ಕನಸಿನಲ್ಲಿ ಪ್ರತಿನಿತ್ಯ ಮಾಂತ್ರಿಕನಿಂದ ಅತ್ಯಾಚಾರ.!

ಪೊಲೀಸರಿಗೆ ದೂರು ನೀಡಿದ ಬಿಹಾರದ ಮಹಿಳೆ

 | 
Representative Image

ಔರಂಗಾಬಾದ್: ಮಾಂತ್ರಿಕನೊಬ್ಬ ಪ್ರತೀ ದಿನ ನನ್ನ ಕನಸಿನಲ್ಲಿ ಬಂದು ಅತ್ಯಾಚಾರ ನಡೆಸುತ್ತಿದ್ದಾನೆ ಎಂದು ಬಿಹಾರದ ಔರಂಗಾಬಾದ್ ಜಿಲ್ಲೆಯ ಮಹಿಳೆಯೊಬ್ಬಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ವಿಲಕ್ಷಣ ಘಟನೆ ನಡೆದಿದೆ.

ಇದೇ ವರ್ಷದ ಜನವರಿಯಲ್ಲಿ ನನ್ನ ಮಗು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭ ನಾನು ಮಾಂತ್ರಿಕನನ್ನು ಭೇಟಿಯಾಗಿದ್ದೆ, ಗುವಿನ ಆರೋಗ್ಯ ಸಮಸ್ಯೆಯನ್ನು ಪರಿಹರಿಸುವಂತೆ ಕೋರಿದ್ದೆ. ಮಾಂತ್ರಿಕ ಒಂದು ಮಂತ್ರ ಹೇಳಿಕೊಟ್ಟು ಅದನ್ನು ದಿನವೂ ಪಠಿಸುವಂತೆ ಹೇಳಿದ್ದ. ಕೆಲ ದಿನಗಳ ನಂತರ ಮಗುವು ಸಾವನ್ನಪ್ಪಿದೆ.

ನಂತರ ಆಘಾತಕ್ಕೊಳಗಾದ ಮಹಿಳೆ ಮಾಂತ್ರಿಕನಿಂದ ಮಗು ಸಾವಿನ ಬಗ್ಗೆ ವಿವಿರಣೆ ಕೇಳಲು ಮಾಂತ್ರಿಕ ವಾಸವಿದ್ದ ದೇವಸ್ಥಾನಕ್ಕೆ ಬಂದಿದ್ದಾಳೆ. ವೇಳೆ ಆ ಮಾಂತ್ರಿಕ ಆಕೆಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ ಎಂದು ಮಹಿಳೆ ಆರೋಪಿಸಿದ್ದಾಳೆ. ಹಾಗೆ ಕನಸಿನಲ್ಲಿ ತನ್ನ ಮೇಲೆ ಮಾಂತ್ರಿಕ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾನೆ ಮತ್ತು ನಾನು ತನ್ನ ಮೃತ ಮಗನಿಂದ ರಕ್ಷಿಸಲ್ಪಟ್ಟಿದ್ದೇನೆ ಎಂದು ಹೇಳಿದ್ದಾಳೆ.  

ನಂತರ, ಮಾಂತ್ರಿಕ ಪ್ರತಿದಿನವೂ ನನ್ನ ಮೇಲೆ ಅತ್ಯಾಚಾರ ನಡೆಸುವಂತೆ ಕನಸು ಬೀಳುತ್ತಿದೆ ಇದರಿಂದ ನನಗೆ ತೊಂದರೆಯಾಗುತ್ತಿದೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರು ಸ್ವೀಕರಿಸಿದ ನಂತರ ಮಾಂತ್ರಕನನ್ನು ಕರೆಸಿದ ಪೊಲೀಸರು ವಿಚಾರಣೆ ನಡೆಸಿ ಸಕ್ಷ್ಯಾಧಾರದ ಕೊರತೆ ಹಿನ್ನೆಲೆ ಆರೋಪನ್ನು ವಾಪಾಸ್ ಕಳುಹಿಸಿದ್ದಾರೆ.

ಮಹಿಳೆ ಪ್ರಿಮಾ ಫೇಸಿ ಎಂಬ ಮಾನಸಿಕ ಖಾಯಿಸಿಯಿಂದ ಬಳಲುತ್ತಿರಬಹುದು ಎಂದು ಊಹಿಸಿದ ಪೊಲೀಸ್ ಅಧಿಕಾರಿಗಳು ಆಕೆಯ ಸಂಬಂಧಿಕರನ್ನು ಸಂಪರ್ಕಿಸಿ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿ ಚಿಕಿತ್ಸೆ ಕೊಡಿಸುವಂತೆ ಔರಂಗಾಬಾದ್ ಡಿಎಸ್ಪಿ ಸಲಹೆ ನೀಡಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.