ಮೈಸೂರ-ಕೊಡಗು ಸಂಸದ ಪ್ರತಾಪ್ ಸಿಂಹಗೆ ಕೋವಿಡ್ ದೃಢ

ಸಂಪರ್ಕದಲ್ಲಿದ್ದವರು ಪರೀಕ್ಷೆಗೊಳಗಾಗಿ, ಜಾಗೃತರಾಗಿರಿ ಎಂದು ಸಂಸದ ಟ್ವೀಟ್

 | 
ಮೈಸೂರ-ಕೊಡಗು ಸಂಸದ ಪ್ರತಾಪ್ ಸಿಂಹಗೆ ಕೋವಿಡ್ ದೃಢ

ಬೆಂಗಳೂರು: ಮೈಸೂರ-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಕೋವಿಡ್ ಸೋಂಕು ತಗುಲಿದೆ. ಈ ವಿಷಯವನ್ನು ಖುದ್ದು ಸಂಸದ ಪ್ರತಾಪ್ ಸಿಂಹ ಅವರೆ ತಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟ್ ಮೂಲಕ ಹಂಚಿಕೊಂಡಿದ್ದಾರೆ.

ನಾನು ಶ್ರೀ ಶಾಂತವೇರಿ ಗೌಡ ಆಸ್ಪತ್ರೆಗೆ ಕೋವಿಡ್ ರೋಗಿಗಳನ್ನು ನೋಡಲು ಹೋಗಿದ್ದೆ ಈ ವೇಳೆ ನಾನು ರ್ಯಾಪಿಡ್ ಆಂಟಿಜನ್ ಟೆಸ್ಟ್ ಗೆ ಮಾಡಿಸಿದೆ ಅದರಲ್ಲಿ ನೆಗೆಟಿವ್ ಎಂದು ಬಂದಿತ್ತು.

ಆದರೂ, ನಾನು ಆರ್ ಟಿಪಿಸಿಆರ್ ಟೆಸ್ಟ್ ಗೆ ಹೋಗಿದ್ದೆ ನನ್ನ ದೇಹದಲ್ಲಿ ಯಾವುದೇ ಕೋವಿಡ್ ಸೋಂಕಿನ ಗುಣಲಕ್ಷಣ ಕಂಡಯ ಬಾರದಿದ್ದರೂ ಟೆಸ್ಟ್ ನಲ್ಲಿ ಸೋಂಕು ಇರುವುದು ದೃಢವಾಗಿದೆ. ಆದ್ದರಿಂದ ನನ್ನೊಂದಿಗೆ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಜಾಗೃತರಾಗಿರಿ ಎಂದು ತಿಳಿಸಿದ್ದಾರೆ.