3ನೇ ತರಗತಿ ಹುಡುಗಿ ಮೇಲೆ 26ರ ಸೋದರಸಂಬಂಧಿಯಿಂದ ರೇಪ್

ಉತ್ತರಪ್ರದೇಶ ರಾಜ್ಯದ ಗ್ರಾಮವೊಂದರಲ್ಲಿ ಘಟನೆ

 | 
Representative Image

ಉತ್ತರಪ್ರದೇಶದ ಲಾಖಿಂಪುರ್ ಖೇರಿಯಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ 26 ವರ್ಷದ ವವಾಹಿತ ಸೋದರಸಂಬಂಧಿಯೋರ್ವ ಅತ್ಯಾಚಾರವೆಸಗಿರುವ ಪೈಶಾಚಿಕ ಕೃತ್ಯವೊಂದು ನಡೆದಿದೆ.

ಬಾಲಕಿ ತನ್ನ ಮನೆಯ ಬಳಿ ಆಟವಾಡುತ್ತಿರುವಾಗ ಆಕೆಯ ಬಳಿಗೆ ಧಾವಿಸಿದ ನೀಚ ಸಹೋದರ ಸಂಬಂಧಿಯೊಬ್ಬ ಆಕೆಯನ್ನು ಬಲವಂತವಾಗಿ ತನ್ನ ಮನೆಗೆ ಎಳೆದೋಯ್ದು ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಪೊಲೀಸರು ಅತ್ಯಾಚಾರಿಯ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಮತ್ತು ಸಂತ್ರಸ್ಥ ಬಾಲಕಿ ತಾಯಿಯ ಎದುರು ಸಂತ್ರಸ್ಥ ಬಾಲಕಿಯ ಹೇಳಿಕೆಯನ್ನು ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಡುತ್ತಿದ್ದಂತೆ ಅತ್ಯಾಚಾರಿಯು ಸಹ ಅತ್ಯಾಚಾರ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.