ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ಗೃಹ ಬಳಿಕೆ ಎಲ್ಪಿಜಿ ಸಿಲಿಂಟರ್ ನ ಬೆಲೆಯಲ್ಲಿ ಇಳಿಕೆ ಇಲ್ಲ

 | 
Representative Image

ನವದೆಹಲಿ: ದೇಶದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ಬಾರಿ ಇಳಿಕೆ ಮಾಡಿವೆ. ಆದರೆ ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೆ ಇಳಿಕೆ ಮಾಡಿ ಬದಲಾವಣೆ ಮಾಡಿಲ್ಲ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ 19ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬಳಕೆದಾರರ ಸಿಲಿಂಡರ್ ಗಳ ಬೆಲಯನ್ನು 122 ರೂಪಾಯಿಗಳಷ್ಟು ಕಡಿತ ಮಾಡಿದೆ. ಈ ಹಿಂದೆ 1595.50 ಇದ್ದ ಬೆಲೆ ಜೂನ್ 1 ರಿಂದ 1473.50 ರೂಪಾಯಿಗಳಿಗೆ ಸಿಗಲಿದೆ. ಇದರಿಂದ ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ಸ್ವಲ್ಪ ನಿರಾಳ ಸಿಕ್ಕಿದೆ.

ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದ್ದರಿಂದ ಜನಸಾಮಾನ್ಯರು ಎಲ್ಪಿಜಿ ಸಿಲಿಂಡರ್ ಕೊಳ್ಳಲು ಹೆಚ್ಚಿನ ಬೆಲೆ ತೆರುವುದನ್ನು ಮುಂದುವರಿಸಬೇಕಾಗಿದೆ.

ಮೇ ತಿಂಗಳಿನಲ್ಲಿ ತೈಲ ಕಂಪನಿಗಳು ಎಲ್ಪಿಜಿ ಅನಿಲ ದರವನ್ನು ಪ್ರತಿ ಸಿಲಿಂಡರ್ ಗಳ ಮೇಲೆ 45 ರೂಪಾಯಿಗಳನ್ನು ಕಡಿತ ಮಾಡಿದ್ದವು. ವಿವಿಧ ರಾಜ್ಯಗಳಲ್ಲಿ ಎಲ್ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ವಿವಿಧ ರೀತಿಯಲ್ಲಿದ್ದು, ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ದರ 1473.5 ರೂಗೆ ಇಳಿಕೆಯಾಗಿದೆ ಮುಂಬೈನಲ್ಲಿ 1422.5 ರೂ, ಕೋಲ್ಕತಾದಲ್ಲಿ 1544.5 ರೂ, ಚೆನ್ನೈನಲ್ಲಿ 1603.0ರೂಪಾಯಿಗಳಿಗೆ ಇಳಿಕೆಯಾಗಿದೆ.