ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ: ಸಿಎಂ ಯಡಿಯೂರಪ್ಪ

ಲಾಕ್ ಡೌನ್ ಗೆ ವಿಶೇಷ ಪ್ಯಾಕೇಜ್ ಘೋಷಣೆ ಚಿಂತನೆ ಇಲ್ಲ

 | 
ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ: ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಅವಧಿಗೆ ನೆರೆ ರಾಜ್ಯಗಳ ಸರ್ಕಾರಗಳು ಘೋಷಿಸಿರುವಂತೆ ನಮ್ಮ ರಾಜ್ಯದಲ್ಲಿ ಯಾವ ವಿಶೇಷ ಪ್ಯಾಕೇಜ್ ಗಳನ್ನು ಘೋಷಣೆ ಮಾಡುವ ಚಿಂತನೆ ನಮ್ಮಲ್ಲಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಗೃಹ ಕಚೇರಿ ಕಾವೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದು, ನಮ್ಮ ರಾಜ್ಯ ಇಡೀ ದೇಶದಲ್ಲೇ ಅತೀ ಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿದೆ. ಹಾಗಾಗಿ, ಜನ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಂಡು ಲಾಕ್ ಡೌನ್ ನಿಯಮಗಳನ್ನು ಪಾಲಿಸಬೇಕು ಎಂದರು.

ಜನರ ಸಹಕಾರ ಇದ್ದಾಗ ಮಾತ್ರ ಸೋಂಕು ನಿಯಂತ್ರಣ ಸಾಧ್ಯ ಆದ್ದರಿಂದ ಪೊಲೀಸರಿಗೆ ಲಾಠಿ ಬೀಸಲು, ವಾಹನ ಸೀಜ್ ಮಾಡಲು ಅವಕಾಶ ನೀಡಬಾರದು ಎಂದು ಮನವಿ ಮಾಡಿಕೊಂಡರು.

ಕೇಂದ್ರದ ನಾಯಕರ ಜೊತೆ ನಾನು ಸಂಪರ್ಕದಲ್ಲಿದ್ದು, ಪ್ರಧಾನಿ ಮೋದಿ ಜೊತೆ ಮಾತನಾಡಿದ್ದೇನೆ. ದೆಹಲಿಗೆ ಹೋಗುವ ಅವಶ್ಯಕತೆಯಿಲ್ಲ. ಜೆಮ್‌ಶೆಡ್‌ಪುರದಿಂದ ಆಕ್ಸಿಜನ್ ಬಂದಿದೆ. ಕೇಂದ್ರದಿಂದ ಎಲ್ಲಾ ಸಹಕಾರ ಸಿಗುತ್ತಿದೆ ಎಂದರು.