ಶಿವನ ಆಕ್ಷೇಪಾರ್ಹ ಸ್ಟಿಕ್ಕರ್ ಬಳಕೆ, ಇನ್ಸ್ಟಾಗ್ರಾಂ ವಿರುದ್ಧ ದೂರು

ಕ್ಷಮೆ ಕೇಳುವಂತೆ ಬಿಜೆಪಿ ನಾಯಕನ ಒತ್ತಾಯ

 | 
Lord Shiva holding a glass of wine and mobile phone Image

ನವದೆಹಲಿ: ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಶಿವನ ಸ್ಟಿಕ್ಕರ ಗಳ ಆಕ್ಷೇಪಾರ್ಹವಾಗಿ ಬಳಸಲಾಗಿದೆ ಎಂದು ಆರೋಪಿಸಿ ಇನ್ಸ್ಟಾಗ್ರಾಂನ ಸಿಇಓ, ಮತ್ತು ಇತರೆ ಇನ್ಸ್ಟಾಗ್ರಾಂ ಅಧಿಕಾರಿಗಳ ವಿರುದ್ಧ ಬಿಜೆಪಿ ನಾಯಕ ಮನೀಷ್ ಸಿಂಗ್ ದೆಹಲಿಯ ಪಾರ್ಲಿಮೆಂಟ್ ಬೀದಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.   

ಇನ್ಸ್ಟಾಗ್ರಾಂ ನಲ್ಲಿ ಶಿವ ಒಂದು ಕೈಯಲ್ಲಿ ವೈನ್ ಗ್ಲಾಸ್ ಮತ್ತು ಇನ್ನೊಂದು ಕೈಯಲ್ಲಿ ಮೊಬೈಲ್ ಪೋನ್ ಹಿಡಿದಿರುವ ಸ್ಟಿಕ್ಕರ್ ಅನ್ನು ತೋರಿಸಲಾಗುತ್ತಿದೆ ಇದರು ಆಕ್ಷೇಪಾರ್ಹ ಎಂದು ಆರೋಪಿಸಿ ಬಿಜೆಪಿ ನಾಯಕ ಮನೀಷ್ ಸಿಂಗ್ ದೆಹಲಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಸ್ಟಿಕ್ಕರ್ ಇನ್ಸ್ಟಾಗ್ರಾಂ ಸ್ಟೋರಿ ವಿಭಾಗದಲ್ಲಿ ಕಾಣಿಸಿಕೊಂಡಿದ್ದು, ಇದು ಹಿಂದೂಗಳ ಭಾವನೆಗೆ ದಕ್ಕೆ ತಂದಿದೆ ಎಂದು ಎಂದು ಆರೋಪಿಸಿ ಇನ್ಸ್ಟಾಗ್ರಾಂ ವಿರುದ್ಧ ದೂರು ನೀಡಿಲಾಗಿದೆ.

ಹಾಗೆ, ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಮನೀಷ್ ಸಿಂಗ್, ಅಕ್ಷೇಪಾರ್ಹ ಸ್ಟಿಕ್ಕರ್ ತೆಗೆದುಹಾಕುವಂತೆ ಮತ್ತು ಈ ತಪ್ಪಿಗೆ ಕ್ಷಮೆ ಕೇಳುವಂತೆ ಆಗ್ರಹಿಸಿ ಇನ್ಸ್ಟಾಗ್ರಾಂ ಕಚೇರಿ ಎದುರು ಧರಣಿ ಹಮ್ಮಿಕೊಂಡಿರುವುದಾಗಿ ಹೇಳಿದ್ದಾರೆ.