ಪ್ರೇಯಸಿಯ ಜೀವ ಉಳಿಸಲು ತಾನೇ ಜೀವ ಕಳೆದುಕೊಂಡ ಪ್ರಿಯಕರ
ತನ್ನ ಪ್ರೇಯಸಿಯ ಮರ್ಯಾದಾ ಹತ್ಯೆ ತಡೆಯಲು ತಾನೆ ಅಗ್ನಿಗೆ ಆಹುತಿಯಾದ ವಿಜಯ್
ತನ್ನ ಪ್ರೇಯಸಿಯ ಜೀವ ಉಳಿಸಲು ಪ್ರೇಯಸಿಯ ಮನೆ ಎದುರೇ ಪ್ರಿಯಕರನೋರ್ವ ತನ್ನ ಪ್ರಾಣವನ್ನು ತಾನೇ ಕಳೆದುಕೊಂಡಿರುವ ಘಟನೆ ತಮಿಳುನಾಡಿನ ರಾಮನಾಥಪುರಂನಲ್ಲಿ ಶನಿವಾರ ನಡೆದಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ
25 ವರ್ಷದ ವಿಜಯ್ ಮತ್ತು ಅಪರ್ಣ ಶ್ರೀ ಎಂಬ ಇಬ್ಬರು ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು, ವ್ಯಾಸಂಗದ ಕೊನೆಯಲ್ಲಿ ಇವರಿಬ್ಬರೂ ಪ್ರೀತಿಗೆ ಬಿದ್ದಿದ್ದರು, ಎಂಜಿನಿಯರಿಂಗ್ ಮುಗಿಸಿದ ವಿಜಯ್ ಕೆಲಸ ಅರಸಿ ಚೆನ್ನೈಗೆ ದಾವಿಸದ್ದ.
ಇವರಿಬ್ಬರ ಪ್ರೀತಿ ಮುಂದುವರಿದಿತ್ತು, ವಿಷಯವನ್ನು ತಿಳಿದ ಅಪರ್ಣ ಶ್ರೀ ಮನೆಯವರು ಅವಳ ಮಬೈಲನ್ನು ಕಸಿದುಕೊಂಡು ಇವರಿಬ್ಬರ ನಡುವಿನ ಸಂಪರ್ಕಕ್ಕೆ ತಡೆಯೊಡ್ಡಿದ್ದರು. ಇದನ್ನು ತಿಳಿದ ವಿಜಯ್ ತನ್ನ ಸಂಬಂಧಿಕರೊಂದಿಗೆ ನೇರ ಅಪರ್ಣ ಶ್ರೀ ಮನೆಗೆ ಬಂದು ಆಕೆಯನ್ನು ಮದುವೆಯಾಗುವುದಾಗಿ ಅಪರ್ಣಾಳ ಪೋಷಕರನ್ನು ಕೇಳಿದ್ದ.
ಆದರೆ, ಅಪರ್ಣ ಪೋಷಕರು ವಿಜಯ್ ಮದುವೆ ಬೇಡಿಕೆಯನ್ನು ನಿರಾಕರಿಸಿದರು, ವಿಜಯ್ ವಿರುದ್ಧ ಕಾರೈಕುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಜಯ್ ಶನಿವಾರ ಸಂಜೆ ಮತ್ತೆ ಅಪರ್ಣ ಮನೆ ಬಳಿ ದಾವಿಸಿ ಅಪರ್ಣಾಳ ಪೋಷಕರನ್ನು ಕೇಳಿದ್ದಾನೆ. ಆದರೆ, ಅಪರ್ಣಾಳ ಪೋಷಕರು ಆಗಲೂ ವಿಜಯನನ್ನು ನಿರಾಕರಿಸಿ, ಅಪರ್ಣ ಸತ್ತರೆ ಇಡೀ ಸಮಸ್ಯೆ ಪರಿಹಾರವಾಗಲಿದೆ ಎಂದು ಎದರಿಸಿದ್ದಾರೆ ಎಂದು ವರದಿಯಾಗಿದೆ.