ಸಿಎಂ ದಲಿತ ಸಬಲೀಕರಣ ಕಾರ್ಯಕ್ರಮದಡಿ 10 ಲಕ್ಷ ರೂಪಾಯಿಗಳ ಹಣಕಾಸು ನೆರವು

ಅರ್ಹ ಫಲಾನುಭವಿಗಳಿಗೆ ಹಣಕಾಸು ನೆರವು ಘೋಷಿಸಿದ ತೆಲಂಗಾಣ ಸಿಎಂ ಕೆ.ಸಿ.ಆರ್

 | 
K. Chandrashekar rao telangana CM

ಹೈದರಾಬಾದ್: ಅರ್ಹ ದಲಿತ ಫಲಾನುಭವಿಗಳಿಗೆ ಮುಖ್ಯಮಂತ್ರಿ ದಲಿತ ಸಬಲೀಕರಣ ಕಾರ್ಯಕ್ರಮದಡಿ 10 ಲಕ್ಷ ರೂಪಾಯಿಗಳ ಹಣಕಾಸು ನೆರವು ನೀಡುವುದಾಗಿ ತೆಲಂಗಾಣದ ಸರ್ಕಾರ ಘೋಷಿಸಿದೆ.

1,200 ಕೋಟಿ ರೂಪಾಯಿಗಳ ಆಯವ್ಯಯದ ಮೊದಲ ಕಂತಿನಲ್ಲಿ, ತೆಲಂಗಾಣದ ರಾಜ್ಯದ ಪ್ರತೀ ಕ್ಷೇತ್ರದ 100 ಕುಟುಂಬಗಳನ್ನು ಈ ಯೋಜನೆ ಒಳಗೊಳ್ಳಲಿದೆ.

ಭಾನುವಾರ ಸರ್ವ ಪಕ್ಷಗಳ ಸಭೆ ನಡೆಸಿದ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮುಖ್ಯಮಂತ್ರಿ ದಲಿತ ಸಬಲೀಕರಣ ಕಾರ್ಯಕ್ರಮವನ್ನು ಅಂತಿಮಗೊಳಿಸಿದ್ದಾರೆ. ಈ ಸಭೆಯಲ್ಲಿ ಹಲವು ದಲಿತ ಸಂಸದರು, ಶಾಸಕರು ಮತ್ತು ಹಲವು ದಲಿತ ನಾಯಕರು ಭಾಗಿಯಾಗಿದ್ದರು.

ಮುಖ್ಯಮಂತ್ರಿ ದಲಿತ ಸಬಲೀಕರಣ ಕಾರ್ಯಕ್ರಮ ದಲಿತರ ಬೆಳವಣಿಗೆಯನ್ನು ಬದಲಿಸಹುದು ಎಂದು ಟಿಆರ್ ಎಸ್ ಸರ್ಕಾರ ಹೇಳಿದೆ. ಈ ಯೋಜನೆಯ ಮೂಲಕ ರೈತು ಬಂಧು ಯೋಜನೆಯಂತೆ ಆಯ್ಕೆಯಾದ ದಲಿತ ಫಲಾನುಭವಿಗಳಿಗೆ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದಲಿತರು ಸಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದಾರೆ, ಈ ಪ್ರವೃತ್ತಿಯನ್ನು ನಾವು ದೂರ ಮಾಡಬೇಕು. ಸಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ದಲಿತರ ಸಮಸ್ಯೆಗಳನ್ನು ಹೋಗಲಾಡಿಸಲು ನಮ್ಮ ಸರ್ಕಾರ ಹಂತಹಂತವಾಗಿ ಕ್ರಿಯಾ ಯೋಜನೆಯನ್ನು ರೂಪಿಸಲಿದೆ ಎಂದು ತೆಲಂಗಾಣ ಸಿಎಂ ಹೇಳಿದ್ದಾರೆ.

ನಾವು ಪರಿಶಿಷ್ಟಜಾತಿ ಭೂಮಿಯ ಕುರಿತು ಅಂಕಿಅಂಶಗಳನ್ನು ಸಿದ್ಧಪಡಿಸಬೇಕು ಮತ್ತು ಜಾಗೃತಿಗಾಗಿ ಸ್ಥರಗೊಳಿಸಬೇಕು. ಅಗತ್ಯವಿದ್ದಲ್ಲಿ, ರಾಜ್ಯದ ಪರಿಶಿಷ್ಟರ ಭೂಮಿಯ ಅಂಕಿಅಂಶಗಳನ್ನು ಕಲೆ ಹಾಕಲು ರಾಜ್ಯದ ಯಾಂತ್ರಿಕ ಶಕ್ತಿಯನ್ನು 10ರಿಂದ 15 ದಿನಗಳ ಕಾಲ ಬಳಸಿಕೊಳ್ಳಲಾಗುತ್ತದೆ. ಇದಕ್ಕಾಗಿ ಮುಂದಿನ ಮೂರ್ನಾಲ್ಕು ವರ್ಷಗಳ ಕಾಲ 35,000 ದಿಂದ 40,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸರ್ಕಾರ ಸಿದ್ಧವಿದೆ. ಈ ಕುರಿತು ನಾವು ಏಕಿಕೃತ ಕ್ರಿಯಾ ಯೋಜನೆಯನ್ನು ತೆಗೆದುಕೊಳ್ಳಬೇಕಾಗಿದೆ ಎಂದು ತೆಲಂಗಾಣ ಸಿಎಂ ಕೆ.ಸಿ.ಆರ್ ತಿಳಿಸಿದ್ದಾರೆ.

-ಇಂಡಿಯಾ ಟುಡೆ ವರದಿ