ಗಂಡುಮಗುವಿಗೆ ಜನ್ಮ ನೀಡಲಿಲ್ಲ ಅಂಥ ಹೆಂಡತಿ, ಮಕ್ಕಳನ್ನೇ ಬಾವಿಗೆ ತಳಿದ ನೀಚ
ಬಾವಿಗೆ ತಳ್ಳಿ ಪೈಶಾಚಿಕ ದುಷ್ಕೃತ್ಯ ಮೆರೆದ ದುಷ್ಟ ಗಂಡ

ಛತ್ತರ್ಪುರ್: ಗಂಡು ಮಗುವಿಗೆ ಜನ್ಮ ನೀಡಲಿಲ್ಲವೆಂದು ಕೋಪಗೊಂಡ ದುಷ್ಟ ಪತಿಯೋರ್ವ ಹೆಂಡತಿ ಮತ್ತು ಎರಡು ಹೆಣ್ಣುಮಕ್ಕಳನ್ನು ಬಾವಿಗೆ ತಳ್ಳಿ ಪೈಶಾಚಿಕ ದುಷ್ಕೃತ್ಯ ಮೆರೆದಿದ್ದಾನೆ. ಅದೃಷ್ಟವಶಾತ್ ಮಹಿಳೆ ಮತ್ತು ಹಸುಗೂಸು ಸಾವಿನಿಂದ ಪಾರಗಿದ್ದು, ಒಂದು ಹೆಣ್ಣುಮಗು ಬಾವಿ ನೀರಿನಲ್ಲಿ ಮುಳುಗಿ ಅಸುನೀಗಿದೆ.
ಈ ಘಟನೆ ಮಧ್ಯಪ್ರದೇಶದ ಛತ್ತರ್ಪುರ್ ದಲ್ಲಿ ಭಾನುವಾರ ನಡೆದಿದ್ದು, ಹೆಂಡತಿಯನ್ನು ಮತ್ತು ಮಕ್ಕಳನ್ನು ಅತ್ತೆ ಮನೆಯಿಂದ ಕರೆತಂದ ದುಷ್ಟ, ಮನೆಗೆ ಕರೆದುಕೊಂಡು ಹೋಗದೇ ಬೈಕನ್ನು ಬಾವಿಯ ಬಳಿ ನಿಲ್ಲಿಸಿ ಪತ್ನಿ ಮತ್ತು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬಾವಿಗೆ ತಳ್ಳಿದ್ದಾನೆ. ಬಾವಿಗೆ ಬಿದ್ದ ಹೆಂಡತಿ ಮತ್ತು ಮಕ್ಕಳು ಜೀವಕ್ಕಾಗಿ ಅಂಬಲಿಸುತ್ತಿದ್ದರು ಮನಕರಗದ ಪಿಶಾಚಿ ಪತಿ ಬೈಕ್ ಏರಿ ಹೊರಟು ಹೋಗಿದ್ದಾನೆ.
ಮಹಿಳೆ ತನ್ನ ಮೂರು ತಿಂಗಳ ಮಗುವಿನೊಂದಿಗೆ ಸಾಹಸ ಮಾಡಿ ಬಾವಿಯಿಂದ ಮೇಲೆ ಬಂದು ಪ್ರಾಣ ರಕ್ಷಿಸಿಕೊಂಡಿದ್ದು, ಹಿರಿಯ ಮಗಳು ಬಾವಿಯಲ್ಲೇ ಮುಳುಗಿ ಮೃತಪಟ್ಟಿದ್ದಾಳೆ. ಬದುಕುಳಿದ ಪತ್ನಿ ಸ್ಥಳೀಯರ ಸಹಾಯದಿಂದ ಪೊಲೀಸ್ ಠಾಣೆಗೆ ಬಂದು ದುಷ್ಟ ಗಂಡನ ವಿರುದ್ಧ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.