ಭೂತ ಹಿಡಿದಿದೆ ಎಂದು ಮಗುವನ್ನು ಬಡಿದು ಕೊಂದ ಮಹಿಳೆಯರು
ಮೂವರು ಮಹಿಳೆಯರನ್ನು ಬಂಧಿಸಿದ ಪೊಲೀಸರು

ಭೂತ ಹಿಡಿದಿದೆ ಎಂದು ಮೂವರು ಮಹಿಳೆಯರು ಏಳು ವರ್ಷದ ಮಗುವನ್ನು ಹೊಡೆದು ಸಾಯಿಸಿದ್ದಾರೆ. ಈ ಘಟನೆ ತಮಿಳುನಾಡಿದ ಕನ್ನಮಂಗಲಂನಲ್ಲಿ ನಡೆದಿದ್ದು, ಈ ಸಂಬಂಧ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಮೂರು ಮಹಿಳೆಯರು ಹುಡುಗನಿಗೆ ಮನಬಂದಂತೆ ಥಳಿಸುತ್ತಿದ್ದಾರೆ ಎಂದು ಯಾರೋ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ, ಪೊಲೀಸರಿಗೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಾಗ ಮೂವರು ಮಹಿಳೆಯರು ಪಜ್ಞಾಹೀನ ಮಗುವಿನ ಬಳಿ ಸುತ್ತುವರಿದಿದ್ದರು, ಅವರು ಮಗುವಿಗೆ ನೀರು ಕುಡಿಸಲು ಯತ್ನಿಸುತ್ತಿದ್ದರು, ದುರಾದೃಷ್ಟವಶಾತ್, ಪೊಲೀಸರು ಸಹಾಯಕ್ಕೆ ಮುಂದಾಗುವುದಕ್ಕೂ ಮುನ್ನ ಮಗು ಸಾವನ್ನಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶವ ಪರೀಕ್ಷೆಗಾಗಿ ಮಗುವಿನ ಮೃತದೇಹವನ್ನು ವೆಲ್ಲೂರಿನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯ್ತು, ನಂತರ ಮಗುವಿನ ತಾಯಿ ಥಿಲಗವತಿ ಮತ್ತು ಆಕೆಯ ಸಹೋದರಿಯರಾದ ಕವಿತಾ ಮತ್ತು ಬಾಕ್ಯಲಕ್ಷ್ಮಿಯನ್ನು ಬಂಧಿಸಲಾಗಿದೆ.
ಮಗುವನ್ನು ತಂತ್ರದ ಮೂಲಕ ಗುಣಪಡಿಸಲು ಹೋಗುತ್ತಿದ್ದೆವು, ಆದರೆ ದಾರಿ ಮಧ್ಯೆ ಫಿಟ್ಸ್ ಬಂದು ಮಗು ಸಾವನ್ನಪ್ಪಿದೆ ಎಂದು ಥಿಲಗವತಿ ಹೇಳಿದ್ದಾರೆ. ಆದ್ರೆ ಮಗುವನ್ನು ಮನಬಂದಂತೆ ಥಳಿಸಿದ್ದಾರೆ ಎಂದು ಈ ಘಟನೆಯನ್ನು ಗಮನಿಸಿದವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸಲಾಗುತ್ತಿದೆ.