ಕೊಳೆತುನಾರುತ್ತಿದ್ದ ಟಾಯ್ಲೆಟ್ ಕ್ಲೀನ್ ಮಾಡಿದ ಬಿಜೆಪಿ ಸಂಸದ

ಸಂಸದ ಜನಾರ್ಧನ್ ಮಿಶ್ರ ಸೌಚಾಲಯ ಸ್ವಚ್ಛ ಮಾಡಿರುವ ವಿಡಿಯೋ ವೈರಲ್

 | 
ಕೊಳೆತುನಾರುತ್ತಿದ್ದ ಟಾಯ್ಲೆಟ್ ಕ್ಲೀನ್ ಮಾಡಿದ ಬಿಜೆಪಿ ಸಂಸದ

ಭೋಪಾಲ್: ಮಧ್ಯಪ್ರದೇಶದ ರೇವಾ ಜಿಲ್ಲೆಯ ಕೋವಿಡ್ ಕೇಂದ್ರದಲ್ಲಿ ಬಿಜೆಪಿ ಸಂಸದನೋರ್ವ ಟಾಯ್ಲೆಟ್ ಕ್ಲೀನ್ ಮಾಡಿರುವ ಘಟನೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೌಗಂಜ್ ತಾಲ್ಲೂಕಿನ ಕೋವಿಡ್ ಕೇಂದ್ರಕ್ಕೆ ತಪಾಷಣೆಗಾಗಿ ತೆರಳಿದ್ದ ರೇವಾ ಸಂಸದ ಜನಾರ್ಧನ್ ಮಿಶ್ರ, ತಪಾಷಣೆ ನಡೆಸುವ ವೇಳೆ ಕೊಳೆತು ನಾರುತ್ತಿದ್ದ ಟಾಯ್ಲೆಟ್ ಗಳನ್ನು ಕಂಡು ಕೈಗೆ ಗ್ಲೌಸ್ ಗಳನ್ನು ತೊಟ್ಟು ಯಾರ ಸಹಾಯವನ್ನೂ ಪಡೆಯದೆ ಸ್ವತಃ ತಾವೇ ಸೌಚಾಲಯಗಳನ್ನು ಸ್ವಚ್ಛ ಮಾಡಿದ್ದಾರೆ.

ನಂತರ ಆಸ್ಪತ್ರೆ ಅಧಿಕಾರಿಗಳಿಗೆ ಸೌಚಾಲಯಗಳನ್ನು ಸ್ಚಚ್ಛವಾಗಿಡುವಂತೆ ತಾಕೀತು ಮಾಡಿದ್ದು, ಒಂದು ವೇಳೆ ಮುಂದೆಯೂ ಪರಿಸ್ಥಿತಿ ಹೀಗೆ ಮುಂದುವರಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

2018ರಲ್ಲಿ ಜನಾರ್ಧನ್ ಮಿಶ್ರ ಅವರು ರೇವಾದ ಖಜುಹಾ ಗ್ರಾಮದಲ್ಲಿ ಶಾಲೆಯ ಸೌಚಾಲಯಗಳನ್ನು ಸ್ವಚ್ಛ ಮಾಡಿದ್ದರು. ಹಾಗೆ, ಒಮ್ಮೆ ರೇವಾ ಜಿಲ್ಲೆಯ ಬೀದಿಗಿಳಿದು ಬೀದಿಗಳನ್ನು ಸ್ವಚ್ಛ ಮಾಡಿ ಸಾರ್ವಜನಿಕರ ಗಮನ ಸೆಳೆದಿದ್ದರು.