ಸ್ವದೇಶಿ ನಿರ್ಮಿತ ಮೊದಲ ವಿಮಾನವಾಹಕ ಯುದ್ಧನೌಕೆ ಮುಂದಿನ ವರ್ಷ ಲೋಕಾರ್ಪಣೆ
Jun 25, 2021, 16:04 IST
| 
ಕೊಚ್ಚಿ: ಸ್ವದೇಶಿ ನಿರ್ಮಿತ ಮೊದಲ ವಿಮಾನವಾಹಕ ಯುದ್ಧನೌಕೆ ಐಎನ್ ಎಸ್ ವಿಕ್ರಾಂತ್ ಮುಂದಿನ ವರ್ಷದ ವೇಳೆಗೆ ಲೋಕಾರ್ಪಣೆ ಯಾಗಲಿದೆ ಎಂದು ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಕೊಚ್ಚಿಯಲ್ಲಿ ತಿಳಿಸಿದ್ದಾರೆ.
ಕೊಚ್ಚಿನ್ ಬಂದರಿನ ಹಡಗುಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ಭಾರತೀಯ ವಿಮಾನವಾಹಕ ಯುದ್ಧನೌಕೆಯ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಭರತದ ಹೆಮ್ಮೆ ಮತ್ತು ಆತ್ಮನಿರ್ಭರ್ ಬಾರತಕ್ಕೆ ಉತ್ತಮ ನಿದರ್ಶನ ಎಂದು ಬಣ್ಣಿಸಿದ್ದಾರೆ.
ಐಎನ್ಎಸ್ ವಿಕ್ರಾಂತ್ ಸ್ಥಳೀಯ ವಿಮಾನವಾಹಕ ಯುದ್ಧನೌಕೆಯಗಿದ್ದು, ಬಾರತ ಸ್ವಾತಂತ್ರ್ಯದ 75ನೇ ವರ್ಷಗಳ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಿದ್ದು, ಇದು ದೇಶದ ಗೌರವವನ್ನು ಹೆಚ್ಚಿಸಲಿದೆ ಎಂದು ರಾಜ್ ನಾಥ್ ಸಿಂಗ್ ತಿಳಿಸಿದ್ದಾರೆ.