ಲಾಕ್ಡೌನ್ ಉಲ್ಲಂಘಿಸಿದಕ್ಕೆ ಥಳಿತ, ಕೊನೆಯುಸಿರೆಳೆದ 17 ವರ್ಷದ ಯುವಕ
ಉತ್ತರಪ್ರದೇಶದ ಉನ್ನಾವೋದಲ್ಲಿ ಘಟನೆ
May 22, 2021, 11:30 IST
| 
ಲಕ್ನೋ: ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದಾನೆಂದು 17 ವರ್ಷದ ಯುವಕನನ್ನು ಪೊಲೀಸರು ಎಳೆದುತಂದು ಪೊಲೀಸ್ ಠಾಣೆಯಲ್ಲಿ ಮನಬಂದಂತೆ ಥಳಿಸಿದ್ದಾರೆ. ಥಳಿತದಿಂದ ಯುವಕ ಕೊನೆಯುಸಿರೆಳೆದಿರುವ ಘಟನೆ ಉತ್ತರಪ್ರದೇಶದ ಉನ್ನಾವೋದ ಬಂಗಾರ್ಮೌ ನಗರದ ಭಟ್ ಪುರಿಯಲ್ಲಿ ನಡೆದಿದೆ.
17 ವರ್ಷದ ಯುವಕನನ್ನು ತನ್ನ ಮನೆ ಮುಂದೆ ತರಕಾರಿ ಮಾರುತ್ತಿದ್ದನಂತೆ. ಲಾಕ್ಡೌನ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಯುವಕನನ್ನು ಬಲವಂತವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಎಳೆದು ತಂದ ಪೊಲೀಸರು ಮನಬಂದಂತೆ ಥಳಿಸಿದ್ದಾರೆ. ಥಳಿತಕ್ಕೊಳಗಾದ ಯುವಕನ ಪರಿಸ್ಥಿತಿ ಹದಗೆಟ್ಟಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ತರಲಾಗಿತ್ತು ಅಲ್ಲಿ ಅತ ಸತ್ತಿದ್ದಾನೆಂದು ವೈದ್ಯರು ತಿಳಿಸಿದ್ದಾರೆಂದು ಹುಡುಗನ ಪೋಷಕರು ಹೇಳಿದ್ದಾರೆ.
ಪೊಲೀಸರು ದುರ್ವತನೆಯನ್ನು ಖಂಡಿಸಿದ ಸ್ಥಳೀಯ ಪೊಲೀಸರು ಲಕ್ನೋ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮತ್ತು ಬಾಲಕನ ಕುಟುಂಬಕ್ಕೆ ಪರಿಹಾರ ಕಟ್ಟಿಕೊಡುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಈಗಾಗಲೇ ಆರೋಪಿಗಳಾದ ಒಬ್ಬ ಪೊಲೀಸ್ ಅಧಿಕಾರಿ ಮತ್ತು ಮತ್ತೋರ್ವ ಹೋಮ್ ಗಾರ್ಡ್ ಅನ್ನು ಅಮಾನತ್ತು ಮಾಡಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.