ಕೊರೋನಾ ನಿಯಮ ಉಲ್ಲಂಘಿಸಿ ಬಿಜೆಪಿ ಶಾಸಕನಿಂದ ಮದುವೆ ಪಾರ್ಟಿ!

ಮಹಾರಾಷ್ಟ್ರದ ಬಿಜೆಪಿ ಶಾಸಕ ಮಹೇಶ್ ಲಾನ್ಡಗೆ ವಿರುದ್ಧ ದೂರು ದಾಖಲು

 | 
Marriage party By BJP leader in maharastra

ಮುಂಬೈ: ಮಗಳ ಮದುವೆ ಹಿನ್ನೆಲೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ದೊಡ್ಡ ಮದುವೆ ಪಾರ್ಟಿ ಆಯೋಜನೆಯ ಆರೋಪದ ಮೇಲೆ ಮಹಾಷ್ಟ್ರದ ಬಿಜೆಪಿ ನಾಯಕನ ವಿರುದ್ಧ ದೂರು ದಾಖಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ಮಹಾರಾಷ್ಟ್ರದ ಪಿಂಪ್ರಿ-ಚಿಂಚವಾಡ ಬಿಜೆಪಿ ಶಾಸಕ ಮಹೇಶ್ ಲಾನ್ಡಗೆ ಮತ್ತು 60 ಇತರರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 45 ವರ್ಷದ ಬಿಜೆಪಿ ನಾಯಕ ಕುಟುಂಬಸ್ಥರು ಮತ್ತು ಸ್ನೇಹಿತರು ಮದುವೆ ಮುನ್ನ ನಡೆದ ಕಾರ್ಯಕ್ರಮದಲ್ಲಿ ಸಕ್ಕತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾನವಾರ ಚಿತ್ರೀಕರಿಸಲಾಗರುವ ಈ ವಿಡಿಯೋದಲ್ಲಿ ಹಚ್ಚು ಜನರು ಮತ್ತು ಬಿಜೆಪಿ ಶಾಸಕ ಮಹೇಶ್ ಲಾನ್ಡಗೆ ಆಚರಣೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಕೊರೋನಾದ ನಿಯಮಗಳಾದ ಸಾಮಾಜಿಕ ಅಂತರ ಉಲಂಘಿಸಲಾಗಿದೆ. ಜನರು ಮಾಸ್ಕ್ ಧರಿಸಿಲ್ಲ ಮತ್ತು ಜಿಲ್ಲಾಡಳಿತದಿಂದ ಯಾವುದೇ ರೀತಿಯ ಅನುಮತಿ ಪಡೆದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶದಲ್ಲಿ ಕೊರೋನಾದಿಂದ ಹೆಚ್ಚು ಒಡೆತ ತಿಂದಿದ್ದ ಮಹಾರಾಷ್ಟ್ರ ಇದೀಗ ತಾನೆ ಕೋವಿಡ್ ನಿಂದ ವಿಮುಕ್ತಿ ಪಡೆಯುವತ್ತ ಹೆಜ್ಜೆ ಇಟ್ಟಿದೆ. ಕೊರೋನಾ ಮೂರನೇ ಅಲೆಯನ್ನು ತಡೆಯಲು ಮಹಾರಾಷ್ಟ್ರ ಸರ್ಕಾರ ಪೂರ್ವ ತಯಾರಿ ನಡೆಸುತ್ತಿದೆ ಈ ಹಂತದಲ್ಲಿ ಜನಪ್ರತಿನಿಧಿಯೋರ್ವ ಈ ರೀತಿ ಪಾರ್ಟಿ ಮಾಡುತ್ತಿರುವುದು ನಾಚಿಕೆಗೆಟ್ಟ ವಿಚಾರವೇ ಸರಿ.