ಕೊರೋನಾ ವೈರಸ್ ಒಂದು ಜೀವಿ ಅದಕ್ಕೂ ಬದುಕುವ ಹಕ್ಕಿದೆ ಎಂದು ಅಪಹಾಸ್ಯ

ಜಾರ್ಖಾಂಡ್ ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಟ್ರೋಲ್ ಮಾಡಿದ ನೆಟ್ಟಿಗರು

 | 
ಕೊರೋನಾ ವೈರಸ್ ಒಂದು ಜೀವಿ ಅದಕ್ಕೂ ಬದುಕುವ ಹಕ್ಕಿದೆ ಎಂದು ಅಪಹಾಸ್ಯ

ಡೆಹ್ರಾಡೂನ್: ಕೊರೋನಾ ವೈರಸ್ ಕೂಡ ಒಂದು ಜೀವಿ, ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕ ಹಾಗೂ ಜಾರ್ಖಾಂಡ್ ನ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಅಪಹಾಸ್ಯಕ್ಕೀಡಾಗಿದ್ದಾರೆ.

ಖಾಸಗಿ ನ್ಯೂಸ್ ಚಾನೆಲ್ ಗೆ ಸಂದರ್ಶನ ನೀಡುವ ವೇಳೆ ಹೀಗೆ ಮಾತನಾಡಿರುವ ಅವರು, ತಾತ್ವಿಕ ದೃಷ್ಟಿಯಿಂದ ನೋಡುವುದಾದರೆ ಕೊರೋನಾ ಸಹ ಒಂದು ಜೀವಿ, ಉಳಿದ ಜೀವಿಗಳಂತೆ ಅದಕ್ಕೂ ಬದುಕುವ ಹಕ್ಕಿದೆ. ಆದರೆ, ಮನುಷ್ಯರು ಬುದ್ಧಿವಂತರು ಎಂದು ಭಾವಿಸಿ ಅದನ್ನು ಕೊನೆಗಾಣಿಸಲು ಯತ್ನಿಸುತ್ತಿದ್ದಾರೆ. ಹಾಗಾಗಿ, ಕೊರೋನಾ ವೈರಸ್ ನಿರಂತರವಾಗಿ ರೂಪಾಂತರಗೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಅದಾಗ್ಯೂ ಮನುಷ್ಯ ಬಿರುಸಾಗಿ ಸಾಗಿ ವೈರಸ್ ನಿಂದ ಸುರಕ್ಷಿತವಾಗಿರಬೇಕಿದೆ ಎಂದು ಹೇಳಿದ್ದಾರೆ. ಕೊರೋನಾ ವೈರಸ್ ದೇಶದಲ್ಲಿ ಹತೋಟಿಗೆ ಸಿಗದೆ ಹಬ್ಬುತ್ತಿರುವ ವೇಳೆ ಬಿಜೆಪಿ ಮುಖಂಡ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ರೋಲಿಗರ ಟ್ರೋಲ್ ಗಳಿಗೆ ತುತ್ತಾಗಿದೆ

http://