ಭಾರತದ ಕೋವಿಡ್ ವಿರುದ್ಧದ ಹೋರಾಟಕ್ಕೆ ಅಮೆರಿಕದಿಂದ ನಿರಂತರ ನೆರವು

ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಹೇಳಿಕೆ

 | 
ಭಾರತದ ಕೋವಿಡ್ ವಿರುದ್ಧದ ಹೋರಾಟಕ್ಕೆ ಅಮೆರಿಕದಿಂದ ನಿರಂತರ ನೆರವು

ವಾಷಿಂಗ್ಟನ್: ಭಾರತ ಕೋವಿಡ್ ಎರಡನೇ ಅಲೆಗೆ ತತ್ತರಿಸಿದೆ, ಕೋವಿಡ್ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಅಮೆರಿಕ ನಿರಂತರವಾಗಿ ನೆರವು ನಿಡಲಿದೆ ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರು ಭಾರತ ಕೋವಿಡ್ ಪರಿಸ್ಥತಿಯನ್ನು ನಿಭಾಯಿಸಲು 738 ಕೋಟಿ ಮೌಲ್ಯದ ನೆರವು ನೀಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ನಮ್ಮ ಪಾಲುದಾರ ರಾಷ್ಟ್ರಗಳಲ್ಲಿ ಭಾರತ ಪ್ರಮುಖವಾದ ದೇಶವಾಗಿದ್ದು, ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಕೋವಿಡ್ ಹೆಚ್ಚು ಪರಿಣಾಮ ಬೀರಿದೆ. ಈ ಹಿನ್ನೆಲೆ ಯಾವ ದೇಶಗಳಿಗೆ ಯಾವ ರೀತಿಯ ನೆರವು ನೀಡಬೇಕು ಎಂಬುದನ್ನ ನಮ್ಮ ಅಧ್ಯಕ್ಷರು ಚರ್ಚೆ ನಡೆಸುತ್ತಿದ್ದಾರೆ. ಭಾರತಕ್ಕೆ ಅಮೆರಿಕ ನಿರಂತರವಾಗಿ ನೆರವು ನಿಡಲಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಅವರು ಹೇಳಿದ್ದಾರೆ.