ದೇಶದಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖ, ಹೆಚ್ಚಿದ ಚೇತರಿಕೆ ಪ್ರಕರಣಗಳು

24 ಗಂಟೆ ಅವಧಿಯಲ್ಲಿ 1,52,734 ಕೋವಿಡ್ ಪ್ರಕರಣಗಳು ದಾಖಲಾಗಿವೆ

 | 
Representative Image

ನವದೆಹಲಿ: ದೇಶದಲ್ಲೊ ಮಹಾಮಾರಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ಕಡಿಮೆಯಾಗುತ್ತಿದೆ. ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಯ ಅವಧಿಯಲ್ಲಿ 1,52,734 ಕೋವಿಡ್ ಪ್ರಕರಣಗಳು ದಾಖಲಾಗಿವೆ. 3,128 ಮಂದಿ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.

ಕೋವಿಡ್ ಸೋಂಕಿತರ ಚೇತರಿಕೆ ಪ್ರಮಾಣ ಹೆಚ್ಚಳಗೊಂಡಿದ್ದು, ಸದ್ಯ ದೇಶದಲ್ಲಿ 20,26,092 ಸಕ್ರಿಯ ಪ್ರಕರಣಗಳು ಇವೆ. ದೇಶದಲ್ಲಿ ಈ ವರೆಗೆ 2,80,47,534 ಜನರಿಗೆ ಸೋಂಕು ತಗುಲಿದೆ. ಒಟ್ಟು ಸಾವಿನ ಸಂಖ್ಯೆ 3,29,100ಕ್ಕೆ ತಲುಪಿದೆ.

ತಮಿಳುನಾಡಿನಲ್ಲಿ 28,864 ಪ್ರಕರಣಗಳು, ಕರ್ನಾಟಕದಲ್ಲಿ 20,378 ಪ್ರಕರಣಗಳು, ಕೇರಳದಲ್ಲಿ 19,894 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 18,600, ಆಂಧ್ರಪ್ರದೇಶದಲ್ಲಿ 13,400 ಪ್ರಕರಣಗಳು ಕಂಡುಬಂದಿವೆ. ಈವರೆಗ 21,31,54,129 ಮಂದಿಗೆ ಲಸಿಕೆ ನೀಡಿಲಾಗಿದೆ.