ದೇಶದಲ್ಲಿ ಕೋರೋನಾ ಸೋಂಕು ಇಳಿಮುಖ, ಸಾವಿನ ಸಂಖ್ಯೆಯಲ್ಲೂ ಇಳಿಕೆ

ಕಳೆದ 24 ಗಂಟೆಯಲ್ಲಿ 1.27 ಕೊರೋನಾ ಪ್ರಕರಣಗಳು ದಾಖಲು

 | 
Representative Image

ನವದೆಹಲಿ: ದೇಶದಲ್ಲಿ ಕಳೆದ 19 ದಿನಗಳಿಂದ ಕೊರೋನಾ ಸೋಂಕು ಇಳಿಮುಖವಾಗುತ್ತಿದೆ. ಕಳೆದ 24 ಗಂಟೆಯಲ್ಲಿ 1.27 ಕೊರೋನಾ ಪ್ರಕರಣಗಳು ದಾಖಲಾಗಿವೆ. ಇದು ದೇಶದಲ್ಲಿ ಕಳೆದ 54 ದಿನಗಳ ದಾಖಲಾದ ಕನಿಷ್ಠ ಪ್ರಕರಣಗಳಾಗಿವೆ. ಎಂದು ಕೇಂದ್ರ ಆರೋಗ್ಯ ಮಂತ್ರಾಲಯದಿಂದ ತಿಳಿದುಬಂದಿದೆ.

ಕೋವಿಡ್ ಸೋಂಕು ಮತ್ರವಲ್ಲದೆ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಮುಖ ಕಂಡು ಬಂದಿದೆ. ಕಳೆದ 24 ಗಂಟೆಯಲ್ಲಿ 2,795 ಮಂದಿ ಮೃತಪಟ್ಟಿದ್ದಾರೆ. 2,55,287 ಜನರು ಗುಣಮುಖರಾಗಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 20 ಲಕ್ಷಕ್ಕಿಂತ ಕಡಿಮೆಯಾಗಿದ್ದು, 18,95,520 ಸಕ್ರಿಯ ಪ್ರಕರಣಗಳು ದೇಶದಲ್ಲಿವೆ.  

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,81,75,044ಕ್ಕೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 3,31,895ಕ್ಕೆ ತಲುಪಿದೆ. ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 2,59,47,629ಕ್ಕೆ ತಲುಪಿದೆ.

ತಮಿಳುನಾಡಿನಲ್ಲಿ 27,936 ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ, ಕರ್ನಾಟಕದಲ್ಲಿ 16,607 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 15,077 ಪ್ರಕರಣಗಳು, ಕೇರಳದಲ್ಲಿ 12,300 ಪ್ರಕರಣಗಳು, ಪಶ್ಚಿಮಬಂಗಾಳದಲ್ಲಿ 10,137 ಪ್ರಕರಣಗಳು ದಾಖಲಾಗಿವೆ.