ಬೆಳಗಾವಿಯಲ್ಲಿ ಲಾಕ್ ಡೌನ್ ಗೆ ಡೋಂಟ್ ಕೇರ್.!

ಬೆಳಗಾವಿಯ ಬಹುಪಾಲು ರಸ್ತೆಗಳೂ ಜನರಿಂದ ಫುಲ್ ರಶ್

 | 
ಬೆಳಗಾವಿಯಲ್ಲಿ ಲಾಕ್ ಡೌನ್ ಗೆ ಡೋಂಟ್ ಕೇರ್.!

ಬೆಳಗಾವಿ: ಬೆಳಗಾವಿಯಲ್ಲಿ ಲಾಕ್‍ಡೌನ್ ರಿಲ್ಯಾಕ್ಸ್ ಅವಧಿಯನ್ನು 2 ಗಂಟೆ ವಿಸ್ತರಿಸಿ ಜನದಟ್ಟಣೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ ಮಾರುಕಟ್ಟೆ, ಮುಖ್ಯ ರಸ್ತೆಯಲ್ಲಿ ಜನದಟ್ಟಣೆ ಮಾತ್ರ ಕಡಿಮೆಯಾಗಿಲ್ಲ. ಜನರು ಮಾತ್ರ ಲಾಕ್ ಡೌನ್ ಗೆ ಕೇರ್ ಮಾಡದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಲಾಕ್‍ಡೌನ್ ರಿಲ್ಯಾಕ್ಸ್ ಅವಧಿಯಲ್ಲಷ್ಟೇ ಅಲ್ಲದೆ, ನಂತರವೂ ರಸ್ತೆಗಳು ಬ್ಯೂಸಿಯಾಗುತ್ತಿವೆ. ವಾಹನ ಸಂಚಾರ, ಜನ ಸಂಚಾರಕ್ಕೆ ಬಿಡುವೇ ಇಲ್ಲವೆಂಬಂತೆ ಕಾಣುತ್ತಿದೆ. ಇದು ಲಾಕ್‍ಡೌನ್ ಹೌದೋ, ಅಲ್ಲವೋ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

ಬೆಳಗಾವಿಯಲ್ಲಿ ಜನಸಂಚಾರ ನಿಯಂತ್ರಿಸಲು ಎಷ್ಟೇ ಕಠಿಣ ಕ್ರಮ ಕೈಗೊಂಡರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಬೆಳಗಾವಿಯ ಬಹುಪಾಲು ರಸ್ತೆಗಳಲ್ಲೂ ಜನಸಂಚಾರ, ವಾಹನ ಸಂಚಾರ ಎಂದಿನಂತೆ ಕಾಣುತ್ತಿದೆ. ಇದು ಲಾಕ್‍ಡೌನ್ ಹೌದೋ ಅಲ್ಲವೋ ಎಂಬ ಸಂಶಯ ಮೂಡಿಸುವಂತೆ ಸಂಚಾರ ದಟ್ಟಣೆ ಇದೆ. ಬಹುತೇಕ ಎಲ್ಲ ಪ್ರದೇಶಗಳಲ್ಲೂ ವಾಹನಗಳ ಪಾರ್ಕಿಂಗ್ ದಟ್ಟಣೆ ಇರುತ್ತದೆ.

ಲಾಕ್‍ಡೌನ್ ರಿಲ್ಯಾಕ್ಸ್ ಅವಧಿಯಲ್ಲಂತೂ ಮಾರುಕಟ್ಟೆಯಲ್ಲಿ ಅಷ್ಟೇ ಅಲ್ಲ. ಎಲ್ಲಾ ರಸ್ತೆಯಲ್ಲೂ ಜನಸಾಗರ ಹರಿದು ಬರುತ್ತಿದೆ. ಮಾರುಕಟ್ಟೆಯಲ್ಲಿ ಫುಲ್ ರಶ್ ಆಗುತ್ತಿದೆ. ಎಲ್ಲಿ ನೋಡಿದರೂ ವಾಹನಗಳು, ಜನರು ಕಾಣುತ್ತಿದ್ದಾರೆ. ಹಲವೆಡೆ ಕೋವಿಡ್ ಸುರಕ್ಷತಾ ನಿಯಮಗಳ ಪಾಲನೆಯೇ ಇಲ್ಲ. ಹೀಗಾದರೆ ಮುಂದಿನ ದಿನಗಳು ಇನ್ನಷ್ಟು ಕಠಿಣವಾಗಬಹುದು ಎಂದು ಪ್ರಜ್ಞಾವಂತರು ಹೇಳುತ್ತಿದ್ದಾರೆ.

ಭಾನುವಾರ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ 372 ಕೋವಿಡ್ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿವೆ. ಸರಕಾರ ನಿಖರವಾದ ಅಂಕಿ ಅಂಶಗಳನ್ನು ಬಹಿರಂಗಪಡಿಸದಿದ್ದರೂ ಸ್ಮಶಾನಗಳ ಸಿಬ್ಬಂದಿ ಹೇಳುವಂತೆ ದಿನವೂ ಬೆಳಗಾವಿಯ ಮುಖ್ಯ ಪ್ರದೇಶವೊಂದರಲ್ಲೇ ಕನಿಷ್ಠ 10ರಿಂದ 40ರಷ್ಟು ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. ಜನಸಂಚಾರ ಹೀಗೆಯೇ ಮುಂದುವರಿದರೆ ಕೋವಿಡ್ ನಿಯಂತ್ರಣ ಹೇಗೆ ಎಂಬುದು ಈಗಿನ ಪ್ರಶ್ನೆಯಾಗಿದೆ.