ರಾಮಾಂತ್ರ ಭಾಗಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಪರಿ. ಇಲ್ಲಿ ಪರವಾನಗಿ ಪಡೆಯದ ವೈದ್ಯರು ರೋಗಿಗಳನ್ನು ಸರಿಯಾದ ಔಷಧ ಮತ್ತು ವಿದ್ಯುತ್ ವ್ಯವಸ್ಥೆಗಳಿಲ್ಲದೆ ಮೂಲಭೂತ ಶೈಲಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ,

ಹೆದ್ದಾರಿಯಿಂದ 200 ಮೀಟರ್ ದೂರ ಇರುವ ಕಿತ್ತಳೆ ತೋಟದಲ್ಲಿ ಕೊರೋನಾದ ಪರಿಸ್ಥಿತಿಯಲ್ಲೂ ರೋಗಿಗಳು ಯಾವುದೇ ಸಾಮಾಜಿಕ ಅಂತರವಿಲ್ಲದೆ, ಸರಿಯಾದ ಮಾಸ್ಕ್ ಗಳನ್ನು ಹಾಕಿಕೊಳ್ಳದೆ ಮರದ ಕೆಳಗೆ ಕಾರ್ಡ್ ಬೋರ್ಡ್ ಶೀಟ್ ಗಳ ಮೇಲೆ ಮಲಗಿ ಐವಿ ಫ್ಲೂಯ್ಡ್ ಬಾಟಲ್ ಗಳನ್ನು ಮರಕ್ಕೆ ನೇತು ಹಾಕಿದ ಅಸಮರ್ಪಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ರೀತಿ ಭಯಾನಕವಾಗಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯ ಧನಿಯಕೇಡಿ ಎಂಬ ಗ್ರಾಮದಿಂದ ಹರಿದು ಬಂದಿದೆ. ಇದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಿಂದ ಕೇವಲ 200 ಕಿಲೋಮೀಟರ್ ದೂರದಲ್ಲಿದೆ. ಇದು ಸುಸ್ನೇರ್ ನಿಂದ ಪಿಡವಾ  ಮಾರ್ಗವಾಗಿ ರಾಜಸ್ಥಾನಕ್ಕೆ ಹೋಗುವ ರಸ್ತೆಯಾಗಿದ್ದು, ಸುಮಾರು 10 ಊರಿನ ಜನರು ಇಲ್ಲಿಗೆ ಚಿಕಿತ್ಸೆಗೆ ಬರುತ್ತಾರೆಂದು ತಿಳಿದು ಬಂದಿದೆ.

ಇಲ್ಲಿನ ಜನರಿಗೆ ಸ್ಥಳಿಯ ಸರ್ಕಾರಿ ಆಸ್ಪತ್ರೆಗಳೆಂದರೆ ಭಯ ಇದೆಯಂತೆ. ಸರ್ಕಾರಿ ಆಸ್ಪತ್ರೆಗೆ ಕೊರೋನಾದಿಂದ ಕೋವಿಡ್ ವಾರ್ಡಿಗೆ ದಾಖಲಾದ ಹಲವು ಜನ ರೋಗಿಗಳು ಸಾಯುತ್ತಿದ್ದಾರೆ ಎಂದು ತಿಳಿದಿರುವ ಜನರು ಭಯಗೊಂಡ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಹೋಗಲು ಹೆದರುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆ ಬಾಗದ ವೈದ್ಯಾಧಿಕಾರಿ ಮನೀಶ್ ಕುರಿಲ್ ಇಂತಹ ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸರ್ಕಾರಕ್ಕೆ ಸಮಯವಿದೆ ಎಂದು ಹೇಳಿದ್ದಾರೆ. ನಾವು ಯಾರಿಗಾದರೂ ನೆಗಡಿ, ಶೀತ, ಕೆಮ್ಮು ಇದ್ದರೆ ವೈದ್ಯರುಗಳ ಬಳಿ ತೆರಳಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಬೇಡಿಕೊಂಡಿದ್ದೇವೆ ಆದರೆ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಮುಖ್ಯ ವೈದ್ಯಾಧಿಕಾರಿ ಡಾ.ಸಮಂದರ್ ಸಿಂಗ್ ಮಾಳವೀಯಾ ಅವರು ಪರಿಶೀಲನೆಗಾಗಿ ಒಂದು ತಂಡವನ್ನು ಕಳುಹಿಸಿದ್ದರು, ಆದರೆ, ಅವರು ಪರವಾನಿಗೆ ಪಡೆಯದ ನಕಲಿ ವೈದ್ಯರ ವರುದ್ದ ಯಾವುದೇ ಕೇಸ್ ದಾಖಲಿಸಿಲ್ಲ. ಏಕೆಂದರೆ. ತಂಡ ಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಅಲ್ಲಿ ಯಾವುದೇ ರೋಗಿಗಳು ಮತ್ತು ನಕಲಿ ವೈದ್ಯರು ಇರಲಿಲ್ಲವಂತೆ, ಆ ತಂಡಕ್ಕೆ ಖಾಲಿ ಮೆಡಿಸಿನ್ ಬಾಟಲ್ ಮಾತ್ರ ಸಿಕ್ಕವಂತೆ. ಈ ಹಿಂದೆ ನಾಲ್ಕು ಕೇಸ್ ಗಳನ್ನು ದಾಖಲು ಮಾಡಲಾಗಿದೆ ಎಂದು ಆ ತಂಡ ಹೇಳಿದೆ. ಅಗರ್ ಮಾಲ್ವಾದಲ್ಲಿ ಕಳೆದ 24 ಗಂಟೆಯಲ್ಲಿ 83 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. 492 ಸಕ್ರಿಯ ಪ್ರಕರಣಗಳಿವೆ ಎಂದು ವೈದ್ಯರ ತಂಡ ತಿಳಿಸಿದೆ.